ರಾಣೆಬೆನ್ನೂರ

ನೌಕರರಿಗೆ ವರ್ಗಾವಣೆ ಸಹಜ ಪ್ರಕ್ರಿಯೆ: ಶಂಕರ ಬಾರ್ಕಿ

ನೌಕರರಿಗೆ ವರ್ಗಾವಣೆ ಸಹಜ ಪ್ರಕ್ರಿಯೆ: ಶಂಕರ ಬಾರ್ಕಿ
ಹಾಲಿ ತಹಶೀಲ್ದಾರ ಬಸನಗೌಡ ಕೋಟೂರು ಅವರು ನೂತನ ತಹಶೀಲ್ದಾರ ಶಂಕರ ಜಿ.ಎಸ್ ರವರಿಗೆ ಅಧಿಕಾರ ಹಸ್ತಾಂತರಿಸಿದರು.

ರಾಣೀಬೆನ್ನೂರು.ಜ.22: ಹೊನ್ನಾಳಿಗೆ ವರ್ಗವಾದ ತಹಶೀಲ್ದಾರ  ಬಸನಗೌಡ ಕೋಟೂರಗೆ ಸನ್ಮಾನಿಸಿ ಬೀಳ್ಕೊಡಲಾಯಿತು. ನೂತನ ತಹಶೀಲ್ದಾರರಾಗಿ ಆಗಮಿಸಿದ  ಶಂಕರ ಜಿ.ಎಸ್.ಅವರನ್ನು ಸ್ವಾಗತಿಸಲಾಯಿತು.

ಬೀಳ್ಕೊಡುಗೆ ಗೌರವ ಸನ್ಮಾನ ಸ್ವೀಕರಿಸಿ ಮಾತನಾಡಿದ ಬಸನಗೌಡ ಕೋಟೂರ, ಎಲ್ಲರ ವಿಶ್ವಾಸಗಳಿಸಿ ಸಿಬ್ಬಂದಿ ಸಹಕಾರ ಪಡೆದು ಪ್ರವಾಹ, ಅತಿವೃಷ್ಟಿ, ಕರೊನಾ ನಿರ್ವಹಣೆಯಲ್ಲಿ ಉಪಚುನಾವಣೆ, ಗ್ರಾ.ಪಂ.ಚುನಾವಣೆಗಳನ್ನು ಯಾವುದೇ ಕಪ್ಪುಚುಕ್ಕೆ ಇಲ್ಲದಂತೆ ನಡೆಸಿದ್ದೇನೆ. ತಾಲೂಕಿನ ಜನರ ಹಾಗೂ ಸಿಬ್ಬಂದಿ ಸಹಕಾರ ಮರೆಯಲಾರೆ ಎಂದರು.

ನೂತನ ತಹಶೀಲ್ದಾರ ಶಂಕರ ಬಾರ್ಕಿ ಮಾತನಾಡಿ, ನಾನು ಬಸನಗೌಡರು ಸಹಪಾಠಿಗಳಾಗಿದ್ದು ಅವರ ವರ್ಗಾವಣೆಯಾಗಬಾರದಿತ್ತು. ನೌಕರರಿಗೆ ವರ್ಗಾವಣೆ ಸಹಜ ಪ್ರಕ್ರಿಯೆಯಾಗಿದ್ದು, ಇದಕ್ಕೆ  ಹೊಂದಿಕೊಳ್ಳುವುದು ಅನಿವಾರ್ಯವಾಗಿದೆ. ಇವರಿಗೆ ನೀಡಿದ ಸಹಕಾರವನ್ನೂ ನಮಗೂ ಸಹ ನೀಡಬೇಕು ಎಂದು ಕೋರಿದರು. 

ರೈತ ಸಂಘದ ಮುಖಂಡ ರವೀಂದ್ರ ಗೌಡ ಪಾಟೀಲ, ವಿವಿಧ ಸಂಘ-ಸಂಸ್ಥೆಯ ಪದಾಧಿಕಾರಿಗಳು, ಗಣ್ಯರು ವರ್ತಕರು ಮತ್ತು ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.  ಸಿಬ್ಬಂದಿಯವರು ನೂತನ ತಹಶೀಲ್ದಾರ ಶಂಕರ ಬಾರ್ಕಿ ವರ್ಗಾವಣೆಗೊಂಡ ತಹಶೀಲ್ದಾರ ಬಸನಗೌಡ ಕೋಟೂರು ಅವರಿಗೆ ಗೌರವಿಸಿ ಸನ್ಮಾನಿಸಲಾಯಿತು. 

 

ಸುದ್ದಿ ಓದಿ