ಅಥಣಿ ತಾಲೂಕು ಆಸ್ಪತ್ರೆಗೆ ಡಿಸಿಎಮ್ ಸವದಿ ಅಂಬ್ಯುಲೆನ್ಸ ಹಸ್ತಾಂತರ
ಅಥಣಿ 25: ತಾಲೂಕಿನ ಜನತೆಗೆ ಅಂಬುಲೆನ್ಸ ಕೊರತೆ ಉಂಟಾಗಿದ್ದನ್ನು ಗಮನಿಸಿ ಇವತ್ತು ಎರಡು ಸುಸಜ್ಜಿತ ಅಂಬುಲೆನ್ಸಗಳನ್ನು ಹಸ್ತಾಂತರ ಮಾಡಲಾಗುತ್ತಿದೆ ಎಂದು ಡಿಸಿಎಮ್ ಲಕ್ಷ್ಮಣ ಸವದಿ ಅವರು ಹೇಳಿದರು.ಅವರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ತಮ್ಮ ಎಮ್ ಎಲ್ ಸಿ ಅನುದಾನದಿಂದ ಡಿಸಿಎಮ್ ಲಕ್ಷ್ಮಣ ಸವದಿ ಅಂಬ್ಯುಲೆನ್ಸ ಹಸ್ತಾಂತರ ಮಾಡಿ ಮಾತನಾಡುತ್ತಾ ಅಥಣಿ ತಾಲ್ಲೂಕಿನ ಲ್ಲಿ ಕೊರೊನಾ ವ್ಯಾಪಕವಾಗಿ ಹೆಚ್ಚಿದ ಬೆನ್ನಲ್ಲೆ ಅಪಾರ ಪ್ರಮಾಣದಲ್ಲಿ ಸಾವು ನೋವುಗಳು ಸಂಭವಿಸಿದ್ದು, ಕಳೆದ ಬಾರಿ ಕೋವಿಡ್ ಸಂದರ್ಭದಲ್ಲಿ ಬೆಳಗಾವಿಯ ಬಿಮ್ಸ ಆಸ್ಪತ್ರೆ ಆವರಣದಲ್ಲಿ ಗಲಾಟೆಯಾದ ಸಮಯದಲ್ಲಿ ಕೋವಿಡ್ನಿಂದಾಗಿ ತಮ್ಮವರನ್ನು ಕಳೆದುಕೊಂಡು ಆಕ್ರೋಶಗೊಂಡಿದ್ದ ಜನರು ಬೆಂಕಿ ಹಚ್ಚಿದ್ದರಿಂದ ಈ ಮೊದಲು ಕೊಟ್ಟಿದ್ದ ಅಂಬ್ಯುಲೆನ್ಸ ಸುಟ್ಟುಹೋಗಿ ಅಥಣಿ ತಾಲೂಕಿನ ಜನರಿಗೆ ಚಿಕಿತ್ಸೆಗಾಗಿ ಮೀರಜ್ ಮತ್ತು ಬೆಳಗಾವಿ ಆಸ್ಪತ್ರೆಗೆ ತೆರಳಲು ಅಂಬ್ಯುಲೆನ್ಸಗಳ ಕೊರತೆ ಎದುರಾಗಿದ್ದನ್ನು ಅರಿತು ಜನರ ಅನುಕೂಲಕ್ಕಾಗಿ ಸದ್ಯ ಎರಡು ಅಂಬ್ಯುಲೆನ್ಸ ಕೊಡಲಾಗುತ್ತಿದೆ ಒಂದು ಅಂಬ್ಯುಲೆನ್ಸ ಹದಿನೆಂಟು ಲಕ್ಷ ರೂಪಾಯಿ ವೆಚ್ಚದಲ್ಲಿ ಸೆಮಿ ಸಿಸ್ಟಮ್ ಹೊಂದಿದ್ದು ಸಾಮಾನ್ಯ ಚಟುವಟಿಕೆಗೆ ಮತ್ತು ಇನ್ನೊಂದು ಅಂಬ್ಯುಲೆನ್ಸ ಇಪ್ಪತೊಂಭತ್ತು ಲಕ್ಷ ರೂಪಾಯಿ ವೆಚ್ಚದಲ್ಲಿ ಟಾಪ್ ಎಂಡ್ ಮಾದರಿಯಲ್ಲಿ ಆಕ್ಸಿಜನ್, ವೆಂಟಿಲೇಟರ್, ಮತ್ತು ಎಸಿ ಹಾಗೂ ಫ್ಯಾನಗಳನ್ನು ಹೊಂದಿರುವ ಸುಸಜ್ಜಿತ ರೀತಿಯಲ್ಲಿ ಸಜ್ಜಾದ ಅಂಬ್ಯುಲೆನ್ಸ ಕೆಲವೇ ದಿನಗಳಲ್ಲಿ ಹಸ್ತಾಂತರವಾಗಲಿದೆ ಎಂದು ಡಿಸಿಎಮ್ ಸವದಿ ಹೇಳಿದರು.
ಇದೇ ವೇಳೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಗಳಿಗೆ ಅಲ್ಪೋಪಹಾರವನ್ನು ವಿತರಿಸಿದರು ಈ ವೇಳೆ ಮುಖಮಡ ಅಪ್ಪಾಸಾಬ ಅವತಾಡೆ, ಚಿದಾನಂದ ಸವದಿ, ಮುಖ್ಯ ವೈಧ್ಯಾಧಿಕಾರಿ ಡಾ ಬಸನಗೌಡ ಕಾಗೆ, ಡಾ ಸಿ ಎಚ್ ಪಾಟೀಲ, ತಹಶಿಲ್ದಾರ ದುಂಡಪ್ಪಾ ಕೋಮಾರ, ಡಿವೈಎಸ್ ಪಿ ಎಸ್ ವಿ ಗಿರೀಶ, ಸಿಪಿಐ ಶಂಕರಗೌಡ ಬಸನಗೌಡ, ಶ್ರೀಶೈಲ ನಾಯಿಕ, ಅರುಣ ಬಾಸಿಂಗಿ ಸೇರಿದಂತೆ ಇತರರು ಹಾಜರಿದ್ದರು. ಅಥಣಿ ತಾಲ್ಲೂಕು ಆಸ್ಪತ್ರೆಗೆ ಡಿಸಿಎಮ್ ಸವದಿ ಅಂಬ್ಯುಲೆನ್ಸ ಹಸ್ತಾಂತರ ಮಾಡಿದ ದೃಶ್ಯ(26ಅಥಣಿ-05)