ತಾಪಂ ಉಪಚುನಾವಣೆ: ನೀತಿ ಸಂಹಿತೆ ಜಾರಿಗೆ ಸಮಿತಿ ರಚನೆ

ತಾಪಂ ಉಪಚುನಾವಣೆ: ನೀತಿ ಸಂಹಿತೆ ಜಾರಿಗೆ ಸಮಿತಿ ರಚನೆ

ಬಳ್ಳಾರಿ 15: ರಾಜ್ಯ ಚುನಾವಣಾ ಆಯೋಗವು ಬಳ್ಳಾರಿ ಜಿಲ್ಲೆಯ ಹಡಗಲಿ ತಾಲೂಕಿನ ಮೈಲಾರ ತಾಪಂ ಉಪಚುನಾವಣೆಗೆ ವೇಳಾಪಟ್ಟಿ ಪ್ರಕಟಿಸಿದ್ದು, ಈ ಉಪಚುನಾವಣೆಯಲ್ಲಿ ಮಾದರಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ತಾಲೂಕುಮಟ್ಟದ ಉಸ್ತುವಾರಿ ಸಮಿತಿ ರಚಿಸಿ ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ಡಾ.ವಿ.ರಾಮ್ ಪ್ರಸಾತ್ ಮನೋಹರ್ ಅವರು ಆದೇಶ ಹೊರಡಿಸಿದ್ದಾರೆ. 

ಹಡಗಲಿ ತಹಸೀಲ್ದಾರ್ ನೇತೃತ್ವದಲ್ಲಿ ತಾಲೂಕುಮಟ್ಟದ ಎಂಸಿಸಿ ಸಮಿತಿ ರಚಿಸಲಾಗಿದ್ದು, ಹಡಗಲಿ ತಾಪಂ ಇಒ, ಹಡಗಲಿ ಸಿಪಿಐ/ಪಿಎಸ್ಐ, ಹಿರೇಹಡಗಲಿ ಕಂದಾಯ ನಿರೀಕ್ಷಕ, ಹಿರೇಬನ್ನಿಮಟ್ಟಿ ಗ್ರಾಮಲೆಕ್ಕಾಧಿಕಾರಿಗಳು ಈ ಸಮಿತಿ ಸದಸ್ಯರಾಗಿದ್ದಾರೆ. ಈ ಸಮಿತಿಯು ಚುನಾವಣಾ ಆಯೋಗವು ನೀಡಿರುವ ಮಾದರಿ ನೀತಿ ಸಂಹಿತೆ ಚುನಾವಣೆಯನ್ನು ಕಟ್ಟುನಿಟ್ಟಾಗಿ ಕ್ಷೇತ್ರದ ವ್ಯಾಪ್ತಿಯಲ್ಲಿ ಅನುಷ್ಠಾನಗೊಳಿಸತಕ್ಕದ್ದು.ಯಾವುದೇ ಉಲ್ಲಂಘನೆಯ ವಿರುದ್ಧ ನಿಧರ್ಾಕ್ಷಿಣ್ಯ ಕ್ರಮ ಜರುಗಿಸಿ ವರದಿ ನೀಡುವಂತೆ ಅವರು ತಿಳಿಸಿದ್ದಾರೆ. ಒಂದು ವೇಳೆ ಉಲ್ಲಂಘನೆ ಪ್ರಕರಣಗಳ ಬಗ್ಗೆ ಏನಾದರೂ ಕ್ರಮಕೈಗೊಳ್ಳಲು ತೊಂದರೆ ಉಂಟಾದಲ್ಲಿ ಕೂಡಲೇ ಜಿಲ್ಲಾಧಿಕಾರಿಗಳು,ಜಿಲ್ಲಾ ಪೊಲೀಸ್ ಅಧಿಕಾರಿಗಳಿಗೆ ಸಂಪಕರ್ಿಸಿ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ. 

ಮೈಲಾರ ಉಪಚುನಾವಣೆ: ಶಸ್ತ್ರಾಸ್ತ್ರಗಳ ಡಿಪಾಸಿಟ್ಗೆ ಸೂಚನೆ:- ಹಡಗಲಿ ತಾಲೂಕಿನ ಮೈಲಾರ ತಾಪಂ ಉಪಚುನಾವಣೆಗೆ ನೀತಿ ಸಂಹಿತೆ ಜಾರಿಯಾಗಿರುವ ಹಿನ್ನೆಲೆ ಈ ಕ್ಷೇತ್ರದ ವ್ಯಾಪ್ತಿಯಲ್ಲಿ ಆತ್ಮರಕ್ಷಣೆಗಗಿ ಫಾರಂ 3ರಲ್ಲಿ ಹೊಂದಿರುವ ಶಸ್ತ್ರಾಸ್ತ್ರ ಪರವಾನಿಗೆದಾರರು ಮತ್ತು ಬೆಳೆರಕ್ಷಣೆಗಾಗಿ ಫಾರಂ 5 ಹೊಂದಿರುವ ಶಸ್ತ್ರಾಸ್ತ್ರ ಪರವಾನಿಗೆದಾರರು ಕೂಡಲೇ ತಮ್ಮ ಆಯುಧಗಳನ್ನು ಪೊಲೀಸ್ ಠಾಣೆಯಲ್ಲಿ ಒಪ್ಪಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ.ವಿ.ರಾಮ್ ಪ್ರಸಾತ್ ಸೂಚನೆ ನೀಡಿದ್ದಾರೆ. ಬ್ಯಾಂಕರ್ ರಕ್ಷಣೆಗಾಗಿ ಬ್ಯಾಂಕ್ಗಲು ಹೊಂದಿರುವ ಪರವಾನಿಗೆಯಲ್ಲಿನ ರಿಟೇನರ್ಗಳನ್ನು ಹೊರತುಪಡಿಸಿ,ಇತರರು ಹೊಂದಿರುವ ಶಸ್ತ್ರ ಮತ್ತು ಮದ್ದುಗುಂಡುಗಳನ್ನು ಯಾವುದೇ ಕಾರಣಕ್ಕೂ ಇಟ್ಟುಕೊಂಡು ತಿರುಗಾಡುವುದನ್ನು ನಿಷೇಧಿಸಲಾಗಿದೆ. ಪರವಾನಿಗೆದಾರರು ತಕ್ಷಣದಿಂದ ತಾವು ಹೊಂದಿರುವ ಶಸ್ತ್ರಾಸ್ತ್ರವನ್ನು ಹತ್ತಿರದ ಪೊಲೀಸ್ಠಾಣೆಯಲ್ಲಿ ಅಥವಾ ಡಿಪಾಸಿಟ್ ಮಾಡಿಕೊಳ್ಳಲು ಪರವಾನಿಗೆ ಹೊಂದಿದ ಶಸ್ತ್ರ ಮಾರಾಟಗಾರರಲ್ಲಿ ಡಿಪಾಸಿಟ್ ಮಾಡಬಹುದು. 

ಈ ರೀತಿ ಡಿಪಾಸಿಟ್ ಮಾಡಿದವರು ಹತ್ತಿರದ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಮಾಹಿತಿ ನೀಡಬೇಕು ಎಂದು ಹೇಳಿದ್ದಾರೆ. ಶಸ್ತ್ರಾಸ್ತ್ರ ತಯಾರಕರು ಮತ್ತು ಮಾರಾಟಗಾರರು ಈ ನಿಷೇಧಾಜ್ಞೆ ಡಿ.17ರಿಂದ ಜ.4ರ ಅವಧಿಯವರೆಗೆ ನಮೂನೆ 3 ಹಾಗೂ 5ರಲ್ಲಿ ಹೊಂದಿದ ಪರವಾನಿಗೆದಾರರಿಗೆ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಮಾರಾಟ ಮಾಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಿದೆ. ಪರವಾನಿಗೆದಾರರ ಶಸ್ತ್ರಾಸ್ತ್ರ ಹಾಗೂ ಮದ್ದುಗುಂಡುಗಳ ಚುನಾವಣೆ ಮುಕ್ತಾಯಗೊಂಡ 2019 ಜ.4ರ ನಂತರ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.


ಸುದ್ದಿ ಓದಿ