ರಾಷ್ಟ್ರೀಯ

ಕೊರೋನ ರೂಪಾಂತರ, ಅನಗತ್ಯ ಭಯ ಬೇಡ – ತಜ್ಞರ ಅಭಯ

ಕೊರೋನ   ರೂಪಾಂತರ,  ಅನಗತ್ಯ ಭಯ ಬೇಡ – ತಜ್ಞರ ಅಭಯ

ನವದೆಹಲಿ, ಡಿಸೆಂಬರ್ 28: ವಿಶ್ವದಾದ್ಯಂತ ಭೀತಿ ಹುಟ್ಟಿಸಿರುವ ಕೊರೊನಾ ಸೊಂಕಿನ ಹೊಸ  ರೂಪಾಂತರ ಕುರಿತು ಜನತೆ  ಭಯ,  ಗಾಬರಿಪಡಬೇಕಿಲ್ಲ   ಎಂದು   ತಜ್ಞರು ಅಭಯ ನೀಡಿದ್ದಾರೆ.

ದೇಶದಲ್ಲೂ  ಹಲವು ಬಾರಿ ಕೊರೊನಾ ಹೊಸ ಮಾದರಿ  ಸೋಂಕು ಅನೇಕ ಸಲ ಸಣ್ಣಪುಟ್ಟ  ಬದಲಾವಣೆಯೊಂದಿಗೆ ರೂಪಾಂತರಗೊಂಡಿದೆ ಎಂದು  ಹೇಳಿದ್ದಾರೆ.

ತಜ್ಞರ ಪ್ರಕಾರ ಭಾರತದಲ್ಲಿ ಕೊರೊನಾ ವೈರಸ್ 198 ರೀತಿ ಕೊರೊನಾ ವೈರಸ್ ರೂಪಾಂತರಗೊಂಡಿದ್ದು, ಪ್ರೋಟಿನ್ ಬದಲಾದಂತೆ ಕೊರೊನಾ ಸೋಂಕು  ರೂಪಾಂತರವಾಗಲಿದೆ ಎಂದೂ ತಜ್ಞರು ಹೇಳಿದ್ದಾರೆ.

ಬ್ರಿಟನ್ ನಲ್ಲಿ ಮಾತ್ರವಲ್ಲದೇ ಭಾರತದಲ್ಲೂ ರೂಪಾಂತರ ಕೊರೊನಾ ಸೋಂಕು ಬಹಳ ಹಿಂದೆಯೇ ಕಾಣಿಸಿಕೊಂಡಿದ್ದು,  ಈಗಾಗಲೇ 198 ರೀತಿ ಕೊರೊನಾ ವೈರಸ್ ರೂಪಾಂತರಗೊಂಡಿದೆ ಎಂದು ತಜ್ಞರು ಹೇಳಿದ್ದಾರೆ. ಇದಕ್ಕಾಗಿ ಅನಗತ್ಯ- ಭಯ,  ಆತಂಕ  ಬೇಕಿಲ್ಲ  ಕೊರೋನ  ಬಂದು ವಾಸಿಯಾದವರಿಗೆ ಮತ್ತೆ ಕೊರೋನ ಸೋಂಕು  ಕಾಡುವ, ಹರಡುವ  ಸಾಧ್ಯತೆ ಬಹಳ ಕಡಿಮೆ ಹೀಗಾಗಿ ಜನರು ಅನಗತ್ಯವಾಗಿ ಭಯ- ಆತಂಕ  ಪಡಬೇಕಿಲ್ಲ ಎಂದೂ  ತಜ್ಞರು ಜನತೆಗೆ ಅಭಯ ನೀಡಿದ್ದಾರೆ. 

ಸುದ್ದಿ ಓದಿ