ಬರೆದಂತೆ ಬದುಕಿ, ಬದುಕಿದಂತೆ ಬರೆದು ಜಗತ್ತಿಗೆ ಆದರ್ಶಪ್ರಾಯರಾಗಿದ್ದರು ಕನಕದಾಸರು : ಶಿವಪ್ಪ ಹಾವೇರಿ
ಲೋಕದರ್ಶನ ವರದಿ
ಶಿಗ್ಗಾವಿ 22: ಸಂತ ಶ್ರೇಷ್ಟ ಕನಕದಾಸರು ಕೀರ್ತನಕಾರರಾಗಿ, ಶ್ರೇಷ್ಟ ಮಟ್ಟದ ಕವಿಗಳಾಗಿ, ಮಾನವೀಯತೆಯ ಸಾಕಾರಮೂರ್ತಿಯಾಗಿ ಬರೆದಂತೆ ಬದುಕಿ, ಬದುಕಿದಂತೆ ಬರೆದು ಜಗತ್ತಿಗೆ ಆದರ್ಶಪ್ರಾಯರಾಗಿದ್ದರು ಎಂದು ಪ್ರಾಚಾರ್ಯ ಶಿವಪ್ಪ ಹಾವೇರಿ ಹೇಳಿದರು.
ಪಟ್ಟಣದ ಚನ್ನಪ್ಪ ಕುನ್ನೂರ ಆಂಗ್ಲ ಮಾಧ್ಯಮ ಶಾಲೆಯಲ್ಲಿ 534 ನೇ ಕನಕದಾಸ ಜಯಂತಿ ನಿಮಿತ್ಯ ಭಾವಚಿತ್ರಕ್ಕೆ ಪುಷ್ಪ ಸಮರೆ್ಣ ಮಾಡಿ ಮಾತನಾಡಿದ ಅವರು ಕನಕದಾಸರು ಒಂದು ಜನಾಂಗದ ಪ್ರತಿನಿಧಿಯಾಗಿರದೇ, ಒಂದು ತತ್ವದ ಪ್ರತಿನಿಧಿಯಾಗಿ ಜೀವನ ಮೌಲ್ಯಗಳನ್ನು ಸಮಾಜಕ್ಕೆ ಆರುಡಿಸಿದ ಭಕ್ತಶ್ರೇಷ್ಟರು, ಕನಕದಾಸರ ಬದುಕು ಹಾಗೂ ಸಾಹಿತ್ಯ ಕೇವಲ ಕನ್ನಡ ಸಾಹಿತ್ಯಕ್ಕೆ ಮಾತ್ರ ಸೀಮಿತವಾಗಿರದೇ ಭಾರತೀಯ ಸಂಸ್ಕೃತಿಯ ಮೇಲೆ ಪ್ರಭಾವ ಬೀರಿದೆ ಎಂದರು.
ಶಿಕ್ಷಕಿ ವಂದನಾ ನಾಯ್ಕ ಮಾತನಾಡಿ ಕನಕದಾಸರು ಕುಲಜಾತಿಯ ವಿಚಾರವಾಗಿ ತಮ್ಮ ಚಿಂತನೆಗಳನ್ನು ಕೀರ್ತನೆಗಳ ಮೂಲಕ ಸಮಾಜಕ್ಕೆ ಮನಮಿಡಿಯುವಂತೆ ಪ್ರತಿಪಾದಿಸಿದ ವಿಶ್ವ ಮಾನವ ಎಂದರು.
ಶಿಕ್ಷಕಿ ಭಾರತೀ ಶಿವಲೋಚನಮಠ ಮಾತನಾಡಿ ಕನಕದಾಸರ ತುಂಬು ಜೀವನದ ಬದುಕೇ ಸಂದೇಶದಂತಿದೆ, ಯಾವ ಫಲಾಪೇಕ್ಷೆಯಿಲ್ಲದೇ ಲೋಕಕಲ್ಯಾಣಕ್ಕೆ ತಮ್ಮನ್ನು ತಾವು ಸಮರ್ಿಸಿಕೊಂಡಿದ್ದ ಮಹಾನ ಮೇದಾವಿ ಎಂದರು. ದಾಸರ ಕೀರ್ತನೆಯನ್ನು ಶಿಕ್ಷಕಿ ಮಂಜುಳಾ ಪಾಟೀಲ ಹಾಡಿದರು, ಶಿವರಂಜನಿ, ಅಭಿಜ್ಞಾ, ವಿಧ್ಯಾ, ಸಮರ್ಥ ಕನಕದಾಸರ ಕುರಿತಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಶೇಖರ ಪರ್ಸಾಪೂರ, ಗೀತಾ ಚಿಕ್ಕಮಠ, ಕೆ.ಆಶ್ವಿನಿ, ಪಿ.ಮಂಜುಳಾ, ಶೃತಿ ನವರತ್ನ, ಲಾವಣ್ಯ, ಸಚಿನ ಸೇರಿದಂತೆ ಶಾಲೆಯ ಸಿಬ್ಬಂದಿ ಹಾಗೂ ಮಕ್ಕಳು ಉಪಸ್ಥಿತರಿದ್ದರು. ಪ್ರಾರ್ಥನೆಯನ್ನು ಕವನಾ ನೆರವೇರಿಸಿದಳು, ಶಿಕ್ಷಕ ಮಾರುತಿ ಲಮಾಣಿ ಸ್ವಾಗತಿಸಿದರು, ಗಾಯತ್ರಿ ದೈವಜ್ಞ ನಿರೂಪಿಸಿದರು, ಸರೋಜಾ ಪಾಟೀಲ ವಂದಿಸಿದರು.