ಹೂವಿನ ಹಡಗಲಿ

ಯುವಕರ ಸ್ವಾವಲಂಬಿ ಬದುಕಿಗೆ ತರಬೇತಿ ಅಗತ್ಯ: ಶಾಸಕ ಪಿಟಿ.ಪಿ

ಯುವಕರ ಸ್ವಾವಲಂಬಿ ಬದುಕಿಗೆ ತರಬೇತಿ ಅಗತ್ಯ: ಶಾಸಕ ಪಿಟಿ.ಪಿ

ಹೂವಿನಹಡಗಲಿ: 20-ನಿರುದ್ಯೋಗ ವಿದ್ಯಾವಂತ ಯುವಕರ ಸ್ವಾವಲಂಬಿ ಬದುಕಿಗೆ  ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಅಗತ್ಯವಾಗಿದೆ ಎಂದು ಶಾಸಕ ಪಿ.ಟಿ.ಪರಮೇಶ್ವರನಾಯ್ಕ ಹೇಳಿದರು. 

ಪಟ್ಟಣದ ಐಟಿಐ ಕಾಲೇಜಿನಲ್ಲಿ ಸೋಮವಾರ ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ,ಜೀವನೋಪಾಯ ಇಲಾಖೆ,ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ,ಟಿಟಿಎಲ್ ಸಹಯೋಗದೊಂದಿಗೆ ತಾಂತ್ರಿಕ ಚಟುವಟಿಕಾ ಕೇಂದ್ರಗಳನ್ನಾಗಿ ಉನ್ನತೀಕರಿಸಲಾಗಿರುವ 150 ಐ.ಟಿ.ಐ.ಗಳ ಲೋಕಾರೆ​‍್ಣಯನ್ನು ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದು, ಕಾರ‌್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. 

ವಿದೇಶದಲ್ಲಿ ಐಟಿಐ ವಿದ್ಯಾರ್ಥಿಗಳಿಗೆ ಬೇಡಿಕೆ ಇದ್ದು, ರೈತರ ಮಕ್ಕಳ ವಿದ್ಯಾವಂತ ನಿರುದೋಗಿಗಳು ಇಂತಹ ತರಬೇತಿಗಳು ಜೀವನಕ್ಕೆ ಸಹಕಾರಿಯಾಗಲಿದ್ದು ಇದರ ಪ್ರಯೋಜನ ಪಡೆದುಕೊಳ್ಳಿ ಎಂದರು. 

ಈ ವೇಳೆ ಪುರಸಭೆ ಅಧ್ಯಕ್ಷ ಜ್ಯೋತಿಮಲ್ಲಣ್ಣ, ಮುಖಂಡರಾದ ಎಂ.ಪರಮೇಶ್ವರ​‍್ಪ, ಬಸವನಗೌಡ ಪಾಟೀಲ,ಅಟವಾಳಗಿ ಕೊಟ್ರೇಶ, ಪ್ರಾಚಾರ್ಯ ಕೃಪಾನಂದ,ಸಿಬ್ಬಂದಿ ಇದ್ದರು. 


ಸುದ್ದಿ ಓದಿ