ಕಾಡು ಹಂದಿ ಬೇಟೆಯಾಡಿದ ಮೂವರ ಬಂಧನ : ಪರಾರಿಯದ ಇಬ್ಬರಿಗೆ ಹುಡುಕಾಟ
ಕಾಡು ಹಂದಿ ಬೇಟೆಯಾಡಿದ ಮೂವರ ಬಂಧನ : ಪರಾರಿಯದ ಇಬ್ಬರಿಗೆ ಹುಡುಕಾಟ
ಕಾರವಾರ 12 : ಕಾಡು ಹಂದಿ ,ಆಮೆ ಬೇಟೆಯಾಡಿದವರನ್ನು, ಬೇಯಿಸಿದ ಮಾಂಸದ ಜೊತೆ ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ ಘಟನೆ ನಡೆದಿದೆ. ಬನವಾಸಿ ವಲಯದ ಬಿಸಲಕೊಪ್ಪ ಹತ್ತಿರ ಮುಡೇಬೈಲ್ ಮಜಿರೆಯಲ್ಲಿ ಕಾಡು ಹಂದಿ ಮಾಂಸದ ಜೊತೆ ಆರೋಪಿಗಳನ್ನು ಬಂಧಿಸಿದ್ದಾರೆ . ಮುಖ್ಯ ಆರೋಪಿಯಾದ ಮುಡೇ ಬೈಲಿನ ಶಂಕರ ಲಕ್ಷ್ಮಣ ನಾಯ್ಕ, ಗಂಗಾಧರ ಗಣಪತಿ ಗೌಡ, ಶಂಕರ ಬೊಮ್ಮು ಗೌಡ, ಇವರುಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ಹಾಗೂ ರವಿ ಮಾದೇವ ಗೌಡ,ಗಣಪತಿ ಬೊಮ್ಮುಗೌಡ ತಲೆಮರೆಸಿಕೊಂಡಿದ್ದಾರೆ. ಇವರಿಗೆ ಹುಡುಕಾಟ ನಡೆದಿದೆ. ಕಾಡು ಹಂದಿ ಬೇಟೆಯ ನಂತರ ಮನೆಯಲ್ಲಿ ಅಡುಗೆ ಮಾಡುತ್ತಿದ್ದ ವೇಳೆ ಖಚಿತ ಮಾಹಿತಿ ಮೇರೆಗೆ ಅರಣ್ಯ ಅಧಿಕಾರಿಗಳು ದಾಳಿ , ಮಾಡಿ ಅರೆ ಬೇಯಿಸಿದ 6 ಕೆ.ಜಿ ಕಾಡುಹಂದಿ ಮಾಂಸ, ಮತ್ತು ಅರ್ದ ಕೆ.ಜಿ ಆಮೆಯ ಮಾಂಸ ವಶಕ್ಕೆ ಪಡೆದಿದ್ದರು . ಆರೋಪಿತರ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ರ ಸೆಕ್ಷನ್ 9, 39 ಅರ್ / ಡಬ್ಲು 51, ಕರ್ನಾಟಕ ಅರಣ್ಯ ಕಾಯ್ದೆ 1963 ರ ಸೆಕ್ಷನ್ 24( ಜೆ) , ಆರ್ ಡಬ್ಲು 62, 80 ಅಡಿ ಪ್ರಕರಣ ದಾಖಲಿಸಲಾಗಿದೆ.....