ಗಂಗಾವತಿ

ಇಂದು ಕಾವ್ಯಲೋಕ ಸಂಘಟನೆಯ 100ನೇಯ ಕವಿಗೋಷ್ಟಿ

ಇಂದು ಕಾವ್ಯಲೋಕ ಸಂಘಟನೆಯ 100ನೇಯ ಕವಿಗೋಷ್ಟಿ

ಗಂಗಾವತಿ: ಸ್ಥಳೀಯ ಕವಿಗಳನ್ನು ಪ್ರೋತ್ಸಾಹಿಸುವ ಸುದ್ದುದ್ದೇಶದಿಂದ ಪ್ರಾರಂಭಗೊಂಡ ಕಾವ್ಯಲೋಕ ಸಂಘಟನೆಯ 100ನೇಯ ಕವಿಗೋಷ್ಟಿ ಸೆ.10 ಭಾನುವಾರ ನಗರದ ಶ್ರೀಚನ್ನಬಸವ ಸ್ವಾಮಿ ಕಲಾ ಮಂದಿರದಲ್ಲಿ ಬೆಳಗ್ಗೆ 9.30ಕ್ಕೆ ಖ್ಯಾತ ಚುಟುಕು ಬ್ರಹ್ಮ ದುಂಡಿರಾಜ್ ಇವರು ಉದ್ಘಾಟಿಸಲಿದ್ದಾರೆ ಎಂದು ಕಾವ್ಯ ಲೋಕ ಸಂಘಟನೆಯ ಗೌರವಧ್ಯಕ್ಷರಾದ ಡಾ.ಶಿವಕುಮಾರ್ ಮಾಲಿಪಾಟೀಲ್ ಹೇಳಿದರು. 

ಅವರು ನಗರದ ಪತ್ರಿಕಾಭವನದಲ್ಲಿ ಶನಿವಾರ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿದರು. 

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು  ಶ್ರೀ ನಾಗಭೂಷಣ ಶಿವಾಚಾರ್ಯರು ವಹಿಸಲಿದ್ದಾರೆ. ಖ್ಯಾತ ಸಾಹಿತಿ ಹೇಮಾ ಪಟ್ಟಣಶೆಟ್ಟಿ, ಕಸಾಪ ಕೊಪ್ಪಳ ಜಿಲ್ಲಾಧ್ಯಕ್ಷ ಶರಣೇಗೌಡ ಪೊ.ಪಾ, ತಾಲೂಕಾ ಅಧ್ಯಕ್ಷ ಶ್ರೀನಿವಾಸ್ ಅಂಗಡಿ, ಉದ್ಯಮಿ ಸುರೇಶ್ ಸಿಂಗನಾಳ್, ಡಾ.ಮಲ್ಲನಗೌಡ, ಡಾ.ಈಶ್ವರ್ ಸವಡಿ, ಐಎಂಎ ಮೈತ್ರಿ ಅಧ್ಯಕ್ಷೆ ಸುಲೋಚನಾ ಚಿನವಾಲರು, ಸಾಹಿತಿ ಜಾಜಿ ದೇವೇಂದ್ರ​‍್ಪ ಪಾಲ್ಗೊಳ್ಳಲಿದ್ದು, ಮೈಲಾರ​‍್ಪ ಬೂದಿಹಾಳ ಇವರ ಬಾರೋ ಕಂದಾ ಶಾಲೆಗೆ ಮಕ್ಕಳ ಪದ್ಯ ಲೋಕರೆ​‍್ಣಗೊಳ್ಳಲಿದ್ದು ಕೃತಿ ಕುರಿತು ಉಪನ್ಯಾಸಕರಾದ ಡಾ.ಸೋಮಕ್ಕ ಮಾತನಾಡಿದ್ದಾರೆ ಎಂದು ವಿವರಿಸಿದರು. ರಾಜ್ಯ ಇತಿಹಾಸದಲ್ಲೇ ನೂರು ಕವಿ ಗೋಷ್ಟಿಗಳನ್ನು ಅತ್ಯಂತ ಅರ್ಥಪೂರ್ಣವಾಗಿ  ಆಚರಿಸಿ ಕೀತಿ ಗಂಗಾವತಿ ಕಾವ್ಯ ಲೋಕಕ್ಕೆ ಸಲ್ಲುತ್ತದೆ. ಸಂಘಟನೆಯ ಅಧ್ಯಕ್ಷ ಪರಶುರಾಮ್ ಪ್ರೀಯ ಹಾಗು ಪ್ರಧಾನ ಕಾರ್ಯದರ್ಶಿ ಆಗಿದ್ದು ಶರಣಪ್ಪ ತಳ್ಳಿಯವರ ಪರಿಶ್ರಮ ಮರೆಯುವಂತಿಲ್ಲ. ಹಲವು ವಿಶಿಷ್ಟ ಕಾರ್ಯಕ್ರಮಗಳನ್ನು ಆಯೋಜಿಲಾಗಿದೆ. ರಾಜ್ಯ, ಜಿಲ್ಲಾ ಹಾಗು ವಿಭಾಗೀಯ ಕವಿಗೋಷ್ಟಿಗಳನ್ನು ಆಯೋಜಿಸಲಾಗಿದ್ದು, ಅನೇಕ ಕವಿಗಳಿಗೆ ವೇದಿಕೆ ಒದಗಿಸಕೊಡಲಾಗಿದೆ. ನೂರನೇ ಕವಿಗೋಷ್ಟಿಯಲ್ಲಿ ಬಾಗಲಕೋಟಿ, ರಾಯಚೂರು, ಚಿತ್ರದುರ್ಗಾ ಇತರೆ ಹೊರ ರಾಜ್ಯಗಳಿಂದ ಸುಮಾರು 25ಕ್ಕು ಹೆಚ್ಚು ಕವಿಗಳು ಆಗಮಿಸಲಿದ್ದಾರೆ. ಬಯಲಾಟ ಅಕಾಡೆಮಿ ಗಂಗಾವತಿಗೆ ವರ್ಗಾ ಮಾಡುವಂತೆ ಸಚಿವ ತಂಗಡಗಿಯವರ ಗಮನ ಸೆಳೆದಿದ್ದು ಮುಂದಿನ ದಿನಗಳಲ್ಲಿ ಜಾನಪದ ಸಾಹಿತ್ಯ ಸಂಗ್ರಹಕ್ಕೆ ಹೆಚ್ಚು ಆದ್ಯತೆ ನೀಡಲಾಗುವುದು ಎಂದು ಹೇಳಿದರು. 

ಕಾವ್ಯ ಲೋಕ ಸಂಘಟನೆಯ  ಉಪಾಧ್ಯಕ್ಷರು ಹಾಗು ಸಾಹಿತಿ ಶರಣಪ್ಪ ತಳ್ಳಿ ಮಾತನಾಡಿ, ಸುಮಾರು ಎಂಭತ್ತಕ್ಕು ಹೆಚ್ಚು ಕವಿಗಳು ಗೋಷ್ಟಿಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಮೊದಲಿಗೆ ಸಂಗೀತ ಕಾರ್ಯಕ್ರಮ, ನಂತರ ಮೂರು ಕವಿಗೋಷ್ಟಿ ಜರುಗಲಿವೆ. ಕೊನೆಯ ಗೋಷ್ಟಿ ಚುಟುಕು ಕವನ ವಾದನ ನಡೆಯಲಿದೆ. ಸಾಧಕರಿಗೆ ಸನ್ಮಾನ ಜರುಗಲಿದೆ. ಕಾವ್ಯ ಲೋಕ ಸಂಘಟನೆ ಗಂಗಾವತಿಯಲ್ಲಿ ಸಾಹಿತ್ಯ ಕ್ಷೇತ್ರಕ್ಕೆ ತನ್ನದೆ ಕೊಡುಗೆ ನೀಡಿದೆ ಸುಮಾರು 22 ಕೃತಿಗಳ ಲೋಕರೆ​‍್ಣಗೆ ಈ ಸಂಘಟನೆ ವೇದಿಕೆ ಒದಗಿಸಿದೆ. ಮಕ್ಕಳ ಸಾಹಿತ್ಯಕ್ಕೂ ಆದ್ಯತೆ ನೀಡಿ ಮೂರು ಶಾಲೆಗಳಲ್ಲಿ ಮಕ್ಕಳ ಕವನ ವಾಚನದೊಂದಿಗೆ ಅವರಲ್ಲಿ ಸಾಹಿತ್ಯ ಕೃಷಿ ಮನೋಭಾವ ಹೆಚ್ಚಿಸಲಾಗಿದೆ ಎಂದರು. ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಮೈಲಾರ​‍್ಪ ಬೂದಿಹಾಳ ಅವರು ಇದ್ದರು. 


ಸುದ್ದಿ ಓದಿ