ಇಂದು ಗೊರಗುದ್ದಿ ಶ್ರೀ ವಿಠ್ಠಪ್ಪದೇವರ ಜಾತ್ರೆ
ಯರಗಟ್ಟಿ: ಸಮೀಪದ ಗೊರಗುದ್ದಿ ವಿಠ್ಠಪ್ಪದೇವರ ಜಾತ್ರೆಯು ಸೋಮವಾರ ದಿ.17ರಂದು ಅತೀ ವಿಜೃಂಭಣೆಯಿಂದ ಜರುಗುವುದು. ಬೆಳಿಗ್ಗೆ ದೇವರ ಗದ್ದುಗೆಗೆ ಅಭಿಷೇಕ ಕಾರ್ಯಕ್ರಮ ಜರುಗುವುದು. ನಂತರ ಎಲ್ಲಾ ದೇವರ ಪಲ್ಲಕ್ಕಿಗಳಿಗೆ ಊರಿನ ಸುಮಂಗಲೆಯರು ನೈವಿಧ್ಯವನ್ನು ಅರ್ಿಸಿ ಊಡಿ ತುಂಬುವ ಕಾರ್ಯಕ್ರಮ ಜರುಗುವುದು. ಮಧ್ಯಾಹ್ನ 12 ಗಂಟೆಗೆ ಸಾಮೂಹಿಕ ವಿವಾಹ ಕಾರ್ಯಕ್ರಮಗಳು ಜರುಗುವವು. ರಾತ್ರಿ 10.30ಕ್ಕೆ ಕುರುಬ ಹಚ್ಚಿದ ಕುಂಕುಮ ಎಂಬ ಸುಂದರ ಸಾಮಾಜಿಕ ನಾಟಕ ಜರುಗುವುದು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಿಠ್ಠಪ್ಪ ಜೋತೆನ್ನವರ ವಹಿಸುವರು. ಉದ್ಘಾಟಕರು ಚಿದಾನಂದ ಸುಣಧೋಳಿ ಹಾಗೂ ಮೌನೇಶ್ವರ ಮಾಲಿಪಾಟೀಲ ಸಿಪಿಐ ಮುರಗೋಡ, ಜ್ಯೋತಿ ಬೆಳಗಿಸುವರು ನಿಂಗಪ್ಪ ಗೇಟಿನ, ಅಧ್ಯಕ್ಷತೆ ಸಿದ್ದಪ್ಪ ಸಿಂಗನ್ನವರ, ಅತಿಥಿಗಳಾಗಿ ಊರಿನ ಪ್ರಮುಖರು ಹಾಗೂ ಊರಿನ ಹಿರಿಯರು ಭಾಗವಹಿಸುವರು.