ಗ್ರಂಥಾಲಯ ಮೇಲ್ವಿಚಾರಕರಿಗೆ ತರಬೇತಿ
Training for library supervisors
ಗ್ರಂಥಾಲಯ ಮೇಲ್ವಿಚಾರಕರಿಗೆ ತರಬೇತಿ
ಹೂವಿನ ಹಡಗಲಿ 24: ಪಟ್ಟಣದತಾಲೂಕು ಪಂಚಾಯಿತಿ ರಾಜೀವ್ ಗಾಂಧಿ ಸಭಾಂಗಣದಲ್ಲಿ ಗ್ರಾಮ ಪಂಚಾಯಿತಿಗಳ ವಿ.ಆರ್.ಡಬ್ಲ್ಯೂ ಹಾಗೂ ಗ್ರಂಥಾಲಯ ಮೇಲ್ವಿಚಾರಕರಿಗೆ ಒಂದು ದಿನದ ದರ್ಶಿನಿ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.ಗ್ರಾಮ ಪಂಚಾಯಿತಿ ಗ್ರಂಥಾಲಯಗಳಲ್ಲಿಒಂದು ದಿನದ ತರಬೇತಿ ನೀಡಲಾಯಿತು. ವಿಕಲಚೇತನರು ಬಳಸುವ ಸಹಾಯಕ ಸಾಧನಗಳ ಬಳಕೆ ಹಾಗೂ ನಿರ್ವಹಣೆ ಕುರಿತಾಗಿ ಸಹಾಯಕ ನಿರ್ದೆಶಕರು(ಪಂ.ರಾಜ್) ಹೇಮಾದ್ರಿನಾಯಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಗ್ರಾಮಗಳಲ್ಲಿರುವ ಪ್ರತಿಯೊಬ್ಬ ವಿಕಲಚೇತನರು ಗ್ರಂಥಾಲಯದ ಸಹಾಯಕ ಸಾಧನಗಳನ್ನು ಬಳಕೆ ಮಾಡಿಕೊಂಡು ಅವರಸಾಮಾನ್ಯ ಜ್ಞಾನ ಅಭಿವೃದ್ಧಿಗೊಳಿಸಿ ಕೊಳ್ಳಬೇಕು. ಈ ತರಬೇತಿ ಮೂಲಕ ನಿಮ್ಮಿಂದ ಗ್ರಾಮದ ಪ್ರತಿಯೊಬ್ಬ ವಿಕಲಚೇತನರು ಗ್ರಂಥಾಲಯಗಳಲ್ಲಿ ಅವರ ಹೆಸರನ್ನು ನೊಂದಣಿ ಮಾಡಿಸಿಕೊಳ್ಳಲು ಹಾಗೂ ನಿಮ್ಮ ಇಬ್ಬರ ಪರಿಶ್ರಮದಿಂದ ಗ್ರಂಥಾಲಯಗಳು ದೇಗುಲಗಳಾಗಬೇಕು ತಿಳಿಸಿದರು. ಜ್ಞಾನ ಎಂದುಈ ಸಂದರ್ಭದಲ್ಲಿ ತಾಲೂಕು ಯೋಜನಾಧಿಕಾರಿ ಯಾಸಿನ್ ತಾ.ಪಂ. ಸಿಬ್ಬಂದಿ, ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿ ಗಂಥಾಲಯ ಮೇಲ್ವಿಚಾರಕರು, ಯು/ವಿ. ಆರ್.ಡಬ್ಲ್ಯೂ ರವರು ಹಾಜರಿದ್ದರು.ತರಬೇತುದಾರರಾಗಿ ಗ್ರಂಥಾಲಯ ಮೇಲ್ವಿಚಾರಕರಾದ ದೊಡ್ಡಬಸಪ್ಪ ಮಂಜುನಾಥ್ ಕುರಿ ಹಾಗೂ ಎಂ ಆರ್ ಡಬ್ಲ್ಯೂ ಬಿ ಮಂಜುನಾಥ ಹಾಗೂ ಸರ್ಡ್ ಸಂಯೋಜಕರಾದ ಮೀರಾಬಾಯಿಯವರು ಹಾಜರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 