ವರ್ಗಾವಣೆ: ಸಿಪಿಐ ಮೌನೇಶ್ವರ ಮಾಲಿಪಾಟೀಲಗೆ ಸತ್ಕಾರ
ಯರಗಟ್ಟಿ 09: ಸೇವೆಯಲ್ಲಿ ಕರ್ತವ್ಯನಿಷ್ಠೆಯೊಂದಿಗೆ ಕಾರ್ಯನಿರ್ವಹಿಸಿ ಸರಳ ವ್ಯಕ್ತಿತ್ವದಲ್ಲಿ ಸಾರ್ಥಕತೆ ಕಂಡುಕೊಂಡು ವರ್ಗಾವಣೆ ಹೊಂದುತ್ತಿರುವ ಸಿಪಿಐ ಮೌನೇಶ್ವರ ಮಾಲಿಪಾಟೀಲ ವೃತ್ತಿ ಜೀವನ ಸುಖಮಯವಾಗಿರಲಿ ಎಂದು ಡಿಎಸ್ಪಿ ರಾಮನಗೌಡ ಹಟ್ಟಿ ಹೇಳಿದರು. ಇಲಾಖೆಯಲ್ಲಿ ಸೇವೆ ಸಲ್ಲಿಸಿ ಇತ್ತೀಚಿಗೆ ವರ್ಗಾವಣೆ ಹೊಂದಿದ ಸಿಪಿಐ ಮೌನೇಶ್ವರ ಮಾಲಿಪಾಟೀಲ ಅವರಿಗೆ ಸಮೀಪದ ಮುರಗೋಡದ ಮಹಾಂತ ದುರದುಂಡೇಶ್ವರ ಶ್ರೀಮಠದಲ್ಲಿ ಆವರಣದಲ್ಲಿ ನಡೆದ ಬೀಳ್ಕೊಡುವ ಸಮಾರಂಭದಲ್ಲಿ ಮಾತನಾಡಿದರು.
ಇಲಾಖೆಯಲ್ಲಿ ಸೇವೆ ಸಲ್ಲಿಸಿದವರನ್ನು ಇಲಾಖೆಯು ಎಂದೂ ಮರೆಯುವುದಿಲ್ಲ. ತಮಗೆ ವಹಿಸಿದ ಕೆಲಸವನ್ನು ಶ್ರದ್ಧೆ ಹಾಗೂ ಪ್ರಾಮಾಣಿಕತೆಯಿಂದ ನಿರ್ವಹಿಸಿ ಅಧಿಕಾರಿಗಳು ಮತ್ತು ಸಾರ್ವಜನಿಕರ ಪ್ರೀತಿ-ವಿಶ್ವಾಸ ಗಳಿಸಿದ್ದಾರೆ. ಅವರ ಕರ್ತವ್ಯದ ವೇಳೆಯಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಅತೀ ಹೆಚ್ಚು ಪ್ರಕರಣಗಳು ಭೇದಿಸಿದ ಮುರಗೋಡ ಪೊಲೀಸ್ ಠಾಣಾ ಎಂದು ಪ್ರಶಸ್ತಿ ಪಡೆದ ಠಾಣೆ ಆಗಿದೆ. ವರ್ಗಾವಣೆ ನಂತರವು ಪೊಲೀಸ್ ಇಲಾಖೆ ಹಾಗೂ ಸಾರ್ವಜನಿಕರ ನಡುವೆ ಸಂಪರ್ಕ ಸೇತುವೆಯಾಗಿ ನೀವು ಕಾರ್ಯನಿರ್ವಹಿಸಬಹುದು ಎಂದು ಹೇಳಿದರು. ಸನ್ಮಾನ ಸ್ವೀಕರಿಸಿ ಮೌನೇಶ್ವರ ಮಾಲಿಪಾಟೀಲ ಮಾತನಾಡಿ ಪೊಲೀಸ್ ಇಲಾಖೆಯಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಲು ಹಿರಿಯ ಅಧಿಕಾರಿಗಳ ಪ್ರೋತ್ಸಾಹ ಹಾಗೂ ಸಹದ್ಯೋಗಿಗಳ ಸಹಕಾರವನ್ನು ಮರೆಯಲಾರೆ ಎಂದು ತಿಳಿಸಿದರು.
ನೀಲಕಂಠ ಶ್ರೀಗಳು ಮಾತನಾಡಿ, ಮುರಗೋಡ ಗ್ರಾಮದ ಡಿಸಿಸಿ ಬ್ಯಾಂಕ್ ಕಳ್ಳತನ ಪ್ರಕರಣ ಭೇದಿಸಿದ ಮೂರುವರೆ ಕೋಟಿ ಹಣ ಹಾಗೂ 3.5 ಕೆಜಿ ಚಿನ್ನ ಪತ್ತೆಮಾಡಿ ಡಿಸಿಸಿ ಬ್ಯಾಂಕ್ ಗ್ರಾಹಕರಿಗೆ ಮರಳಿಸಿದ ಕೀರ್ತಿ ಸಿಪಿಐ ಮೌನೇಶ್ವರ ಮಾಲಿಪಾಟೀಲರಿಗೆ ಸೇವೆಯಲ್ಲಿ ಸಹಕರಿಸಿದ ಎಲ್ಲ ಅಧಿಕಾರಿಗಳಿಗೆ ಅಭಿನಂದನೆ ತಿಳಿಸಿ ಪೂಜ್ಯರು ಗುಣಗಾನ ಮಾಡಿದರು. ನಂತರ ನೂತನ ಸಿಪಿಐ ಆಗಿ ಕರ್ತವ್ಯಕ್ಕೆ ಹಾಜರಾದ ಈರಯ್ಯ ಮಠಪತಿ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ಪೊಲೀಸ್ ಇಲಾಖೆ ಸಿಬ್ಬಂದಿ ಸ್ವಾಗತಿಸಿದರು.
ಸವದತ್ತಿ ಸಿಪಿಐ ಜೆ.ಕರುಣೇಶಗೌಡ, ರಾಮದುರ್ಗ ಸಿಪಿಐ ಆಯ್. ಆರ್. ಪಟ್ಟಣಶೆಟ್ಟಿ, ಕಿತ್ತೂರ ಪಿಎಸ್ಐ ಪ್ರವೀಣ ಗಂಗೊಳ್ಳಿ, ಯರಗಟ್ಟಿ ಪಿಎಸ್ಐ ಆಯ್ ಎಮ್ ಹಿರೇಗೌಡರ, ಮುರಗೋಡ ಪಿಎಸ್ಐ ಶಿವಾನಂದ ಕಾರಜೋಳ, ಸ್ಥಳೀಯರಾದ ಎಫ್. ಎಸ್. ಸಿದ್ದನಗೌಡರ, ಈರಣ್ಣಾ ಹುಲ್ಲೂರ, ಫೀರೋಜ ಖಾದ್ರಿ, ಮಹಾಂತೇಶ ಗೋಡಿ, ಭಾಸ್ಕರ ಹಿರೇಮೆತ್ರಿ, ಅರುಣ ನೀಲಪ್ಪನವರ, ಸೋಮು ರೈನಾಪೂರ, ರಫೀಕ ಡಿ ಕೆ ಸೇರಿದಂತೆ ಪೊಲೀಸ್ ಇಲಾಖೆ ಸಿಬ್ಬಂದಿ ಯರಗಟ್ಟಿ, ಮುರಗೋಡ ಸುತ್ತಮುತ್ತಲಿನ ಸಾರ್ವಜನಿಕ ಹಾಗೂ ಮುಖಂಡರು ಇದ್ದರು.