ವಿವಿಧಡೆ ಶನಿವಾರ ಸಂಜೆ ಗುಡುಗು ಶಿಟ್ ಗಾಳಿ ಮಳೆಗೆ ವಿದ್ಯುತ್ ಕಂಬಗಳು ಹಾಗೂ ಮರಗಿಡಗಳು ಧರೆಗುರುಗಳಿದ್ದು, ಜನಜೀವನ ಅಸ್ತವ್ಯಸ್ತ
ಬ್ಯಾಡಗಿ 18 : ಪಟ್ಟಣದ ಸೇರಿದಂತೆ ವಿವಿಧಡೆ ಶನಿವಾರ ಸಂಜೆ ಗುಡುಗು ಶಿಟ್ ಗಾಳಿ ಮಳೆಗೆ ವಿದ್ಯುತ್ ಕಂಬಗಳು ಹಾಗೂ ಮರಗಿಡಗಳು ಧರೆಗುರುಗಳಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಶನಿವಾರ ಸಂಜೆ 5.30 ಯಿಂದ 30 ನಿಮಿಷಗಳಲ್ಲಿ ಸುರಿದ ಗಾಳಿ ಮಳಿಗೆ ಜನ ತತ್ತರಿಸುವಂತಾಗಿದೆ. ಗಾಳಿ ಆರ್ಭಟಕ್ಕೆ ಬಹುತೇಕ ಮರದ ಟೂಗೆಗಳು ಮುರಿದು ರಸ್ತೆ ಮಧ್ಯಾಭಾಗದಲ್ಲಿ ಬೀಳುವ ಮೂಲಕ ಬನ್ನಿಹಟ್ಟಿ ಬಿಸಳಹಳ್ಳಿ ಗ್ರಾಮಗಳ ಮಧ್ಯ ಕೆಲಕಾಲ ವಾಹನಗಳ ಸಂಚಾರಕ್ಕೆ ವ್ಯತ್ಯಯ ಉಂಟಾಗಿದೆ. ಕೆಲ ಮರಗಳು ವಿದ್ಯುತ್ ತಂತಿಗಳ ಮೇಲೆ ಬಿದ್ದು ಹರಿದು ಚಿಲ್ಲಪಿಲ್ಲಿಯಾಗಿದೆ. ತಾಲೂಕಿನ ವಿವಿಧಡೆ 10 ಕ್ಕೂ ಕಂಬಗಳು ಧರೆಗುರಳಿವೆ. ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿತ್ತು. ಹಾರಿ ಹೋದ ಚವಾಣಿ : ಗಾಳಿ ರಭಸಕ್ಕೆ ಮಂಜುನಾಥ ವಿರುಪಾಕ್ಷಪ್ಪ ಬಳ್ಳಾರಿ ಎಂಬುವರ ಮನೆ ಮೇಲೆ ಅಳವಡಿಸಿದ್ದ ತಗಡುಗಳು ಹಾರಿಹೋಗಿವೆ. ಅದೇ ರೀತಿಝೆಡ್ ಪಟ್ಟಣದಲ್ಲಿ ನಡೆಯುತ್ತಿರುವ ಅಗಲೀಕರಣ ಕಾಮಗಾರಿಗೂ ಮಳೆಯಿಂದ ತೊಂದರೆಯಾಯಿತು. ರಸ್ತೆ ಮೇಲಿರುವ ಮಣ್ಣು ಸಂಪೂರ್ಣವಾಗಿ ತೊಯ್ದಿದ್ದು ತೆವಾಂಶ ಕಡಿಮೆಯಾಗುವವರೆಗೂ ಸ್ಥಳಂತರ ಮಾಡಲು ಸಾಧ್ಯವಾಗುತ್ತಿಲ್ಲ.