ಹಾಲು ಕರೆಯುವ ಯಂತ್ರ ಪಡೆಯಲು ಸಹಾಯಧನಕ್ಕಾಗಿ ಅರ್ಜಿ ಆಹ್ವಾನ
ಕಾರವಾರ 09 : ಪಶು ಪಾಲನಾ ಮತ್ತು ಪಶು ವೈದ್ಯ ಸೇವೆ ಇಲಾಖೆ ವತಿಯಿಂದ ಮಿಶ್ರತಳಿ ಹಸುಗಳನ್ನು ಹೊಂದಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಹೈನುಗಾರರ ಪೈಕಿ ಒಬ್ಬರಿಗೆ ಒಂದು ವಿದ್ಯುತ್ ಚಾಲಿತ ಹಾಲು ಕರೆಯುವ ಯಂತ್ರ ಮತ್ತು ಎರಡು ರಬ್ಬರ ನೆಲಹಾಸುಗಳನ್ನು ಶೇ. 10ರ ಫಲಾನುಭವಿಯ ವಂತಿಕೆ ಹಾಗೂ ಶೇ. 90 ರ ಸಹಾಯಧನ ಮತ್ತು ನೀಡಲು ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಬಯಸುವವರು ಕನಿಷ್ಟ ಎರಡು ಮಿಶ್ರತಳಿ ಹಸುಗಳನ್ನು ಹೊಂದಿರಬೇಕು. ಹಸುಗಳಿಗೆ ಕಿವಿಯೊಲೆ ಅಳವಡಿಸಿರಬೇಕು. ಇನಾಫ್ ತಂತ್ರಾಂಶದಲ್ಲಿ ದಾಖಲಿಸಿರಬೇಕು. ಜಾತಿ ಪ್ರಮಾಣ ಪತ್ರ ಹೊಂದಿರಬೇಕು. ಅಗಸ್ಟ. 18 ರೊಳಗಾಗಿ ಅರ್ಜಿಯನ್ನು ಭರ್ತಿ ಮಾಡಿ ಆಯಾ ತಾಲೂಕಿನ ಪಶು ಪಾಲನೆ ಮತ್ತು ಪಶು ವೈದ್ಯಕೀಯ ಸೇವೆ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿಗೆ ಸಲ್ಲಿಸಬೇಕು. ನಿಗದಿತ ಸಮಯದ ನಂತರ ಬಂದ ಅರ್ಜಿಗಳನ್ನು ಪರಿಗಣಿಸುವುದಿಲ್ಲ.
ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರ ಕಚೇರಿ ಪಶು ಆಸ್ಪತ್ರೆ ಅಂಕೋಲಾ ಮೊಬೈಲ ಸಂಖ್ಯೆ: 9449753809, ಭಟ್ಕಳ -9449053634, ಹಳಿಯಾಳ-9845806840, ದಾಂಡೇಲಿ- 9845806840, ಹೊನ್ನಾವರ-9448611350, ಕಾರವಾರ-7760748474, ಕುಮಟಾ-9449029013, ಮುಂಡಗೋಡ-8277368777, ಸಿದ್ದಾಪುರ-9481422896, ಶಿರಸಿ-9449900592, ಯಲ್ಲಾಪುರ-9008719397, ಜೋಯಿಡಾ-8277639548 ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಪಶುಪಾಲನೆ ಮತ್ತು ಪಶುವೈದ್ಯ ಸೇವೆ ಇಲಾಖೆ ಉಪನಿರ್ದೇಶಕ ಡಾ. ನಂದಕುಮಾರ ಪೈ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.