ಬ್ಯಾಡ್ಗಿ

ಟಿಪ್ಪರ್ ಬೈಕ್ ಡಿಕ್ಕಿ: ಓರ್ವ ಸಾವು

ಟಿಪ್ಪರ್ ಬೈಕ್ ಡಿಕ್ಕಿ: ಓರ್ವ ಸಾವು

 ಬ್ಯಾಡಗಿ:ಪಟ್ಟಣದ ಗಜೇಂದ್ರಗಡ ಸೊರಬ ರಾಜ್ಯ ಹೆದ್ದಾರಿಯಲ್ಲಿ (ಮುಖ್ಯರಸ್ತೆ) ಟಿಪ್ಪರ್ ಡಿಕ್ಕಿ ಹೊಡೆದು ಬೈಕ್ ಸವಾರನೊಬ್ಬ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಗುರುವಾರ ರಾತ್ರಿ ನಡೆದಿದೆ. 

 ತಾಲೂಕಿನ ಮಾಸಣಗಿ ಗ್ರಾಮದ ರೈತ ಸಿದ್ಧಲಿಂಗೇಶ ಪರಮೇಶಪ್ಪ ಕಬ್ಬೂರ (30) ಅಪಘಾತಲ್ಲಿ ಸಾವನ್ನಪ್ಪಿದ ದುದ್ರೈವಿ. ಪಟ್ಟಣದ ಮುಖ್ಯರಸ್ತೆಯಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ಟಿಪ್ಪರ್ ಚಾಲಕ ಅತೀ ಜೋರು ಹಾಗೂ ನಿರ್ಲಕ್ಷ್ಯತನದಿಂದ ವಾಹನ ಚಲಾಯಿಸಿಕೊಂಡು ಬಂದು ಬೈಕ್ ಸವಾರನಿಗೆ ಡಿಕ್ಕಿ ಹೊಡೆಸಿದ್ದಾನೆ, ವೇಗದ ರಭಸಕ್ಕೆ ಬೈಕ್ ಸವಾರನ ತಲೆಗೆ ಬಲವಾದ ಪೆಟ್ಟು ಬಿದ್ದಿದ್ದು ತೀವ್ರ ರಕ್ತಸ್ರಾವದಿಂದ ರಸ್ತೆಯಲ್ಲಿಯೇ ಸಾವನ್ನಪ್ಪಿದ್ದಾನೆ. 

 ಕಿಷ್ಕಿಂಧೆಯಂತಾಗಿರುವ ಪಟ್ಟಣದ ಮುಖ್ಯರಸ್ತೆಯಲ್ಲಿ ಸಂಚಾರ ದುಸ್ತರವಾಗಿ ಪರಿಣಮಿಸಿದ್ದು, ಈ ಹಿಂದೆಯೂ ಹಲವಾರು ಅಪಘಾತಗಳು ನಡೆದಿದ್ದು ಹಲವರು ಪ್ರಾಣ ಕಳೆದುಕೊಂಡಿದ್ದು ಕೆಲವರು ಶಾಶ್ವತವಾಗಿ ಅಂಗವಿಕಲರಾಗಿದ್ದಾರೆ, ಘಟನೆ ಕುರಿತಂತೆ ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.


ಸುದ್ದಿ ಓದಿ