ಅಕ್ರಮ ಚಟುವಟಿಕೆಗಲ್ಲಿ ಭಾಗಿ : ಇಬ್ಬರು ಆರೋಪಿತರು ಬೆಳಗಾವಿ ಜಿಲ್ಲೆಯಿಂದ ಗಡಿಪಾರು

ಅಕ್ರಮ ಚಟುವಟಿಕೆಗಲ್ಲಿ ಭಾಗಿ : ಇಬ್ಬರು ಆರೋಪಿತರು ಬೆಳಗಾವಿ ಜಿಲ್ಲೆಯಿಂದ ಗಡಿಪಾರು

ಬೆಳಗಾವಿ : ಜಿಲ್ಲೆಯ ಕಾಗವಾಡ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಓಸಿ, ಮಟಕಾ ಸೇರಿದಂತೆ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿ  ಸಮಾಜದ ಸ್ವಾಸ್ಥ್ಯಕ್ಕೆ ಧಕ್ಕೆಯುಂಟು ಮಾಡುತ್ತಿದ್ದ ಇಬ್ಬರು ಆರೋಪಿತರನ್ನು ಬೆಳಗಾವಿ ಜಿಲ್ಲೆಯಿಂದ ಹೊರ ಜಿಲ್ಲೆಗೆ ಗಡಿಪಾರು‌ ಮಾಡಲಾಗಿದೆ.

   ಮನೋಜ ರುದ್ರಪ್ಪ ಕಾಂಬಳೆ (ಸಾ: ಮೋಳೆ ತಾ: ಕಾಗವಾಡ) ಹಾಗೂ ಶಬ್ಬಿರ ಬಾದಷಾ ಪಠಾಣ (ಸಾ: ಉಗಾರ ಖುರ್ದ ತಾ:ಕಾಗವಾಡ) ಇವರಿಬ್ಬರು ಗಡಿಪಾರಾದ ಆರೋಪಿತರಾಗಿದ್ದಾರೆ.
   ಉಪವಿಭಾಗೀಯ ದಂಡಾಧಿಕಾರಿಗಳು (ಎಸಿ) ಚಿಕ್ಕೋಡಿ ಉಪ ವಿಭಾಗ ಇವರುದಿ. 01-04-2026 ರಂದು ಕರ್ನಾಟಕ ಪೊಲೀಸ ಕಾಯಿದೆ -1963 ರ ಕಲಂ: 55 ಮತ್ತು 56(ಜಿ) ರನ್ವಯ ಸದರಿ ಆರೋಪಿತರಿಗೆ 3 ತಿಂಗಳ ಅವಧಿಗೆ ವಿಜಯಪುರ ಜಿಲ್ಲೆಗೆ ಗಡಿಪಾರು ಮಾಡಿಆದೇಶ ಮಾಡಿರುತ್ತಾರೆ.
    ಮನೋಜ ರುದ್ರಪ್ಪ ಕಾಂಬಳೆ ಇತನಿಗೆ ವಿಜಯಪುರ ಜಿಲ್ಲೆಯ ಸಿಂಧಗಿ ಪೊಲೀಸ ಠಾಣೆ ವ್ಯಾಪ್ತಿಗೆ ಮತ್ತು ಶಬ್ಬಿರ ಬಾದಷಾ ಪಠಾಣ ಇವನಿಗೆ ವಿಜಯಪುರ ಜಿಲ್ಲೆಯ ಗಾಂಧಿ ಚೌಕ ಪೊಲೀಸ ಠಾಣೆ ವ್ಯಾಪ್ತಿಗೆ ಸ್ಥಳಾಂತರಿಸಲಾಗಿದೆ.
    ಕಾನೂನು ಬಾಹಿರ ಚಟುವಟಿಕೆಗಳನ್ನು ನಿಯಂತ್ರಿಸಲು ಹಾಗೂ ಸಾರ್ವಜನಿಕ ನೆಮ್ಮದಿಯನ್ನು ಕಾಪಾಡುವುದಕ್ಕಾಗಿ 2 ಜನ  ಆರೋಪಿತರನ್ನು ಬೆಳಗಾವಿ ಜಿಲ್ಲೆಯಿಂದ ಗಡಿಪಾರು ಮಾಡಲಾಗಿದ್ದು, ಇನ್ನು ಮುಂದೆಯೂ ಸಹ ಇದೇ ರೀತಿ ಆರೋಪಿತರ ವಿರುದ್ಧ ಮೇಲೆ ಕಠಿಣ ಕ್ರಮಗಳನ್ನು ಕೈಗೋಳ್ಳಲಾವುದು ಎಂದು ಪೊಲೀಸರು ತಿಳಿಸಿದ್ದಾರೆ.

ಸುದ್ದಿ ಓದಿ