ಅಕ್ರಮ ನಗದು ಹಣ ಸಾಗಾಟ : 4 ಲಕ್ಷ ರೂ. ವಶಕ್ಕೆ ಪಡೆದ ಅಧಿಕಾರಿಗಳು
ಲೋಕದರ್ಶನ ವರದಿ
ಸಂಕೇಶ್ವರ : ಯಾವದೇ ದಾಖಲೆ ಇಲ್ಲದೆ ಅಕ್ರಮವಾಗಿ ಹಣ ಸಾಗಾಟ ಮಾಡುತ್ತಿದ್ದ 4 ಲಕ್ಷ ರೂ. ನಗದು ಹಣವನ್ನು ಚುನಾವಣಾ ಅಧಿಕಾರಿಗಳು ವಶಕ್ಕೆ ಪಡೆದಿರುವ ಘಟನೆ ಹುಕ್ಕೇರಿ ತಾಲೂಕಿನ ಹಿಟ್ನಿ ನಾಕಾದಲ್ಲಿ ನಡೆದಿದೆ.
ಹುಕ್ಕೇರಿ ತಾಲೂಕಿನ ಗಡಿಗೆ ಹೊಂದಿಕೊಂಡಿರುವ ಹಿಟ್ನಿ ನಾಕಾದ ಚೆಕ್ ಪೊಸ್ಟ್‌ನಲ್ಲಿ ವಾಹನ ತಪಾಸಣೆ ಮಾಡುತಿರುವಾಗ ದಾಖಲೆ ರಹಿತ 4 ಲಕ್ಷ ರೂಪಾಯಿ ಚುನಾವಣೆ ಅಧಿಕಾಗಳು ವಶಪಡಿಸಿಕೊಂಡಿದ್ದಾರೆ. ಪೋಲಿಸ್ ಇನ್ಸಪೇಕ್ಟರ ಪ್ರಲ್ಹಾದ ಚನ್ನಗಿರಿ ನೇತೃತ್ವದಲ್ಲಿ ಎಸ್‌ಎಸ್‌ಟಿ ಅಧಿಕಾರಿ ಅಜೀತ ನಿಷಾಂಧರ, ಎಮ್‌ಸಿಸಿ ಅಧಿಕಾರಿ ಡಿ ಬಸವರಾಜ, ಎಪ್.ಎಸ್.ಟಿ ದಯಾನಂದ ಮೋರಬ ಉಪಸ್ಥಿತರಿದ್ದರು.