ಬೈಲಹೊಂಗಲ

ಇಂದು ರಾಷ್ಟ್ರ ಮಟ್ಟದ ಪ್ರಸಿದ್ಧ ಪೈಲ್ವಾನರ ಭಾರೀ ಕುಸ್ತಿ ಪಂದ್ಯಾವಳಿ

ಇಂದು ರಾಷ್ಟ್ರ ಮಟ್ಟದ ಪ್ರಸಿದ್ಧ ಪೈಲ್ವಾನರ ಭಾರೀ ಕುಸ್ತಿ ಪಂದ್ಯಾವಳಿ

ಲೋಕದರ್ಶನ ವರದಿ

ಪತ್ರಿಕಾಗೋಷ್ಠಿಯಲ್ಲಿ ವಿಠ್ಠಲ ಕಡಕೋಳ ಹೇಳಿಕೆ: ನಾಡಿನ ವಿವಿಧ ಮೂಲೆಗಳಿಂದ ಲಕ್ಷಾಂತರ ಕುಸ್ತಿ ಪ್ರೇಮಿಗಳು ಆಗಮಿಸುವ ನಿರೀಕ್ಷೆ

ಬೈಲಹೊಂಗಲ 14: ಕರುನಾಡು ವಿಜಯಸೇನೆ ಸಂಘಟನೆ ಆಶ್ರಯದಲ್ಲಿ  ಗುರುವಾರ ದಿ.15 ರಂದು ಮಧ್ಯಾಹ್ನ 2.30 ಕ್ಕೆ ರಾಷ್ಟ್ರ ಮಟ್ಟದ ಪ್ರಸಿದ್ಧ ಪೈಲ್ವಾನರಿಂದ ಭಾರೀ ಕುಸ್ತಿ ಪಂದ್ಯಾವಳಿಗಳು ಜರುಗಲಿವೆ ಎಂದು ಕರುನಾಡು ವಿಜಯ ಸೇನೆ ತಾಲೂಕಾ ಅಧ್ಯಕ್ಷ  ವಿಠ್ಠಲ ಕಡಕೋಳ ಹೇಳಿದರು.

    ಅವರು ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, ಗಂಡು ಮೆಟ್ಟಿನ ನಾಡಿನಲ್ಲಿ ರಾಷ್ಟ್ರ ಮಟ್ಟದ ಪ್ರಸಿದ್ಧ ಪೈಲ್ವಾನರಿಂದ ಕುಸ್ತಿಗಳನ್ನು ಏರ್ಪಡಿಸಲಾಗಿದ್ದು ನಾಡಿನ ವಿವಿಧ ಮೂಲೆಗಳಿಂದ ಲಕ್ಷಾಂತರ ಕುಸ್ತಿ ಪ್ರೇಮಿಗಳು ವೀಕ್ಷಿಸಲಿದ್ದಾರೆಂದು ಅವರು ತಿಳಿಸಿದರು. 

  ಪೂನಾದ ಕಾಕಾಪವರ ಕಿರಣ ಭಗತ  ಪೈಲ್ವಾನ ಜೊತೆ ಪಂಜಾಬ ರೇಲ್ವೆ ಸೆಂಟರ್ ಪ್ರವೀಣ ಬೋಲಾ ಪೈಲ್ವಾನ ಸೆಣಸಾಟ  ನಡೆಯಲಿದ್ದು, ಅಮಿತ ಪೂನಾ ಪೈಲ್ವಾನ ಜೊತೆ ಕೊಲ್ಲಾಪುರ ಕನರ್ಾಟಕ ಕೇಸರಿ ನಾಗರಾಜ ಬಸಿಡೋಣಿ ಪೈಲ್ವಾನ ಸೆಣಸಲಿದ್ದು, ಸಾಂಗಲಿಯ ಹನುಮಂತ ಇಂಗಳಗಿ ಪೈಲ್ವಾನ ಜೊತೆ ಧಾರವಾಡ ಜ್ಯೋತಿ ತಾಲೀಮ ಪರಶುರಾಮ ದಾವಣಗೆರೆ ಪೈಲ್ವಾನ ಕಾದಾಡಲಿದ್ದು, ಪೂನಾ ಜಮಖಂಡಿಯ ಗೋಪಾಲ ಕೋಳಿ ಪೈಲ್ವಾನ ಜೊತೆ ಕೊಲ್ಲಾಪುರ ಗಂಗಾವೇಶ ತಾಲೀಮ ಶುಭಂ ಕೊಳೇಕರ ಪೈಲ್ವಾನ ಮದ್ಯೆ ಹಾಗೂ ಲೋಕೇಶ ಪವಾರ ಪೈಲ್ವಾನ ಜೊತೆ ಮುಬಾರಕ ಇಂಗಳಗಿ ಪೈಲ್ವಾನ ಸೆಣಸಲಿದ್ದಾರೆ. ಇನ್ನೂ ಅನೇಕ ಖ್ಯಾತ ಪೈಲ್ವಾನರ ಕುಸ್ತಿಗಳು ಜರುಗಲಿವೆ.

  ಮಹಿಳಾ ಕುಸ್ತಿ ಪಟು ತಾಕ್ಕನಹಳ್ಳಿ ಸುಜಾತಾ ಪಾಟೀಲ ಪೈಲ್ವಾನ ಜೊತೆ ಹಳಿಯಾಳ ಲೀನಾ ಸಿದ್ದಿ ಪೈಲ್ವಾನ ಕಾದಾಟ ನಡೆಯಲಿದೆ. ವಿಜಯಪುರದ ತನುಜಾ ಕುರಾಡೆ ಪೈಲ್ವಾನ ಜೊತೆ ಹಳಿಯಾಳದ ಜ್ಯೋತಿ ಗಾಡಿ ಪೈಲ್ವಾನ ಸೆಣಸಲಿದ್ದಾರೆ. 

  ಈ  ಕುಸ್ತಿ ಪಂದ್ಯಾವಳಿಗೆ  ಕರುನಾಡು ವಿಜಯಸೇನೆ ರಾಜ್ಯಾಧ್ಯಕ್ಷ ಎಚ್.ಎನ್.ದೀಪಕ ಹಾಗೂ ರಾಜ್ಯ ಪದಾಧಿಕಾರಿಗಳು, ಜಿಲ್ಲಾ ಪದಾಧಿಕಾರಿಗಳು  ಆಗಮಿಸುತ್ತಿದ್ದು ಅವರುಗಳನ್ನು ಕಿತ್ತೂರು ಚೆನ್ನಮ್ಮ ವೃತ್ತದಲ್ಲಿ ಕಾರ್ಯಕರ್ತರು ಅದ್ದೂರಿಯಾಗಿ ಬರಮಾಡಿಕೊಂಡು ಬೃಹತ್ ಬೈಕ್ ರ್ಯಾಲಿ ಮೂಲಕ ನಗರದ ಪ್ರಮುಖ ಬೀದಿಗಳಲ್ಲಿ ಭವ್ಯ ಮೆರವಣಿಗೆ ಮೂಲಕ ಕುಸ್ತಿ ಮೈದಾನಕ್ಕೆ ಕರೆತರಲಾಗುವುದು ಎಂದು ವಿಠ್ಠಲ ಕಡಕೋಳ ತಿಳಿಸಿದರು. ಅಂದು ಹಿರಿಯ ಪೈಲ್ವಾನರಾದ ಬಿ.ಎಂ.ಕುಡಸೋಮನ್ನವರ ಹಾಗೂ ಹಿರಿಯ ಗಣ್ಯರಾದ ಗಂಗಪ್ಪಣ್ಣ ಬೋಳನ್ನವರ ಅವರ  ನಿವಾಸಕ್ಕೆ ತೆರಳಿ ಸನ್ಮಾನಿಸುವ ಕಾರ್ಯ ನಡೆಯಲಿದೆ ಎಂದರು.

  ಪ್ರಭು ನೀಲಕಂಠ ಮಹಾಸ್ವಾಮೀಜಿ ಹಾಗೂ ಮಹಾಂತಯ್ಯ ಶಾಸ್ರ್ತಿ ಆರಾದ್ರಿಮಠ ಅವರ ಸಾನಿಧ್ಯದಲ್ಲಿ ಕರುನಾಡು ವಿಜಯ ಸೇನೆ ರಾಜ್ಯಾಧ್ಯಕ್ಷ ಎಚ್.ಎನ್.ದೀಪಕ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕುಸ್ತಿ ಪಂದ್ಯಾವಳಿಯನ್ನು ಸರ್ವ ಯುವಕ ಸಂಘಗಳ ನೇತಾರರಾದ ಶ್ರೀಶೈಲ ಬೋಳನ್ನವರ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ, ಶಾಸಕಿ ಲಕ್ಷ್ಮೀ ಹೆಬ್ಬಾಳಕರ, ರಾಜ್ಯ ಯುವ ಘಟಕದ ಅಧ್ಯಕ್ಷ ಆರ್.ಎಸ್.ಮಹೇಶ, ಪುರಸಭೆ ಅಧ್ಯಕ್ಷ ಬಸವರಾಜ ಜನ್ಮಟ್ಟಿ, ಪ್ರಗತಿಪರ ರೈತರಾದ ಮಲ್ಲಿಕಾಜರ್ುನ ಬೋಳನ್ನವರ, ಪತ್ರಕರ್ತರಾದ ಮಹಾಂತೇಶ ತುರಮರಿ, ಈಶ್ವರ ಹೋಟಿ, ಕಲಾವಿದ ಸಿ.ಕೆ.ಮೆಕ್ಕೆದ, ಡಿವೈಎಸ್ಪಿ ಶಿವಾನಂದ ಕಟಗಿ, ಸಿಪಿಐ ಪಿ.ವಿ.ಸಾಲಿಮಠ, ಜಿಲ್ಲಾಧ್ಯಕ್ಷ ಸುರೇಶ ಇಟಗಿ, ಗೌರವಾಧ್ಯಕ್ಷ ರವಿ ಭದ್ರಕಾಳಿ, ಸಾಮಾಜಿಕ ಕಾರ್ಯಕರ್ತ ರಫೀಕ ಬಡೇಘರ ಆಗಮಿಸಲಿದ್ದು ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ ನಡೆಯಲಿದೆ ಎಂದರು. 

  ಗೋಷ್ಠಿಯಲ್ಲಿ ಆನಂದ ಯರಗಟ್ಟಿ, ಬಸವರಾಜ ಯಾಸನ್ನವರ, ಅನಿಲ ಬೋಳನ್ನವರ, ಬಸವರಾಜ ಹುಲಕುಂದ, ಮಂಜುನಾಥ ಹರಕುಣಿ, ಮಹಾಂತೇಶ ತೋಟಗಿ ಉಪಸ್ಥಿತರಿದ್ದರು 

ಸುದ್ದಿ ಓದಿ