ಸಂಪತ್ತು ಇದ್ದರೂ ಸಂತೃಪ್ತಿ ಇಲ್ಲ ಭಕ್ತಿ ಮತ್ತು ಶಕ್ತಿಯಲ್ಲಿ ಸಂತೃಪ್ತಿಯ ಸಾಧನೆ ಇದೆ: ಪ್ರಭಾಕರ ಬುವಾ
ರಾಣೇಬೆನ್ನೂರು 19: ಸಮಾನತೆಯಲ್ಲಿ ಶಾಶ್ವತ ಶಾಂತಿ ಮತ್ತು ನೆಮ್ಮದಿ ಇದೆ. ಭಕ್ತಿ ಮತ್ತು ಶಕ್ತಿ ಇದ್ದರೆ, ಯಾವುದಕ್ಕೂ ಕೊರತೆ ಇರುವುದಿಲ್ಲ ಅಂತಹ ಸಮಾಜ ಭಾವಸಾರ ಕ್ಷತ್ರಿಯ ಸಮಾಜವಾಗಿದೆ ಎಂದು ಪಂಡರಪುರ ಕ್ಷೇತ್ರದ ಹ. ಬ. ಪ.ಪ್ರಭಾಕರ ಬುವಾ ಬೋಧಲೆ ಮಹಾರಾಜ್ ನುಡಿದರು. ಅವರು ಸೋಮವಾರ ಇಲ್ಲಿನ ದೊಡ್ಡಪೇಟೆಯ ಶ್ರೀ ಪಾಂಡುರಂಗ ರುಕುಮಾಯಿ ದೇವರ 29ನೇ ವಾರ್ಷಿಕ ದಿಂಡಿ ಮಹೋತ್ಸವ ಮತ್ತು ಭಾವಸಾರ ಸಮುದಾಯ ಭವನದ ಲೋಕಾರೆ್ಣ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು. ನಿತ್ಯವೋ ತಮ್ಮ ಕರ್ತವ್ಯದಲ್ಲಿ ದೇವರನ್ನು ಕಾಣುವ ಈ ಸಮಾಜಕ್ಕೆ ಎಂದಿಗೂ ಬಡತನವಿಲ್ಲ. ಎಲ್ಲ ಸಮಾಜದ ಜೊತೆಗೆ, ಅತ್ಯಂತ ಪ್ರೀತಿ ವಿಶ್ವಾಸ ಮತ್ತು ನಂಬಿಕೆಯೊಂದಿಗೆ ಬದುಕಿ ಬಾಳುವ ಈ ಸಮುದಾಯ ಸದಾ ಶಾಂತಿ ಪ್ರಿಯರಾಗಿದ್ದಾರೆ ಎಂದರು.
ಎಲ್ಲವೂ ಇದ್ದು ಮಾನಸಿಕ ನೆಮ್ಮದಿ ಇಲ್ಲದೆ ಹೋದರೆ, ಎಷ್ಟು ಸಂಪತ್ತುಗಳಿಸಿದರೆನು ಫಲ. ಎನ್ನುವುದನ್ನು ಪ್ರತಿಯೊಬ್ಬ ಮಾನವ ಜೀವಿ ಅರ್ಥ ಮಾಡಿಕೊಂಡು ನಡೆದಾಗ, ದೇವರು ಧರ್ಮ, ಆಧ್ಯಾತ್ಮ, ಮತ್ತು ಆರಾಧನೆ ಇವು ನಿತ್ಯದ ಸಾಧನೆಗಳಾಗಲಿವೆ. ಹಿರಿಯರು ಸಾಕಷ್ಟು ಪ್ರಗತಿ ಸಾಧಿಸಿದ್ದಾರೆ. ಭವಿಷ್ಯದ ಯುವಜನಾಂಗ ಇತಿಹಾಸದ ಪರಿಕಲ್ಪನೆಯಲ್ಲಿ ಸಾಗಿ ಮತ್ತಷ್ಟು ಪ್ರಗತಿ ಸಾಧಿಸಲು ಮುಂದಾಗ ಬೇಕೆಂದು ಆಶಿಸಿದರು. ಭಾವಸಾರ ಕ್ಷತ್ರಿಯ ಸಮುದಾಯ ಭವನ ಲೋಕಾರೆ್ಣಗೊಳಿಸಿ ಮಾತನಾಡಿದ, ಮಾಜಿ ಸಚಿವ, ಆರ್. ಶಂಕರ್ ಅವರು, ಸಮಾಜಮುಖಿ ಸೇವಾ ಕಾರ್ಯಗಳು ಈ ಸಮುದಾಯದ ಪ್ರತಿಯೊಬ್ಬರಲ್ಲಿಯೂ ಇದೆ. ಸಮಾಜ, ಸಂಸ್ಕೃತಿ,ಆಚಾರ- ವಿಚಾರ ಜೊತೆಗೆ ಆಧ್ಯಾತ್ಮದ ಆರಾಧಕರಾಗಿ ಬದುಕಿನಲ್ಲಿ ಸಂತೃಪ್ತಿಯನ್ನು ಕಾಣುತ್ತಿರುವ ಈ ಸಮಾಜದ ಸೇವಾ ಕಾರ್ಯವು ಅತ್ಯಂತ ಪ್ರಸಂಸಾರವಾಗಿದೆ ಎಂದರು.
ಸಣ್ಣ ಸಣ್ಣ ಸಮಾಜಗಳು ಅಭಿವೃದ್ಧಿ ಹೊಂದಬೇಕಾದರೆ, ಸಮಾಜದಜೊತೆಗೆ ಸಾರ್ವಜನಿಕರ ಸಹಾಯ ಸಹಕಾರ ಅಗತ್ಯ. ತಮ್ಮ ಅಧಿಕಾರದ ಅವಧಿಯಲ್ಲಿ, 10 ಲಕ್ಷ ರೂಗಳ ಅನುದಾನ ನೀಡಲಾಗಿದ್ದು, ಇನ್ನಷ್ಟು ಆರ್ಥಿಕ ಸಹಾಯ ನೀಡಬೇಕೆನ್ನುವ ಸಂಕಲ್ಪವನ್ನು ಹೊಂದಿದ್ದೇನೆ. ಅದಕ್ಕೆ ಸಂತರ ಅನುಗ್ರಹ, ಭಗವಂತನ ಆಶೀರ್ವಾದ ಇರಲೆಂದು ಆಶಿಸಿದರು. ಸಮಾಜದ ಅಧ್ಯಕ್ಷ ರಾಮಚಂದ್ರ್ಪ ನವಲೆ ಅವರು ಅಧ್ಯಕ್ಷತೆ ವಹಿಸಿದ್ದರು.ಕರಾವಳಿ ಬಳಗದ ಅಧ್ಯಕ್ಷ ರತ್ನಾಕರ ಕುಂದಾಪುರ,ಎ. ಐ. ಬಿ.ಕೆ. ಎಂ, ಜಿಲ್ಲಾ ಅಧ್ಯಕ್ಷ ಪ್ರಕಾಶ್ ಮಾಳದಕರ, ಕ.ರಾ ವಾ. ಮಂಡಳಿ ಅಧ್ಯಕ್ಷ ಹ. ಬ. ಪ ಭಾನುದಾಸ ಸರ್ವದೆ, ವಿಠೋಬಾ ಮಂದಿರದ ಮಾಜಿ ಅಧ್ಯಕ್ಷ ಜಗದೀಶ್ ಗುಜ್ಜರ್, ಬೀಜೋತ್ಪಾದಕ ಭಗತಸಿಂಗ್, ಉದ್ಯಮಿ ಕೃಷ್ಣಾಸಾ ಪವಾರ್, ರಾಜು ಪವಾರ್, ಮಾಲತೇಶ್ ಜಿಂಗಾಡೆ ಸೇರಿದಂತೆ ಮತ್ತಿತರ ಗಣ್ಯರು, ಸಮಾಜದ ಮುಖಂಡರು, ಮಹಿಳಾ ಸಂಘಟನೆಯ ಮುಖಂಡರು ಪದಾಧಿಕಾರಿಗಳು ಯುವಕರು ಉಪಸ್ಥಿತರಿದ್ದರು. ಶ್ರೀಮತಿ ಶ್ವೇತಾ ಜಿಂಗಾಡೆ ಪ್ರಾರ್ಥಿಸಿದರು.ಮಿಥುನ ಟಿಕಾರೆ ಸ್ವಾಗತಿಸಿ,ಕಮಲಾಕರ ಪಿಸೆ ಪ್ರಾಸ್ತಾನಿಕವಾಗಿ ಮಾತನಾಡಿದರು. ಕೆ. ಎಸ್. ನಾಗರಾಜ್ ನಿರೂಪಿಸಿ, ಕಾರ್ಯದರ್ಶಿ ಅಶೋಕ್ ಟಿಕಾರೆ ವಂದಿಸಿದರು. ಇದೇ ಸಂದರ್ಭದಲ್ಲಿ ಸಮಾಜದ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ ಸಾಧನೆ ಮೆರೆದ, ವೈದ್ಯರು, ವಕೀಲರು, ಸಾಮಾಜಿಕ ಚಿಂತಕರು, ಮೊದಲಾದವರನ್ನು ಅಭಿನಂದಿಸಿ, ಸನ್ಮಾನಿಸಲಾಯಿತು.