ಶಿಗ್ಗಾವ್

ಈ ಭಾರಿ ನನ್ನ ಗೆಲವು ಖಚಿತ: ಸಾಹಿತಿ ಶಿಡ್ಲಾಪೂರ

ಈ ಭಾರಿ ನನ್ನ ಗೆಲವು ಖಚಿತ: ಸಾಹಿತಿ ಶಿಡ್ಲಾಪೂರ

ಶಿಗ್ಗಾವಿ 16: ಇಡೀ ಜಿಲ್ಲೆಯ ಹಿರಿಯ ಸಾಹಿತಿಗಳು, ಸಾಹಿತ್ಯಾಸಕ್ತರು ಹಾಗೂ ಕನ್ನಡ ಸಾಹಿತ್ಯ ಪರಿಷತ್ತನ್ ಸದಸ್ಯರು ಕನ್ನಡಪರ ಸಂಘಟನೆಗಳು, ಕನ್ನಡ ಪರ ಹೋರಾಟಗಾರರು, ಯುವ ಸಾಹಿತಿಗಳು, ಅಜೀವ ಸದಸ್ಯರು, ಎಲ್ಲ ಕನ್ನಡಾಭೀಮಾನಿಗಳು, ಪತ್ರಿಕಾ ಮಾಧ್ಯಮದ ಮಿತ್ರರು, ಮಹಿಳಾ ಸಾಹಿತ್ಯಾಸಕ್ತರು ನನ್ನ ಬಗ್ಗೆ ಒಲವು ತೊರುತ್ತಿರುವ, ಅವರ ಬೆಂಬಲ ಹಾಗೂ ಪ್ರೀತಿಯನ್ನು ನೋಡಿದರೆ ಈ ಭಾರಿ ನನ್ನ ಗೆಲವು ಖಚಿತವಾಗಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಸ್ಥಾನದ ಅಭ್ಯರ್ಥಿ ಹಾಗೂ ಹಿರಿಯ ಸಾಹಿತಿ ಮಾರುತಿ ಶಿಡ್ಲಾಪೂರ ಹೇಳಿದರು.

ಪಟ್ಟಣದ ಎಸ್‍ಬಿಬಿಎಮ್‍ಡಿ ಶಾಲೆಯಲ್ಲಿ ಪ್ರಚಾರಾರ್ಥವಾಗಿ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಕಸಾಪ ಜಿಲ್ಲಾಧ್ಯಕ್ಷನಾಗಿ ಉತ್ತಮ ಸೇವೆ ನೀಡಿದ್ದೆನೆ ಹಾಗೆ ಜಿಲ್ಲೆಯ ಎಲ್ಲ ಸಾಹಿತಿಗಳು ನನ್ನ ಕಾರ್ಯವನ್ನು ಮೆಚ್ಚಿಕೊಂಡಿದ್ದಾರೆ, ಮತ್ತು ಆ ಪ್ರೀತಿಯನ್ನು  ಇನ್ನೂ ಉಳಿಸಿಕೊಂಡಿದ್ದಾರೆ, ಸೋಲು ಗೆಲವು ಸಹಜ ಆದರೆ ನಡೆಯುವ ಪ್ರಕ್ರೀಯೆಗಳು ಮನಸ್ಸಿಗೆ ನೋವು ತಂದಿವೆ, ಕಳೆದ ಚುನಾವಣೆಯಲ್ಲಿ ನನಗೆ ಕೂಡಲು ಅವಕಾಶ ನೀಡುತ್ತಿರಲಿಲ್ಲ, ನನ್ನ ಜೊತೆ ಬರಲು ಭಯಪಡುತ್ತಿದ್ದರು, ನನ್ನ ಪರವಾಗಿ ಮತ ಹಾಕಿದರೂ ಹೊರಗಡೆ ಹೇಳಿಕೊಳ್ಳಲಿಲ್ಲ, ಅಂದು ಅಂತಹ ಸ್ಥಿತಿ ನಿರ್ಮಾಣ ಮಾಡಿದ್ದರು, ಮತ್ತು ಇಂದಿನ ಚುನಾವಣೆಯಲ್ಲಯೂ ಸಹ ನನಗೆ ಕರೆ ಮಾಡಿ ಹಿಂದೆ ಸರಿಯಲು ಹೇಳುತ್ತಿದ್ದಾರೆ, ಆದರೆ ನಾನು ಅವರಿಗೆ ಭಯಪಡುವದಿಲ್ಲ, ಆದರೇ ಇಂದು ಹಾಗಿಲ್ಲ, ಜಿಲ್ಲೇಯಾಧ್ಯಂತ ದೊಡ್ಡ  ಸಂಖ್ಯೆಯಲ್ಲಿ ನನ್ನ ಬೆಂಗಲಿಗರು ಕೆಲಸ ಮಾಡುತ್ತಿದ್ದಾರೆ, ಎಲ್ಲ ತಾಲೂಕಿನ ಸಾಹಿತ್ಯಾಸಕ್ತರು ತೊರುತ್ತಿರುವ ಪ್ರೀತಿಗೆ ಅಭಾರಿಯಾಗಿದ್ದೆನೆ, ಹಿರಿಯ ಸಾಹಿತಿಗಳೂ ಸಹ ನನ್ನ ಬೆಂಬಲವಾಗಿ ತಾವೇ ಪ್ರಚಾರ ಮಾಡುತ್ತಿದ್ದಾರೆ, ಕಳೆದ ಭಾರಿ ಚುನಾವಣೆಯಲ್ಲಿ ನನಗೆ ಧಮಕಿ ಕೊಟ್ಟಿದ್ದರು, ಬೆಂಬಲ ನೀಡುವವರಿಗೂ ಹೆದರಿಸಿದ್ದರು ಆದರೆ ಇಂದು ಯಾರು ಹೆದರುವದಿಲ್ಲ ಯಾಕೆಂದರೆ ದೊಡ್ಡ ಸಂಖ್ಯೆಯಲ್ಲಿ ನಾವಿದ್ದೆವೆ, ಕಸಾಪ ಸದಸ್ಯರು ವ್ಯಾಮೋಹಕ್ಕೆ ಒಳಗಾಗಿ ಮತದಾನ ಮಾಡುವವರಲ್ಲ, ದೊಡ್ಡ ಮೊತ್ತದ ಬೆಂಬಲ ಸಿಕ್ಕಿದ್ದು ಶಿಗ್ಗಾವಿಯಲ್ಲಿ, ಜಿಲ್ಲೆಯ ಎಲ್ಲ ತಾಲೂಕಗಳಲ್ಲಿ ನನ್ನ ಪರವಾಗಿ ಕೆಲಸ ಮಾಡುತ್ತಿದ್ದಾರೆ, ಮಕ್ಕಳ ಸಾಹಿತ್ಯ ಪರಿಷತ್ತು, ಮಹಿಳಾ ಸಾಹಿತ್ಯ ಪರಿಷತ್ತು, ಗ್ರಾಮೀಣ ಘಟಗಳನ್ನು ಮಾಡುವದು ಹಾಗೂ ಅಚ್ಚುಕಟ್ಟಾಗಿ ಸಾಹಿತ್ಯ ಸಮ್ಮೆಳನವನ್ನು  ಮಾಡುವ ಗುರಿಯನ್ನು ಹೊಂದಿದ್ದವೆ ಜೊತೆಗೆ ಸಂಘಟನಾತ್ಮಕವಾಗಿ ನಾಡಿನಲ್ಲಿ ಮಾದರಿ ಕಸಾಪವನ್ನು ಕಟ್ಟುವ ಕನಸ್ಸು ನಮ್ಮದಾಗಿದೆ ಆದರಿಂದ ಎಲ್ಲ ಸಾಹಿತ್ಯಾಸಕ್ತರು ನನ್ನನ್ನು ಬೆಂಬಲಿಸಿ ಎಂದು ಮನವಿ ಮಾಡಿದರು. 

ನಂತರ ಊರಿನ ಸಿ ವಿ ಮತ್ತಿಗಟ್ಟಿ, ಶ್ರೀಕಾಂತ ದುಂಡಿಗೌಡ್ರ, ನಾಗರಾಜ ಬ್ರಹ್ಮಾವರ, ಬ ಫ ಯಲಿಗಾರ, ಲತಾ ನಿಎಗುಂದಿ, ಭರಮಜ್ಜ ನವಲಗುಂದ, ಪ್ರಭು ಪಾಟೀಲ್, ಉಮೇಶ ಗೌಳಿ, ನರಹರಿ ಕಟ್ಟಿ, ಗಂಗಾಧರ ಸಾತಣ್ಣವರ ಸೇರಿದಂತೆ ಹಲವಾರು ಮನೆಗಳಿಗೆ ತೆರಳಿ ಪ್ರಚಾರ ಮಾಡಿದರು. 

ಈ ಸಂದರ್ಭದಲ್ಲಿ ಪ್ರಾಚಾರ್ಯರಾದ ಜಿ ಎನ್ ಯಲಿಗಾರ, ರಮಾಕಾಂತ ಭಟ, ನಾಗಪ್ಪ ಬೆಂತೂರ, ಸಿ ಡಿ ಯತ್ನಳ್ಳಿ, ಸಿ ಎನ್ ಕಲಕೋಟಿ, ಎನ್ ಐ ಶೇತಸನದಿ, ಜಿ ಬ ಹಸಬಿ, ಬಿ ಎಸ್ ಬರದೂರ, ಸಿದ್ದಪ್ಪ ಮಸಳಿ, ಕೆ ಬಿ ಚನ್ನಪ್ಪ, ಎಫ್ ಟಿ ಕೆಳಗಿಮನಿ, ಎಸ್ ಎಮ್ ದೇವತಿ, ಶಶಿಕಾಂತ ರಾಠೊಡ್, ದೇಶಪಾಂಡೆ, ತಾವರಗೊಂದಿ ಸೇರಿದಂತೆ ಇತರರು ಇದ್ದರು.



ಸುದ್ದಿ ಓದಿ