ಕಣ್ಣು ಮುಚ್ಚಿ ಕುಳಿತ ಜನ ಪ್ರತಿನಿಧಿಗಳು, ಅಧಿಕಾರಿಗಳು : ನಾಗರಿಕರಲ್ಲಿ ಅಸಮಾಧಾನ
ಅಂಗನವಾಡಿ ಮಕ್ಕಳ ಸ್ಥಿತಿ ಅಯೋಮಯ
ಈರಣ್ಣಾ ಹೂಲ್ಲೂರ
ಯರಗಟ್ಟಿ 13: ಸಮೀಪದ ಮುರಗೋಡ ಗ್ರಾಮದ ಅಂಗನವಾಡಿ ಮಕ್ಕಳ ಸ್ಥಿತಿ ಅಯೋಮಯ ತಾಲೂಕಿನಲ್ಲೇ ಎರಡನೇ ಅತಿ ದೊಡ್ಡ ಗ್ರಾಮವಾದ ಮುರಗೋಡದಲ್ಲಿ ಪುಟ್ಟ ಮಕ್ಕಳಿಗೆ ಕಲಿಯಲು ಸೂಕ್ತ ಅಂಗನವಾಡಿ ಕೇಂದ್ರ ಇಲ್ಲ. ಸರ್ಕಾರಿ ಕಟ್ಟಡ ಶಿಥಿಲಾವಸ್ಥೆಗೆ ತಲುಪಿದ್ದು, ಬೀಡಾ ಅಂಗಡಿಯಲ್ಲಿ ಮಕ್ಕಳಿಗೆ ಶಾಲೆ ನಡೆಸಲಾಗುತ್ತಿದೆ.
ರಾಜ್ಯ ಸರ್ಕಾರದ ಪ್ರಭಾವಿ ಸಚಿವೆ ಅಂತ ಕರೆಸಿಕೊಳ್ಳುವ ಲಕ್ಷ್ಮೀ ಹೆಬ್ಬಾಳ್ಳರ ತವರು ಜಿಲ್ಲೆ ಸವದತ್ತಿ ಕ್ಷೇತ್ರದಲ್ಲಿ ಅಂಗನವಾಡಿ ಮಕ್ಕಳು ಪಡಬಾರದ ಕಷ್ಟ ಪಡುತ್ತಿದ್ದಾರೆ.ಅಂಗನವಾಡಿಗೆ ಸೂಕ್ತ ಕಟ್ಟಡ ಇಲ್ಲದೆ ಬೀಡಾ ಅಂಗಡಿಯಲ್ಲೇ ಮಕ್ಕಳು ಪಾಠ ಕಲಿಯುತ್ತಿದ್ದಾರೆ. ಅಲ್ಲದೇ ಅಲ್ಲೇ ಚರಂಡಿಯ ನೀರು ಹರಿಯುತ್ತಿದ್ದು ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ.
ಸೂಕ್ತ ಕಟ್ಟಡ ನೀಡಿ ಅಂತ ಗ್ರಾಮಸ್ಥರು ಪರಿಪರಿಯಾಗಿ ಬೇಡಿಕೊಂಡರೂ ಅಧಿಕಾರಿಗಳು ಜನಪ್ರತಿನಿಧಿಗಳು ಕ್ಯಾರೆ ಎನ್ನುತ್ತಿಲ್ಲ.
ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮುರಗೋಡ ಗ್ರಾಮದಲ್ಲಿ ಅಂಗನವಾಡಿ ಮಕ್ಕಳಿಗೆ ಕಲಿಯಲು ಸೂಕ್ತ ಅಂಗನವಾಡಿ ಕೇಂದ್ರವಿಲ್ಲ.ಹೊರಟ್ಟಿ ಓಣಿಯ ನಾಗರಭಾವಿ ರಸ್ತೆಯಲ್ಲಿರುವ ಅಂಗನವಾಡಿ ನಂ3 ಸರ್ಕಾರಿ ಕಟ್ಟಡ ಕೂಡ ಶಿತಿಲಾವಸ್ತೆಯಾಗಿದ್ದು ಆಗೋ ಈಗೋ ಬೀಳುವ ಹಂತದಲ್ಲಿದೆ. ಹೀಗಾಗಿ ಅಂಗನವಾಡಿ ಮಕ್ಕಳು ಪಾನ್ ಬೀಡಾ ಅಂಗಡಿಯಲ್ಲಿ ಪುಟ್ಟ ಮಕ್ಕಳು ಕಲಿಯುತ್ತಿದ್ದಾರೆ.ಶಿಕ್ಷಕರಿಗೆ ಕುಳಿತುಕೊಳ್ಳಲು ಜಾಗ ಇಲ್ಲ. ಇದ್ದುರಲ್ಲಯೇ ತರಕಾರಿ, ಗ್ಯಾಸ್ ವ್ಯವಸ್ಥೆ ಮಾಡಲಾಗಿದೆ. ಅಲ್ಲಿಯೇ ಮಕ್ಕಳು ಪಾಠ ಕಲಿಬೇಕು. ಹೊರಗಡೆ ಆಟವಾಡಲು ಹೋದರೆ ಗಬ್ಬೆದ್ದು ನಾರುತ್ತಿರುವ ಚರಂಡಿ ನೀರು, ಸೊಳ್ಳೆಗಳ ಕಾಟ.
ಹೀಗೆ ಒಂದು ವರ್ಷದಿಂದ ಹಲವಾರು ಸಮಸ್ಯೆಗಳನ್ನು ಪುಟ್ಟ ಮಕ್ಕಳು ಎದುರಿಸುತ್ತಿದ್ದಾರೆ. ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ಆಗಿಲ್ಲ ಅಧಿಕಾರಿಗಳು ಜನಪ್ರತಿನಿಧಿಗಳು ಕಣ್ಣು ಮುಚ್ಚಿ ಕುಳಿತ್ತಿದ್ದು ಗ್ರಾಮಸ್ಥರು ಆಕ್ರೋಶ ಹೊರಹಾಕುತ್ತಿದ್ದಾರೆ.
ಸಾಮಗ್ರಿ ಇಟ್ಟುಕೊಳ್ಳಬೇಕಾಗಿದೆ. ಇಂತಹ ದಯನೀಯ ಸ್ಥಿತಿಯಲ್ಲಿರುವ ಅಂಗನವಾಡಿಗೆ ಮಕ್ಕಳನ್ನು ಕಳುಹಿಸಲು ಪಾಲಕರು ಹಿಂಜರಿಯುತ್ತಿದ್ದಾರೆ.
ವರ್ಷ ಕಳೆದರೂ ಸಂಬಂಧಿಸಿದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸುಮ್ಮನೆ ಕುಳಿತಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನಾದರೂ ಹೊಸ ಅಂಗನವಾಡಿ ನಿರ್ಮಾಣವಾಗಲಿ ಎಂದು ಆಗ್ರಹಿಸಿದ್ದಾರೆ.
ಇನ್ನಾದರೂ ಸಚಿವೆ ಹೆಬ್ಬಾಳ್ಳರ ಹಾಗೂ ಜಿಲ್ಲಾಡಳಿತ ಪುಟ್ಟ ಮಕ್ಕಳ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಒಳ್ಳೆಯ ವಾತಾವರಣದಲ್ಲಿ ಪಾಠ ಕಲಿಯಲು ಅನುವು ಮಾಡಿಕೊಡಬೇಕಾಗಿದೆ.
ಮುರಗೋಡ ಗ್ರಾಮದ ನಂ-3 ಅಂಗನವಾಡಿ ಕಟ್ಟಡ ಶಿಥಿಲಗೊಂಡಿದ್ದರಿಂದ, ಹೊಸ ಕಟ್ಟಡ ನಿರ್ಮಾಣವಾಗುವವರೆಗೆ ಖಾಸಗಿ ಕಟ್ಟಡದಲ್ಲಿ ಅಂಗನವಾಡಿ ನಡೆಸಲಾಗುತ್ತಿದೆ. ಯಾರಾದರೂ ಉತ್ತಮ ಮನೆ ಬಾಡಿಗೆ ಕೊಟ್ಟರೆ ಅಂಗನವಾಡಿಯನ್ನು ಅಲ್ಲಿಗೇ ಸ್ಥಳಾಂತರಿಸುತ್ತೇವೆ.
ಸುನೀತಾ ಪಾಟೀಲ
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ, ಸವದತ್ತಿ
ಮುರಗೋಡ ಗ್ರಾಮದ ನಂ-3 ಅಂಗನವಾಡಿ ಕಟ್ಟಡ ಶಿಥಿಲಗೊಂಡಿದ್ದು ಇದರಬಗ್ಗೆ ನನಗೆ ಸಿಡಿಪಿಒ ಮಾಹಿತಿ ನೀಡಿದ್ದಾರೆ. ಈ ಕುರಿತು ತಕ್ಷಣವೆ ಹೊಸ ಕಟ್ಟಡ ನಿರ್ಮಾಣಕ್ಕೆ ಮಹಿಳಾ ಮತ್ತು ಮಕ್ಕಳ ಸಚಿವರ ಜೊತೆ ಮಾತನಾಡಿ ಶೀಘ್ರವೆ ಕಟ್ಟಡವನ್ನು ಸ್ಥಳಾಂತರ ಮಾಡಲಾಗುವುದು.
ವಿಶ್ವಾಸ ವೈದ್ಯ,
ಶಾಸಕರು ಯಲ್ಲಮ್ಮ ಮತ ಕ್ಷೇತ್ರ, ಸವದತ್ತಿ