ಕಾರವಾರ

ಭಾರತೀಯ ಸಾಹಿತ್ಯದಲ್ಲಿ ಅನುವಾದ , ಸೃಜನಶೀಲತೆ

ಭಾರತೀಯ ಸಾಹಿತ್ಯದಲ್ಲಿ ಅನುವಾದ , ಸೃಜನಶೀಲತೆ

ಕಲಬುರಗಿ 23: ಬುದ್ಧನ ತ್ರಿಪಿಠಕಗಳು ಚೀನಿ, ಟಿಬೇಟ್ ಭಾಷೆಗಳಿಗೆ ಅನುವಾದವಾಗದಿದ್ದರೆ, ಏಷ್ಯಾದ ಇತಿಹಾಸದ ಚಿತ್ರಣವೆ ಬೇರೆಯಾಗಿರುತ್ತಿತ್ತು. ಅನುವಾದ ಸಾಹಿತ್ಯಕ್ಕೆ ಮಾತ್ರವಲ್ಲ ನಾಗರಿಕತೆಗೆ ಅನ್ವಯಿಸುತ್ತದೆ. ಅದೊಂದು ವಿಶ್ವವಾತ್ಮಕ ಪ್ರಕ್ರಿಯೆ ಸಂಸ್ಕೃತಿಕ ಅನುವಾದ ಪ್ರಮುಖವಾಗಿ ಸಾಹಿತ್ಯ ಚರಿತ್ರೆಯಲ್ಲಿ ಕಾಣಬಹುದು ಎಂದು ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ. ಎಚ್.ಎಸ್. ಶಿವಪ್ರಕಾಶ್ ಹೇಳಿದರು.

ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕರ ಪ್ರೊ. ವಿಕ್ರಮ ವಿಸಾಜಿಯವರು ಅತಿಥಿಯಾಗಿ ಭಾಗವಹಿಸಿ ಮಾತಾಡುತ್ತ ಪ್ರೊ. ಎಚ್.ಎಸ್. ಶಿವಪ್ರಕಾಶ್ ಅವರು ಅನೇಕ ಪಠ್ಯಗಳನ್ನು ಆವಾಹಿಸಿಕೊಂಡಿದ್ದಾರೆ. ಕನ್ನಡದಲ್ಲಿ ಹೊಸ ಪ್ರತಿಮಾ ಲೋಕವನ್ನು ಸೃಷ್ಟಿಸಿದಂತವರು. ಕನ್ನಡ ರಂಗಭೂಮಿಯಲ್ಲಿ ಹೊಸ ಪ್ರಯೋಗ ಮಾಡಿದರು. 

ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ. ಎಚ್.ಟಿ. ಪೋತೆ ಮಾತನಾಡಿದರು.

ಕಾರ್ಯಕ್ರಮದಲ್ಲಿ ನಗರದ ಗಣ್ಯರು ಸುರೇಶ ಬಡಿಗೇರ, ಸುಬ್ಬರಾವ್ ಕುಲಕರ್ಣಿ, ಡಾ. ಶ್ರೀನಿವಾಸ ಶಿರನೂರಕರ್, ವೆಂಕಟೇಶ ಮುದಗಲ್ ಉಪಸ್ಥಿತರಿದ್ದರು. ಡಾ. ಹಣಮಂತ ಮೇಲಕೇರಿ ಸ್ವಾಗತಿಸಿದರು. ಡಾ. ಸಿದ್ಧಲಿಂಗ ದಬ್ಬಾ ವಂದಿಸಿದರು. ಡಾ. ಸಂತೋಷಕುಮಾರ ಕಂಬಾರ ನಿರೂಪಿಸಿದರು. ಸಂಶೋಧನಾ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಪಾಲ್ಗೊಂಡಿದ್ದರು. 

ಕೈಚಾಚುವ ಸ್ಥಿತಿ : ಪ್ರೊ. ಎಚ್.ಎಸ್. ಶಿವಪ್ರಕಾಶ್

ಹಂಪನಾಗರಾಜಯ್ಯನವರ ಮೇಲಾದ ಪೊಲೀಸ್ ಕೇಸಿನ ವಿಷಯದಲ್ಲಿ ಕೇಳಲಾದ ಪ್ರಶ್ನೆಗೆ ಹೀಗೆ ಉತ್ತರಿಸಿದರು. ಅಭಿವ್ಯಕ್ತಿ ಸ್ವಾತಂತ್ರ್ಯ ಇಂದಿನ ಕಾಲಘಟ್ಟದಲ್ಲಿ ದಮನಗೊಳ್ಳುತ್ತಿದೆ. ಒಬ್ಬ ಬರಹಗಾರನಿಗೂ ಇರುವಂತ ಸ್ವಾತಂತ್ರ್ಯ ಒಬ್ಬ ಸಾಮಾನ್ಯ ವ್ಯಕ್ತಿಗೂ ಕೂಡ ಸ್ವಾತಂತ್ರ್ಯ ಇರಬೇಕೆಂದು ಸಮರ್ಥಿಸಿದರು. ಜನಪ್ರತಿನಿಧಿಗಳು ಹಾಗೂ ಆಡಳಿತ ವರ್ಗ ತಮ್ಮ ಜವಾಬ್ದಾರಿಯನ್ನು ಮರೆತು ವರ್ತಿಸುತ್ತಿರುವುದು ವಿಪರ್ಯಾಸ.

ಸುದ್ದಿ ಓದಿ