ಇಂದು ಸಂತ ಬಾಳು ಮಾಮಾರ ಜಯಂತೋತ್ಸವ
ಯರಗಟ್ಟಿ 14: ಸಮೀಪದ ಹಿರೇಬೂದನೂರ ಗ್ರಾಮದಲ್ಲಿ ಸಂತ ಬಾಳು ಮಾಮಾರ ಜಂತೋತ್ಸವ ಹಾಗೂ ನೂತನ ಬೆಳ್ಳಿಯ ಉತ್ಸವ ಮೂರ್ತಿ ಲೋಕಾರೆ್ಣ ಕಾರ್ಯಕ್ರಮ ಜರಗುವುದು. ಮಂಗಳವಾರ ದಿ. 15 ರಂದು ಬೆಳಿಗ್ಗೆ ಬಾಳು ಮಾಮಾ ಮೂರ್ತಿಗೆ ರುದ್ರಾಭಿಷೇ, ಪುಷ್ಪಾರ್ಚನೆ ನಂತರ ಸುಮಂಗಲೆಯರ ಆರತಿ ಮೇಳೆ, ಕುಂಭಮೇಳೆ, ಡೊಳ್ಳಿನ ವಾಲಗ, ಭಜನೆ, ಸಕಲ ವಾಧ್ಯಗೋಷ್ಠಿಯೊಂದಿಗೆ ಬಾಳಯ್ಯ ಮಠದಿಂದ ಗ್ರಾಮದ ಪ್ರಮುಖ ಬೀದಿಗಳಲ್ಲಿ ನೂತನ ಬೆಳ್ಳಿ ಮೂರ್ತಿ ಮೆರವಣಿಗೆಯೊಂದಿಗೆ ಬಾಳು ಮಾಮಾ ದೇವಸ್ಥಾನ ತಲಪುರುವುದು.
ಈ ವೇಳೆ ಬಾಳು ಮಾಮಾ ದೇವಸ್ಥಾನ ಟ್ರಸ್ಟ ಅಧ್ಯಕ್ಷರಾದ, ನಾಗರಾಜ ದೇಸಾಯಿ, ರಾಜಶೇಖರ ಉಣ್ಣೆ, ವಾಣಿ ಉಣ್ಣೆ, ಶ್ಲೋಕ ಉಣ್ಣೆ, ಸೋಮಶೇಖರ ಉಣ್ಣೆ, ಸ್ನೇಹಾ ಉಣ್ಣೆ, ವೇದ ಉಣ್ಣೆ, ವಿ. ಬಿ. ಕೊಟ್ಟೂರ, ಸತೀಶ ಪತ್ತಾರ ಇವರಿಗೆ ಸತ್ಕಾರ ಕಾರ್ಯಕ್ರಮ ಜರಗುವುದು ನಂತರ ಮಹಾಪ್ರಸಾದದೊಂದಿ ಕಾರ್ಯಕ್ರಮ ಮಂಗಲಗೊಳ್ಳುವುದು ಎಂದು ದೇವಸ್ಥಾನದ ಟ್ರಸ್ಟ ಪ್ರಕಟಣೆ ಮೂಲಕ ತಿಳಿಸಿದೆ.