ಶಿಗ್ಗಾವ್

ನೂತನ ಎಸ್‍ಡಿಎಂಸಿ ಸದಸ್ಯರಿಗೆ ತರಬೇತಿ ಕಾರ್ಯಾಗಾರ

ನೂತನ ಎಸ್‍ಡಿಎಂಸಿ ಸದಸ್ಯರಿಗೆ ತರಬೇತಿ ಕಾರ್ಯಾಗಾರ

ಶಿಗ್ಗಾವಿ 24:  ಶಕ್ತಿ ಸಾಮರ್ಥ್ಯವಿದ್ದವರು ಜಗತ್ತು ಆಳುವ ಇತಿಹಾಸ ಕಾಲ ಬದಲಾಗಿದೆ. ಪ್ರಸಕ್ತ ವಿದ್ಯಾವಂತರು ಬುದ್ಧಿ ಶಕ್ತಿಯಿಂದ ಆಳುವಂತಾಗಿದೆ. ಎಂದು ಎಸ್.ಡಿಎಂಸಿ ಅಧ್ಯಕ್ಷ ಪರಮೇಶಪ್ಪ ಹರಿಜನ ಹೇಳಿದರು.

ತಾಲೂಕಿನ ಹುಣಶೀಕಟ್ಟಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ನೂತನ ಎಸ್.ಡಿಎಂಸಿ ಸದಸ್ಯರಿಗೆ ತರಬೇತಿ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದ ಅವರು  ಜಗತ್ತು ವೈಜ್ಞಾನಿಕ ಕ್ಷೇತ್ರದಲ್ಲಿ ಮುಂದುವರೆದಂತೆ ಖಾಸಗಿ ಶಾಲೆಗಳು ಸ್ಮಾರ‍್ಟ ಕ್ಲಾಸ್‍ನಂತಹ ತಂತ್ರಜ್ಞಾನ ಆದಾರಿತ ಶಿಕ್ಷಣ ನೀಡಿ ಆಕರ್ಶಣೆ ನೀಡುತ್ತಿವೆ. ಸರ್ಕಾರಿ ಶಾಲೆಗಳಿಗೆ ಪೈಪೋಟಿ ನೀಡುತ್ತಿವೆ. ಪ್ರಸಕ್ತ ಸಾಲಿನ ಶೈಕ್ಷಣಿಕ ಜ್ಞಾನ ಪಡೆಯಲು ಹಲವಾರು ಅರ್ಥಿಕ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಕಾಲಕ್ಕೆ ತಕ್ಕಂತೆ ಮಕ್ಕಳಿಗೆ ನಾವೂ ಜ್ಞಾನ ಪೋಷಣೆ ನೀಡಬೇಕಾಗುತ್ತದೆ. ನಮ್ಮ ಶಾಲೆಗಳ ವಿದ್ಯಾರ್ಥಿಗಳು ಕೌಶಲ್ಯದಿಂದ ಹಿಂದುಳಿಯಬಾರದು. ಸರ್ಕಾರಿ ಶಾಲೆಗಳು ತಮ್ಮ ಅಸ್ಥಿತ್ವ ಉಳಿಸಿಕೊಳ್ಳಬೇಕಾದರೇ, ಸಮೂದಾಯಗಳು, ಸಾರ್ವಜನಿಕರು ಶಾಲೆ ಅರ್ಥಿಕ ಬೆಳವಣಿಗೆಗೆ ಸಹಕರಿಸಿ ಅಭಿವೃದ್ಧಿಪಡಿಸಬೇಕು. ಜ್ಞಾನವಿದ್ದರೇ ಜಗತ್ತಿನ ಯಾವ ಮೂಲೆಯಲ್ಲಾದರೂ ಬದುಕು ಕಟ್ಟಿಕೊಳ್ಳಬಹುದು. ಅದಕ್ಕೆ ಶಕ್ತಿ ಸಾಮರ್ಥ್ಯದ ಅವಶ್ಯಕತೆಯಿಲ್ಲ. ಗ್ರಾಮೀಣ ಪ್ರದೇಶದಲ್ಲೂ ಸರ್ಕಾರಿ ಶಾಲೆಗಳಿಂದ ಉತ್ತಮ ಶಿಕ್ಷಣ ನಿರೀಕ್ಷೆ ಹೊಂದಲು ಸಾಧ್ಯೆವೆಂದರು.

ಪ್ರದಾನ ಗುರುಗಳಾದ ರಮೇಶ.ಎನ್. ಬಾರ್ಕೇರ ಪ್ರಸ್ಥಾವಿಕ ಮಾತನಾಡಿ, ಶಿಕ್ಷಣ ಕ್ಷೇತ್ರ ಬೆಳವಣಿಗೆಗೆ ಗ್ರಾಮಸ್ಥರು ಸಹಕಾರ ನೀಡುತ್ತಿದ್ದಾರೆ. ನೂತನ ಅಧ್ಯಕ್ಷರು ಸರ್ಕಾರಿ ಶಾಲೆಗಳ ಮೌಲ್ಯ ಕಾಪಾಡುವ ನಿಟ್ಟಿನಲ್ಲಿ ಪ್ರಥಮ ಹಂತದಲ್ಲಿಯೇ ಶಾಲೆಯ ಮಕ್ಕಳಿಗೆ ಕಂಪ್ಯೂಟರ್ ಶಿಕ್ಷಣ ತರಬೇತುಗೊಳಿಸಲು ಆಸಕ್ತಿ ಹೊಂದಿದ್ದು, ಸ್ವಂತ ಖರ್ಚಿನಲ್ಲಿ ಲ್ಯಾಪ್‍ಟಾಫ್ ಕಂಪ್ಯೂಟರ್ ನೀಡಿದ್ದಾರೆ. ಶಾಲಾ ವಿದ್ಯಾರ್ಥಿಗಳ ಆಧುನಿಕ ಶಿಕ್ಷಣದ ಅನುಭವ ಹೊಂದಲು ಸಹಕಾರಿಯಾಗಲಿದೆ ಎಂದರು.

ಕಾರ್ಯಕ್ರಮದಲ್ಲಿ ಶಾಲಾ ಸುಧಾರಣಾ ಸಮೀತಿ ನೂತನ ಅಧ್ಯಕ್ಷ ಪರಮೇಶಪ್ಪ ಹರಿಜನರನ್ನು ಸನ್ಮಾನಿಸಲಾಯಿತು.ಶಾಲಾ ಅಭಿವೃದ್ಧಿ ಸಮೀತಿ ಸದಸ್ಯ ಚಂದ್ರಶೇಖರ ಹಿತ್ತಲಮನಿ, ರಾಯಪ್ಪ ಹೊಂಬಳ, ಗದಿಗೆಪ್ಪ ಸಂದಿಕೇರಿ, ಮಹಾಂತೇಶ ಬಜಂತ್ರಿ,ಪಾರ್ವತ್ತೆವ್ವ ಸಂದಿಕೇರಿ, ಫಕ್ಕೀರಪ್ಪ ತಳವಾರ. ಅಲ್ಲದೇ ಸಿಆರ್‍ಪಿ ಎಂ.ಎನ್ ತೆವರಿ, ಶಿಕ್ಷಕ ಬಿ.ಬಿ. ಪುಟ್ಟಪ್ಪನವರ, ಮಂಜಯ್ಯಾ ಹೂಲಿಮಠ, ಹಾಗೂ ಗ್ರಾಮದ ಹಿರಿಯರಿದ್ದರು.

ಸುದ್ದಿ ಓದಿ