ತಾಳಿಕೋಟಿ

ಅದ್ದೂರಿಯಾಗಿ ತಿರುಮಲ ತಿಮ್ಮಪ್ಪಯ್ಯ ಜಾತ್ರಾ ಮಹೋತ್ಸವ

ಅದ್ದೂರಿಯಾಗಿ ತಿರುಮಲ ತಿಮ್ಮಪ್ಪಯ್ಯ ಜಾತ್ರಾ ಮಹೋತ್ಸವ

ತಾಳಿಕೋಟಿ 09: ಸಮೀಪದ ಪೀರಾಪೂರ ಗ್ರಾಮದ ಆರಾಧ್ಯ ದೈವ ಶ್ರೀ ತುರುಮಲ ತಿಮ್ಮಪ್ಪಯ್ಯ ಜಾತ್ರಾ ಮಹೋತ್ಸವ ಈ ಬಾರಿ ಅದ್ದೂರಿಯಾಗಿ ಜರುಗಿತು.

ಜಾತ್ರಾ ಮಹೋತ್ಸವ ಹಾಗೂ ವೀರ ಸೇನಾನಿ ಸಂಗೊಳ್ಳಿ ರಾಯಣ್ಣ ಜಯಂತೋತ್ಸವ ಅಂಗವಾಗಿ ಸಾಮಾಜಿಕವಾಗಿ ಗಣನೀಯ ಸೇವೆ ಸಲ್ಲಿಸಿದ ಮಹನೀಯರಿಗೆ ಸನ್ಮಾನ ಸಮಾರಂಭ ಏರ್ಪಡಿಸಲಾಗಿತ್ತು.

ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಕೆಪಿಸಿಸಿ ಸದಸ್ಯ ಬಿ.ಎಸ್. ಪಾಟೀಲ (ಯಾಳಗಿ) ಕೊರೊನಾದಿಂದಾಗಿ ಕಳೆದ ಎರಡು ವರ್ಷಗಳಿಂದ ಜಾತ್ರೆಗಳನ್ನು ಅದ್ದೂರಿಯಾಗಿ ನಡೆಸಲು ಸಾಧ್ಯವಾಗಿರಲಿಲ್ಲ. 

ಈಗ ಆ ಆತಂಕ ದೂರವಾಗಿದೆ. ನಾವೆಲ್ಲರೂ ಶುದ್ಧ ಮನಸ್ಸಿನಿಂದ ತುರುಮಲರನ್ನು ಆರಾಧಿಸಿ ಪುನೀತರಾಗೋಣ.

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ದೇಶಪ್ರೇಮ ನಮಗೆಲ್ಲರಿಗೂ ಮಾದರಿಯಾಗಲಿ ಎಂದರು.

ಸನ್ಮಾನ: ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಮಹನೀಯರಿಗೆ, ನಿವೃತ್ತ ಯೋಧರಿಗೆ ಹಾಗೂ ಪತ್ರಕರ್ತರಿಗೆ ಸನ್ಮಾನಿಸಲಾಯಿತು.

ಹೂವಿನಹಿಪ್ಪರಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಾಳಾಸಾಹೇಬಗೌಡ ಪಾಟೀಲ, ತಾ.ಪಂ. ಮಾಜಿ ಅಧ್ಯಕ್ಷ ರಾಜುಗೌಡ ಕೋಳೂರ, ಎಬಿಡಿ ಫೌಂಡೇಶನ್ ಉಪಾಧ್ಯಕ್ಷ ಸಂತೋಷ ದೊಡಮನಿ, ಸುರೇಶ ಬಾಬುಗೌಡ ಬಿರಾದಾರ, ಮಲ್ಲನಗೌಡ ಪೋಲಿಸಪಾಟೀಲ, ರಾಜುಗೌಡ ಗುಂಡಕನಾಳ, ತಾಲೂಕ ಆರೋಗ್ಯಾಧಿಕಾರಿ ಸತೀಶ ತಿವಾರಿ, ಮಲ್ಲನಗೌಡ ಪಾಟೀಲ, ಬೀಜಾನ್ ಅಲಿ ನೀರಲಗಿ, ಪ್ರಭುಗೌಡ ಬಿರಾದಾರ ಉಪಸ್ಥಿತರಿದ್ದರು 

ಸುದ್ದಿ ಓದಿ