ರಾಣೆಬೆನ್ನೂರ

ಬೆಳೆಹಾನಿ ಮನನೊಂದ ರೈತರಿಬ್ಬರು ನೇಣಿಗೆ ಶರಣು

ಬೆಳೆಹಾನಿ ಮನನೊಂದ ರೈತರಿಬ್ಬರು ನೇಣಿಗೆ ಶರಣು

ರಾಣೀಬೆನ್ನೂರು.ನವೆಂಬರ್.5 ಬೆಳೆದ ಬೆಳೆ ಕೈಗೆ ಬಾರದೆ ಅಪಾರ ನಷ್ಟ ಅನುಭವಿಸಿ ಸಾಲದಿಂದ ಮಾನಸಿಕ ನೆಮ್ಮದಿ ಕಳೆದುಕೊಂಡಿದ್ದ ಯುವ ರೈತರೀರ್ವರು ತಾಲೂಕಿನ ನಿಟ್ಟೂರು ಒಂದೇ ಗ್ರಾಮದಲ್ಲಿ ನೇಣಿಗೆ ಶರಣಾಗಿ ಸಾವು ಕಂಡ ದುರಂತ ಘಟನೆ ಬುಧವಾರ ರಾತ್ರಿ ಮತ್ತು ಗುರುವಾರ ಬೆಳಗಿನ ಜಾವ ಸಂಭವಿಸಿದ್ದು ಘಟನೆಯಿಂದಾಗಿ ಗ್ರಾಮದ ಜನರು ಮತ್ತು ಕೃಷಿಕರು ಭಯಬೀತರಾಗಿರುವುದು ಕಂಡುಬಂದಿತು. ಮಹೇಶ ಬಸಪ್ಪ ಪರಸಳ್ಳೆರ(38) ಈತನು ರಾತ್ರಿ 11ರ ಸಮಯದಲ್ಲಿ ನೇಣಿಗೆ ಶರಣಾಗಿದ್ದರೆ ಇನ್ನೋರ್ವ ರೈತ ಮಂಜಪ್ಪ ಬಸಪ್ಪ ಕರಿಯಪ್ಪನವರ(38) ಈತನು ಗುರುವಾರ ಬೆಳಗಿನ ಜಾವ ನೇಣಿಗೆ ಕೊರಳೊಡ್ಡಿರುವುದಾಗಿ ಪ್ರಕರಣ ದಾಖಲಿಸಿಕೊಂಡಿರುವ ಪೋಲಿಸರು ತಿಳಿಸಿದ್ದಾರೆ. 

ಮಹೇಶ ಈತನಿಗೆ 2 ಎಕರೆ 2 ಗುಂಟೆ ಜಮೀನಿದ್ದು ಕೃಷಿಗಾಗಿ ಬ್ಯಾಂಕಿನಲ್ಲಿ 2 ಲಕ್ಷ ಸಾಲ ಮಾಡಿದ್ದಲ್ಲದೆ ಇತರೆ ಕೈಗಡವಾಗಿ 4 ಲಕ್ಷ ಸಾಲ ಪಡೆದಿದ್ದನೆಂದು ಹೇಳಲಾಗಿದ್ದು ಸಾಲದ ಬಾದೆಯಿಂದ ಬಳಲುತ್ತಿದ್ದು ಇದಲ್ಲದೆ ತಾನು ಬೆಳೆದ ಬೆಳೆಯನ್ನು ಕೈಗೆ ಬಾರದೆ ಇದ್ದುದರಿಂದ ಮನನೊಂದ ಈತನು ಸಾವಿಗೆ ಶರಣಾಗಿದ್ದಾನೆ. ಈತನ ಸಾವಿನಿಂದ ಪತ್ನಿ ಪುಷ್ಪಾ ಇಬ್ಬರು ಪುತ್ರಿಯರು ಅನಾಥರಾಗಿದ್ದಾರೆ. ಮತ್ತು ಇನ್ನೋರ್ವ ರೈತ ಮಂಜಪ್ಪನಿಗೆ 3 ಎಕರೆ 28 ಗುಂಟೆ ಇದ್ದು ಬ್ಯಾಂಕಿನಿಂದ 3ಲಕ್ಷ ಸಾಲ ಪಡೆದಿದ್ದು ಅಲ್ಲದೆ ಇತರೆ ಕೈಗಡವಾಗಿ 5 ಲಕ್ಷ ಸಾಲ ಮಾಡಿದ್ದು ಬಂದ ಬೆಳೆ ಕೈಗೆ ಬಾರದೆ ಮಾನಸಿಕ ನೊಂದುಕೊಂಡು ಈತನು ಸಹ ಬೆಳಗಿನ ಜಾವ ಸಾವಿಗೆ ಶರಣಾಗಿದ್ದಾನೆ. ಈತನ ಸಾವಿನಿಂದ ಪತ್ನಿ ಶಿಲ್ಪಾ ಮೂವರು ಪುತ್ರಿಯರು ಓರ್ವ ಪುತ್ರ ಸೇರಿದಂತೆ ಕುಟುಂಬವನ್ನು ಅಗಲಿದ್ದು ಅಕ್ಷರಸಃ ಅನಾಥರಾದಂತಾಗಿದೆ. 

ಗ್ರಾಮದಲ್ಲಿ ನಡೆದಿರುವ ಈ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಕೃಷಿಕರು ಗ್ರಾಮಸ್ಥರು ಮೃತರ ಮನೆಗೆ ಧಾವಿಸಿ ಈ ಘಟನೆಗೆ ತಮ್ಮ ತೀವ್ರ ಸಂಕಟ ವ್ಯಕ್ತಪಡಿಸಿದ್ದು ಮಮ್ಮಲ ಮರುಗುತ್ತಿರುವುದು ಕಂಡುಬಂದಿತು. ಸ್ಥಳಕ್ಕೆ ಧಾವಿಸಿದ ಹಲಗೇರಿ ಗ್ರಾಮಾಂತರ ಪೋಲಿಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು.

ಸುದ್ದಿ ಓದಿ