ವರ್ಗಾವಣೆ: ಪುರಾಣಿಕ, ಶಶಿಕಾಂತ ಹೊಸಮನಿಗೆ ಸನ್ಮಾನ
ಶಿಗ್ಗಾವಿ 24: ಪಟ್ಟಣದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ನಿವೃತ್ತ ನಿಲಯ ಮೇಲ್ವಿಚಾರಕ ಎಸ್.ಬಿ.ಪುರಾಣಿಕ ಹಾಗೂ ನಿಲಯ ಮೇಲ್ವಿಚಾರಕ ಶಶಿಕಾಂತ ಮನೋಹರ ಹೊಸಮನಿ ವರ್ಗಾವಣೆ ಹೊಂದಿದ ನಿಮಿತ್ಯ ಇರ್ವರನ್ನು ಶೋಭಾ ಸಂಬೋಜಿ ತಾಲೂಕ ಕಲ್ಯಾಣಾಧಿಕಾರಿಗಳು ಶಿಗ್ಗಾವಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಇವರ ಅಧ್ಯಕ್ಷತೆಯಲ್ಲಿ ಸನ್ಮಾನಿಸಲಾಯಿತು.
ದಲಿತ ಸೇನಾ ಜಿಲ್ಲಾಧ್ಯಕ್ಷ ಅಶೋಕ ಕಾಳೆ, ಕುರುಬ ಸಮಾಜ ತಾಲೂಕ ಅಧ್ಯಕ್ಷ ಪಕ್ಕೀರ್ಪ ಕುಂದೂರ, ನ್ಯಾಯವಾದಿ ಮತ್ತು ಸಮಾಜ ಸೇವಕ ಬಸವರಾಜ ಜೇಕಿನಕಟ್ಟಿ, ಮಹ್ಮದಗೌಸ ಅಗಸನಮಟ್ಟಿ, ಪರುಶರಾಮ ಯಲಿಗಾರ, ಮೌಲಾಲಿ ಶಕೀಲ, ನಿಲಯ ಮೇಲ್ವಿಚಾರಕರಾದ ಬಾಬು ಖವಾಸ, ಸಂಗಪ್ಪ ಗುದಗಿ ಇದ್ದರು. ತಾಲೂಕ ವಿಸ್ತರಣಾಧಿಕಾರಿ ಸುರೇಶ ಕೊಟಗಿ ಸ್ವಾಗತಿಸಿ, ವಂದಿಸಿದರು.