ಪವಿತ್ರ ಹಜ್ ಯಾತ್ರಾರ್ಥಿ ಹಾಜಿಗಳಿಗೆ ತರಬೇತಿ ಶಿಬಿರ ಕಾರ್ಯಾಗಾರ
ಸಿರುಗುಪ್ಪ 05: ಅಲ್ಲಾಹು ಅಕ್ಬರ್ ಮಾನವಕುಲದ ಉಜ್ವಲ ಸತ್ಯ ವಿಶ್ವಾಸಿಯ ಇಸ್ಲಾಂನ ಪ್ರತೀಕ ಹಜ್ ಯಾತ್ರಾರ್ಥಿ ಹಾಜಿಗಳು ಅಲ್ಲಾಹನ ಅತಿಥಿಗಳು ಮೊಹಮ್ಮದ್ ರಸೂಲುಲ್ಲಾ" ಸೊ"ರವರ ಭಾಗ್ಯವಂತರು ಜೀವನದಲ್ಲಿ ಒಂದು ಬಾರಿಯಾದರೂ ಹಜ್ ಕೈಗೊಳ್ಳಬೇಕು ಎಂಬುದು ಪ್ರತಿಯೊಬ್ಬ ಮುಸ್ಲಿಮನ ಆಶಯವಾಗಿದೆ ಎಂದು ಶಾಸಕ ಜಿ ಸೋಮಶೇಖರರೆಡ್ಡಿ ಅವರು ಹೇಳಿದರು.
ಬಳ್ಳಾರಿ ನಗರದ ಮೊಹಮ್ಮದೀಯ ಮಹಾ ವಿದ್ಯಾಲಯದ ಸಭಾ ಭವನದಲ್ಲಿ ಪವಿತ್ರವಾದ ಹಜ್ ಯಾತ್ರಾರ್ಥಿ ಹಾಜಿಗಳಿಗಾಗಿ ಆಯೋಜಿಸಿದ ತರಬೇತಿ ಶಿಬಿರ ಕಾರ್ಯಾಗಾರದಲ್ಲಿ ಅವರು ಭಾಗವಹಿಸಿ ಮಾತನಾಡುತ್ತಿದ್ದರು ಕರ್ನಾಟಕ ಸರ್ಕಾರದ ಸಾರಿಗೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಮಂತ್ರಿಗಳಾದ ಬಿ ಶ್ರೀರಾಮುಲು ಅವರು ಗೌರವಾನ್ವಿತ ಸನ್ಮಾನ್ಯ ಹಜ್ ಯಾತ್ರಾರ್ಥಿ ಹಾಜಿಗಳಿಗೆ ನಮಸ್ಕಾರ ಮಾಡುತ್ತಾ ಅಭಿನಂದಿಸುತ್ತಾ ಪರಸ್ಪರ ವಿನಿಮಯದೊಂದಿಗೆ ಹಾಜಿಗಳೆಲ್ಲರಿಗೂ ಗುಲಾಬಿ ಹೂಗಳನ್ನು ನೀಡುವ ಮೂಲಕ ಮಾತನಾಡಿ ನಮ್ಮೆಲ್ಲರ ಸೃಷ್ಟಿಕರ್ತ ಅಲ್ಲಾಹ್ ನೊಬ್ಬನೇ ನಾವೆಲ್ಲ ಮಾನವರು ಪರಸ್ಪರ ಸಹೋದರರು ಮುಸ್ಲಿಂನಾಗಿ ನಾನು ಪವಿತ್ರ ಹಜ್ ಯಾತ್ರೆಗೆ ಹೋದರೆ ಹೋದೇನು ಆದರೆ ಹಾಜಿ ಗಳಾದ ತಾವು ನಮ್ಮೆಲ್ಲರಿಗಾಗಿ ಸುಖ ಶಾಂತಿ ನೆಮ್ಮದಿ ಲಭಿಸುವಂತೆ ಪ್ರತಿಯೊಬ್ಬರಲ್ಲಿ ಭಾವೆಕ್ಯತೆ ಯ ನೆಲೆಸುವಂತೆ ಅಲ್ಲಾಹ್ ಮತ್ತು ಮೊಹಮ್ಮದ್ ಪೈಗಂಬರ್ ಅವರ ದಿವ್ಯ ಸನ್ನಿಧಿಯಲ್ಲಿ ನಮಾಜ್ ನಿರ್ವಹಿಸಿ ಜಿಯಾರತ್ ದರ್ಶನಗಳಲ್ಲಿ ಸರ್ವರಿಗೂ ಒಳ್ಳೆಯದಾಗಲಿ ಎಂದು ವಿನಯಪೂರ್ವಕ ದುವಾ ಮಾಡಬೇಕೆಂದು ಅವರು ಕೋರಿದರು ಸೌದಿ ಅರೇಬಿಯಾದ ಮಕ್ಕಾ ಮದೀನಾ ನಮ್ಮ ದೇಶದಿಂದ ಸಮುದ್ರ ದಾಟಿ ಬೇರೆ ದೇಶಕ್ಕೆ ತೆರಳುತ್ತೀರಿ ನಿಮ್ಮ ಸುಖಕರ ಸುರಕ್ಷಿತ ಪ್ರಯಾಣವಾಗಲೆಂದು ಶುಭ ಹಾರೈಸುತ್ತೇನೆ ಹಜ್ ನಲ್ಲಿ ವಿಶ್ವಾಸದ ಆತ್ಮ ಸಮರೆ್ಣ ಶಾಂತಿ ನೆಮ್ಮದಿ ತುಳುಕುವ ಹೊಸಲೋಕ ಪ್ರತಿಯೊಬ್ಬರ ಹೃದಯ ಅಭಿಲಾಷೆ ನ್ಯಾಯ ಮತ್ತು ಕರುಣೆಯಿಂದ ತುಂಬಿದ ಹೊಸ ಆಕಾಶ ಮತ್ತು ಭೂಮಿ ಸೃಷ್ಟಿ ಕರ್ತ ಅಲ್ಲಾಹನ ತೃಪ್ತಿ ಸಂತೋಷದ ಗುಣಗಳನ್ನು ಮೈಗೂಡಿಸಿ ಕೊಳ್ಳುವುದಾಗಿದೆ ಮಾನವರನ್ನೊಳಗೊಂಡ ವಿಶಿಷ್ಟ ಆದರ್ಶ ಪ್ರಿಯಾ ಪುನರಾವರ್ತಿ ಸಲ್ಪಡುವುದಾಗಿದೆ ಎಂದು ಅವರು ಹೇಳಿದರು. ಭಾರತ ಸರ್ಕಾರ ಕ್ಷೇತ್ರ ಪ್ರಚಾರ ನಿರ್ದೇಶನಾಲಯ ವಾರ್ತಾ ಮತ್ತು ಪ್ರಸಾರ ಜನಸಂಪರ್ಕ ಸಚಿವಾಲಯ ಜನಾಭಿಪ್ರಾಯ ಮುಖಂಡರು ಬಳ್ಳಾರಿ ಜಿಲ್ಲಾ ವಕ್ಫ್ ಕಮೀಟಿ ಮಾಜಿ ಸದಸ್ಯರು ಅಲ್ ಹಾಜ್ ಎ ಅಬ್ದುಲ್ ನಬಿ ಚಿಸ್ತಿ ನಿಜಾಮಿ, ಜಿಲ್ಲಾ ವಕ್ಫ್ ಸಲಹಾ ಸಮಿತಿ ಮಾಜಿ ಅಧ್ಯಕ್ಷರಾದ ರಿಜ್ವಾನ್, ಅಯಾಜ್, ಮುಸ್ಲಿಂ ಮುಖಂಡರಾದ ಗುಜರಿ ಅಜೀಜ್, ಬಳ್ಳಾರಿ ನಗರದ ಜನಪ್ರತಿನಿಧಿಗಳು ,ನಿವೃತ್ತಿ ಪೊಲೀಸ್ ಎಎಸ್ಐ ಚಾಂದ್ ಬಾಷಾ ,ಸಿರುಗುಪ್ಪದ ಸೌದಾಗರ್ ಕೊಲ್ಮಿ ಮೊಹಮ್ಮದ್ ಇಲಿಯಾಸ್, ಕೆ ಡಾ ಜಲೀಲ್ ಸಾಬ್,ಚೌದ್ರಿ ದಸ್ತಗೀರ್, ಎಸ್ ಆರಿಫುಲ್ಲಾ,ಧಾರ್ಮಿಕ ಗುರುಗಳು, ಪಂಡಿತರು, ವಿದ್ವಾಂಸರು, ಮೌಲಾನಾ ಹಫೀಜ್ ಮುರ್ತುಜಾಖಾನ್ ಸೈಯದ್ ಸಾದಾತ್ ,ಹಜ್ ಸಂಪನ್ಮೂಲ ವ್ಯಕ್ತಿಗಳು ಹಜ್ ಕರ್ತವ್ಯ ವಿಧಿ ವಿಧಾನ ಮಾಹಿತಿ ವಿವರಿಸಿ ಮನ ತಲುಪುವಂತೆ ಹಾಜಿಗಳಿಗೆ ಉಪನ್ಯಾಸ ನೀಡಿದರು ಬಳ್ಳಾರಿ ಜಿಲ್ಲೆಯ ಎಲ್ಲಾ ಸುಮಾರು 100ಮಂದಿ ಹಾಜಿಗಳು ಭಾಗವಹಿಸಿದರು.