ಮಾನವೀಯ ಮೌಲ್ಯಗಳಿಗಾಗಿ ಶ್ರಮಿಸಿದವರು ಟಿಪ್ಪು ಸುಲ್ತಾನ್: ಮಹಬೂಬ್
ಮುದ್ದೇಬಿಹಾಳ. ಕರ್ನಾಟಕ ರಾಜ್ಯದಲ್ಲಿ ಹಸಿರು ಕ್ರಾಂತಿ ಮತ್ತು ರಾಷ್ಟ್ರೀಯ ಏಕತೆ ಮತ್ತು ಕೋಮು ಸೌಹಾರ್ದತೆಗಾಗಿ ಮಾನ್ವಿಯ ಮೌಲ್ಯಗಳ ರಕ್ಷಣೆಗಾಗಿ ಶ್ರಮಿಸಿದವರು ಯಾರಾದರೂ ಇದ್ದರೆ ಅದು ಹಜರತ್ ಟಿಪ್ಪು ಸುಲ್ತಾನ್ ರವರು ಎಂದು ಸಾಮಾಜಿಕ ಹೋರಾಟಗಾರರಾದಂತಹ ಮಹೆಬೂಬ್ ಹಡಲಗೇರಿ ರವರು ಹೇಳಿದರು.
ಅವರು ಮುದ್ದೇಬಿಹಾಳ ನಗರದ ಸರ್ಕಾರಿ ಉರ್ದು ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಂತ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ವಿತರಣೆ ಮತ್ತು ಹಜರತ್ ಟಿಪ್ಪು ಸುಲ್ತಾನ್ ರವರ ಜನ್ಮದಿನದ ನಿಮಿತ್ಯ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.
ಈ ಕಾರ್ಯಕ್ರಮದ ಸಭೆಯ ಅಧ್ಯಕ್ಷತೆಯನ್ನು ಎಸ್ ಡಿ ಎಮ್ ಸಿ ಅಧ್ಯಕ್ಷ ಲಾಲ್ ಸಾಹೇಬ್ ನಾಯ್ಕೋಡಿ ರವರು ವಹಿಸಿದ್ದು ಅತಿಥಿಗಳಾಗಿ ಶಾಲೆಯ ಪ್ರಭಾವಿ ಅಂಬಿಗೇರ್ ಹಾಗೂ ಚಟ್ಟಿರವರು ಹಾಗೂ ಪತ್ರಕರ್ತರಾದ ಮೊಹಮ್ಮದ್ ಯೂಸುಫ್ ಸಾತಿಹಾಳ್ ಮತ್ತು ಪಾಲಕರ ಪ್ರತಿನಿಧಿಯಾದ ಮಹಿಬೂಬ್ ರವರು ವೇದಿಕೆ ಮೇಲೆ ಉಪಸ್ಥಿತರಿದ್ದರು.
ಕಾರ್ಯಕ್ರಮದ ಆರಂಭದಲ್ಲಿ ವಿದ್ಯಾರ್ಥಿನಿಯರಿಂದ ಕುರಾನ್ ಪಠಣ ಮತ್ತು ನಾತ್ ದೊಂದಿಗೆ ಕಾರ್ಯಕ್ರಮದ ಉದ್ಘಾಟನೆ ಮಾಡಲಾಯಿತು. ಈ ಸಂದರ್ಭದಲ್ಲಿ ಹಜರತ್ ಟಿಪ್ಪು ಸುಲ್ತಾನ್ ರವರ ಭಾವಚಿತ್ರಕ್ಕೆ ಪುಷ್ಪ ನಮನವನ್ನು ಅರ್ಿಸಲಾಯಿತು.
ಈ ಸಂದರ್ಭದಲ್ಲಿ ಚಿತ್ರಕಲಾ ಪರೀಕ್ಷೆಯಲ್ಲಿ ಅತ್ಯಂತ ಹೆಚ್ಚು ಅಂಕ ಪಡೆದು ವಿಜೇತರಾದ ವಿದ್ಯಾರ್ಥಿನಿಯರಿಗೆ ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು. ಕಾರ್ಯಕ್ರಮವನ್ನು ಯಾಸ್ಮಿನ್ ನಿರ್ವಹಿಸಿದರು. ಮೊಘಲಾಯಿ ರವರು ಈ ಸಂದರ್ಭದಲ್ಲಿ ಹಜರತ್ ಟಿಪ್ಪು ಸುಲ್ತಾನ್ ರವರ ಜೀವನ ಮತ್ತು ಸಂದೇಶ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಕೊನೆಯಲ್ಲಿ ಸಜ್ಜನ್ ರವರು ವಂದನಾರ್ಪಣೆ ಸಲ್ಲಿಸಿದರು.