ರಾಣೆಬೆನ್ನೂರ

ತುಂಗಾಜಲ ಚೌಡೇಶ್ವರಿ ಜಾತ್ರೋತ್ಸವ

ತುಂಗಾಜಲ ಚೌಡೇಶ್ವರಿ ಜಾತ್ರೋತ್ಸವ

ರಾಣಿಬೆನ್ನೂರ  20: ಮಾರುತಿ ನಗರದ ಇತಿಹಾಸ ಪ್ರಸಿದ್ದ  ತುಂಗಾಜಲ ಚೌಡೇಶ್ವರಿ ಜಾತ್ರೋತ್ಸವವು ಇದೇ ಜ. 25 ರಿಂದ 30ರವರೆಗೆ ಜರುಗಲಿದೆ. ಜ.25ರಂದು ಮುಂಜಾನೆ 10-00ಕ್ಕೆ ಶ್ರೀ ತುಂಗಾಜಲ ಚೌಡೇಶ್ವರಿ ದೇವಿಯ ಉತ್ಸವವು ಶ್ರೀ ದೇವಿಯ ಮನೆಯಿಂದ ಬಾಜಾ-ಭಜಂತ್ರಿ, ವಾದ್ಯ ಮೇಳಗಳೊಂದಿಗೆ ಹೊರಟು ಪ್ರತಿ ವರ್ಷದ ಮಾರ್ಗದಲ್ಲಿ ಸಂಚರಿಸಿ ಸಂಜೆ ದೇವಸ್ಥಾನದಲ್ಲಿ ಅಲಂಕೃತ ಮಂಟಪದಲ್ಲಿ ಪ್ರತಿಷ್ಠಾಪಿಸಲಾಗುವುದು. 

ಜ. 26ರಂದು ಮಂಗಳವಾರ ದೇವಿಗೆ ಉಡಿ ತುಂಬುವುದು, ಮಹಾ ಪೂಜೆ, ನೈವೇದ್ಯ, ಹರಕೆ ಸಲ್ಲಿಕೆ ನಂತರ ಮುತ್ತೈದೆಯರಿಗೆ  ಉಡಿ ತುಂಬುವ ಕಾರ್ಯ ಜರುಗುವುದು. ಜ.27ರಂದು ಬುಧವಾರ ಓಕಳಿ ಉತ್ಸವ ಮತ್ತು ಮಧ್ಯಾಹ್ನ ಬೆಲ್ಲದ ಬಂಡಿಯ ಮೆರವಣಿಗೆ ನಡೆಯುವುದು. ಭಕ್ತಾದಿಗಳು ಸರ್ಕಾರದ ಕೋವಿಡ್ ನಿಯಮಾವಳಿಗಳನ್ನು ಅಳವಡಿಸಿಕೊಂಡು ಜಾತ್ರೋತ್ಸವದಲ್ಲಿ ಭಾಗವಹಿಸಿ ದೇವಿಯ ಕೃಪೆಗೆ ಪಾತ್ರರಾಗಬೇಕೆಂದು  ತುಂಗಾಜಲ ಚೌಡೇಶ್ವರಿ ಜಾತ್ರೋತ್ಸವ ಸಮಿತಿಯವರು ಕೋರಿದ್ದಾರೆ.

ಸುದ್ದಿ ಓದಿ