ಧಾರಾಕಾರ ಮಳೆ: ಶ್ರಮಬಿಂದು ಸಾಗರಕ್ಕೆ ಅಂದಾಜು 50ಸಾವಿರ ಕ್ಯೂಸೆಕ್ ಅಧಿಕ ನೀರು
ಜಮಖಂಡಿ 17: ತಾಲೂಕಿನ ಚಿಕ್ಕಪಡಸಲಗಿ ಶ್ರಮಬಿಂದು ಸಾಗರ ಬ್ಯಾರೇಜ್ ಸಂಪೂರ್ಣ ಜಲಾವೃತವಾದೆ. ಮಹಾರಾಷ್ಟ್ರದ ಕೃಷ್ಣಾ ಜಲಾಯನ ಪ್ರದೇಶದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಗ್ರಾಮದ ಶ್ರಮಬಿಂದು ಸಾಗರಕ್ಕೆ ಅಂದಾಜು 50ಸಾವಿರ ಕ್ಯೂಸೆಕ್ ಅಧಿಕ ನೀರು ಹರಿದು ಬರುತ್ತಿದೆ.
ಅಂದಾಜು 4 ಟಿಎಂಸಿ ನೀರು ಸಂಗ್ರಹ ಸಾಮರ್ಥ ಹೊಂದಿರುವ ಚಿಕ್ಕಪಡಸಲಗಿ ಬ್ಯಾರೇಜ್ ಬೇಸಿಗೆಯಲ್ಲಿ ನೀರು ತಡೆ ಹಿಡಿದು. ಸಂಗ್ರಹವಿದ್ದ ನೀರನ್ನು ಜಮಖಂಡಿ ನಗರ ಸೇರಿದಂತೆ ಬ್ಯಾರೇಜ್ ನೀರಿನ ಮೇಲೆ ಅವಲಂಬಿತವಾಗಿದ್ದ ಗ್ರಾಮಗಳು ಈ ನೀರನ್ನು ಬಳಸಿಕೊಳ್ಳುತ್ತವೆ.ಜಮಖಂಡಿ ನಗರ ಸೇರಿದಂತೆ ನದಿ ತೀರದ ಗ್ರಾಮಗಳಾದ ಚಿಕ್ಕಪಡಸಲಗಿ, ಆಲಗೂರ, ನಾಗನೂರ, ಹಿರೇಪಡಸಲಗಿ, ಜಂಬಗಿ, ಶೂರ್ಾಲಿ, ಮುತ್ತೂರ, ಕಂಕಣವಾಡಿ, ಮೈಗೂರ, ಅಥಣಿ ತಾಲೂಕಿನ ಗ್ರಾಮಗಳಾದ ಸವದಿ, ಝುಂಜರವಾಡ, ಸೇರಿದಂತೆ ಅನೇಕ ಗ್ರಾಮಗಳಿಗೆ ಚಿಕ್ಕಪಡಸಲಗಿ ಬ್ಯಾರೇಜ್‌ನಲ್ಲಿಯ ನೀರು ಬೇಸಿಗೆಯಲ್ಲಿ ಜೀವಜಲವಾಗಿರುತ್ತದೆ.ಮಳೆಗಾಲ ಆರಂಭವಾಗಿ ಕೃಷ್ಣಾ ಕಣಿವೆಯಲ್ಲಿ ಮಳೆ ಆಗುತ್ತಿರುವ ಹಿನ್ನಲೆ ನೀರಿನ ಹರಿವಿನಲ್ಲಿ ಏರಿಕೆ ಕಂಡು ಬರುತ್ತಿದೆ.