ಯರಗಟ್ಟಿ

ಯರಗಟ್ಟಿ ಅರ್ಬನ್ ಕೋ-ಆಪ್ ಬ್ಯಾಂಕ್ ಲಾಭದತ್ತ

ಯರಗಟ್ಟಿ ಅರ್ಬನ್ ಕೋ-ಆಪ್ ಬ್ಯಾಂಕ್ ಲಾಭದತ್ತ

ಯರಗಟ್ಟಿ: ದಿ. ಯರಗಟ್ಟಿ ಅರ್ಬನ್ ಕೋ-ಆಪ್ ಕ್ರೆಡಿಟ್ ಬ್ಯಾಂಕ್ ಪ್ರಸಕ್ತ ಮಾರ್ಚ್‌ ಅಂತ್ಯಕ್ಕೆ ?63,41,772 ಕೋಟಿ ಲಾಭ ಗಳಿಸಿ ಪ್ರಗತಿಯಲ್ಲಿ ಸಾಗುತ್ತಿದೆ ಎಂದು ಸೊಸೈಟಿ ಅಧ್ಯಕ್ಷ ಮಹಾಂತೇಶ ಜಕಾತಿ ಹೇಳಿದರು. 

ತಾಲೂಕಿನ  ದಿ. ಯರಗಟ್ಟಿ ಅರ್ಬನ್ ಕೋ-ಆಪ್ ಕ್ರೆಡಿಟ್ ಬ್ಯಾಂಕ್ 2022ಹಿ23ನೇ ಸಾಲಿನ ವಾರ್ಷಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸೊಸೈಟಿಯು ಈವರೆಗೆ ?45,77,17,417 ಕೋಟಿ ಠೇವು ಸಂಗ್ರಹ, ?27,21,74,232 ಕೋಟಿ ವಿವಿಧ ಕ್ಷೇತ್ರಗಳಿಗೆ ಸಾಲವನ್ನು ವಿತರಿಸಿದೆ. ಶೇರುದಾರರಿಗೆ ಶೇ 25ರಷ್ಟು ಲಾಭಾಂಶವನ್ನು ವಿತರಿಸಿದ್ದು, ಈಗಾಗಲೇ 2 ಶಾಖೆಗಳನ್ನು ಪ್ರಾರಂಭಿಸಿದೆ. ನಾಲ್ಕು ಶಾಖೆಗಳ ಪ್ರಾರಂಭಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು. 

ಹುಬ್ಬಳ್ಳಿ ಲೆಕ್ಕ ಪರಿಶೋಧಕ ಉಮಾಶಂಕರ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಯರಗಟ್ಟಿ ಅರ್ಬನ್ ಕೋ-ಆಪ್ ಕ್ರೆಡಿಟ್ ಬ್ಯಾಂಕ್ ಪ್ರಗತಿಯು ಶ್ಲಾಘನೀಯವಾಗಿದೆ ಎಂದರು. 

ಬ್ಯಾಕಿನ ಸದಸ್ಯರ ಮಕ್ಕಳಿಗೆ ಶೈಕ್ಷಣಿಕ ಪ್ರೋತ್ಸಾಹ ನೀಡುವ ದೃಷ್ಟಿಯಿಂದ ಎಸ್‌.ಎಸ್‌.ಎಲ್‌.ಸಿ ಹಾಗೂ ಪಿ.ಯು.ಸಿ ಪರೀಕ್ಷೇಯಲ್ಲಿ ಗರಿಷ್ಠ ಅಂಕ ಪಡೆದು ಪಾಸಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. 

ಸಭೆಯಲ್ಲಿ ಉಪಾಧ್ಯಕ್ಷ ಎಚ್‌. ಎಸ್‌. ಗಂಗರಡ್ಡಿ, ನಿರ್ದೇಶಕರುಗಳಾದ ಎಮ್‌. ಖ. ಜಕಾತಿ, ಎಸ್‌. ಎಸ್‌. ಬಾಳಿ, ಸಿ. ಸಿ. ಹಾದಿಮನಿ, ಯು. ವ್ಹಿ. ಇಟ್ನಾಳ, ಎಂ. ಈ. ತಾಂವಶಿ, ಎಸ್‌. ಬಿ. ಬೆಲ್ಲದ, ಎಸ್‌. ಬಿ. ಪಟ್ಟಣಶೆಟ್ಟಿ, ಎನ್‌. ಬಿ. ಚೌಡಪ್ಪನವರ, ಎಸ್‌. ಎ. ದಂಡೆನ್ನವರ, ಆರ್‌. ಆರ್‌. ವಾಲಿ, ಎಸ್‌. ಎಮ್‌. ಬೋಳಿಶೆಟ್ಟಿ ಸ್ಥಳಿಯರಾದ ರಾಜೇಂದ್ರ ವಾಲಿ, ಪಿ. ಡಿ. ಹಿರೇಮಠ, ಬಿ. ಪಿ. ಗೋಡಿ, ಡಾ. ಎ. ಸಿ. ತೋಡಕರ, ಪೈಗಂಬರ ನಧಾಪ ಶಾಖೆಗಳ ಸಲಹಾ ಸಮೀತಿ ಪದಾಧಿಕಾರಿಗಳು ಮತ್ತು ಶೇರುದಾರರು ಹಾಗೂ ಸಿಬ್ಬಂದಿ ವರ್ಗದವರು ಇದ್ದರು. 

ಎಸ್‌. ಎ. ಮೊರಬದ ಸ್ವಾಗತಿಸಿದರು, ಶಾಖಾ ಕಿರಿಯ ಸಹಾಯಕ ಎಸ್‌. ಸಿ. ದುಗ್ಗಾಣಿ ನಿರೂಪಿಸಿದರು, ಪಿ. ಬಿ. ಕತ್ತಿಶೆಟ್ಟಿ ವರದಿ ವಾಚಿಸಿದರ, ಸದಾನಂದ ಹಣಬರ ವಂದಿಸಿದರು. 


ಸುದ್ದಿ ಓದಿ