ಶಿಗ್ಗಾವ್

ದಲಿತರ ಕಷ್ಟ ಸುಖದಲ್ಲಿ ಭಾಗಿ ಅಗತ್ಯ: ಶಿವಳ್ಳಿ

ದಲಿತರ ಕಷ್ಟ ಸುಖದಲ್ಲಿ ಭಾಗಿ ಅಗತ್ಯ:  ಶಿವಳ್ಳಿ

ಶಿಗ್ಗಾವಿ 16:  ರಾಜಕಾರಣಿಗಳು ಭರವಸೆ ನೀಡಿದಂತೆ ನಡೆದುಕೊಳ್ಳಬೇಕು, ಬಾಬಾ ಸಾಹೇಬ್ ಅಂಬೇಡ್ಕರ ಜಯಂತಿಗೆ ನಮ್ಮ ಸಹೋದರರ ಹೆಸರಲ್ಲಿ ಒಂದು ಲಕ್ಷ ರೂ. ದೇಣಿಕೆ ನೀಡುತ್ತೇನೆ ಮತ್ತು ಅಂಬೇಡ್ಕರ ಅವರ ಪುತ್ಥಳಿ ನಿರ್ಮಾಣ ಮಾಡದಿದ್ದರೆ ಸಮೂದಾಯದ ಯುವಕರೆಲ್ಲರೂ ಸೇರಿ ನಾವೇ ಪುತ್ಥಳಿ ನಿರ್ಮಾಣ ಮಾಡುತ್ತೇವೆ ಎಂದು ಕೆಪಿಸಿಸಿ ಸದಸ್ಯ ಷಣ್ಮೂಕಪ್ಪ ಶಿವಳ್ಳಿ ಸಂಬಂದಿಸಿದ ಅಧಿಕಾರಿಗಳ ವಿರುದ್ಧ ಗುಡುಗಿದರು.

ಪಟ್ಟಣದ ಅಂಬೇಡ್ಕರ ನಗರದಲ್ಲಿ ಅಂಬೇಡ್ಕರ ನಗರದ ಯುವಕರ ನೇತೃತ್ವದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ ಮತ್ತು ಡಾ ಬಾಬು ಜಗಜೀವನರಾಮ ಅವರ ಜಯಂತೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ದಲಿತರ ಕಷ್ಟ, ದುಃಖ, ಹಾಗೂ ಸಂತೋಷದಲ್ಲಿ ನಾವೆಲ್ಲರೂ ಭಾಗಿಯಾಗಬೇಕು, ಅವರಲ್ಲಿನ ನೋವು ದೂರವಾಗುತ್ತದೆ, ಭರವಸೆಗಳಿಂದ ಅವರು ಉದ್ದಾರವಾಗುವದಿಲ್ಲ, ಎಂದರು.

ಕಾಂಗ್ರೆಸ್ ಮುಖಂಡ ಶ್ರೀಕಾಂತ ದುಂಡಿಗೌಡ್ರ ಮಾತನಾಡಿ ಹೋರಾಟದಿಂದ ಅಂಬೇಡ್ಕರ ಅವರ ಪುತ್ಥಳಿ ಪಡೆಯಬೇಕಾದ ಅನಿವಾರ್ಯತೆ ಬೇಸರ ತಂದಿದೆ, ಆರ್ಥಿಕ ಗುಲಾಮಗಿರಿ ವ್ಯವಸ್ಥೆಯಿಂದ ಹೊರಬರಬೇಕಾದರೆ ಗುರಿ ಮತ್ತು ಕನಸ್ಸಿನಂತೆಯೇ ಶ್ರಮ ಇರಬೇಕು, ಯುವಕರು ಮುಂದೆ ಬಂದು ಧೈರ್ಯದಿಂದ ಇತಂಹ ಕಾರ್ಯಕ್ರಮಗಳನ್ನು ಮಾಡಬೇಕು, ಸರ್ಕಾರ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು, ಮುಂದಿನ ವರ್ಷ ಅಂಬೇಡ್ಕರ ಜಯಂತಿಯನ್ನು ಕಿರು ನಾಟಕ ಮಾಡಿಸುವ ಮೂಲಕ ಆಚರಣೆ ಮಾಡೋಣ ಎಂದರು.

ಮಾನವ ಹಕ್ಕುಗಳ ಆಯೋಗದ ರಾಜ್ಯ ಉಪಾದ್ಯಕ್ಷ ಹಾಗೂ ನ್ಯಾಯವಾದಿ ಹನುಮಂತಪ್ಪ ಬಂಡಿವಡ್ಡರ ಮಾತನಾಡಿ ನಮ್ಮ ತಾಲೂಕಿನಲ್ಲಿ ಮಾತನಾಡುವ ಹಕ್ಕನ್ನು ಹಾಗೂ ರಾಜಕೀಯದ ಹಕ್ಕನ್ನು ಕಸೆದುಕೊಳ್ಳುವ ಕೆಲಸಗಳು ನಡೆಯುತ್ತಿವೆ, ಜಯಂತಿಯಂದು ಅಂಬೇಡ್ಕರ ಅವರ ಪುತ್ಥಳಿಗೆ ಗುದ್ದಲಿ ಪೂಜೆ ಮಾಡದ ಅಧಿಕಾರಿಗಳನ್ನು ಖಂಡಿಸುತ್ತೇವೆ, ಹೋರಾಟಗಳನ್ನು ಹತ್ತಿಕ್ಕಿ ಯುವಕರನ್ನು ತುಳಿಯುವಂತ ಕೆಲಸಗಳು ನಡೆದಿವೆ ಅಧಿಕಾರಿಗಳು ಜಯಂತಿಗಳ ಹಣವನ್ನು ನುಂಗುತ್ತಿದ್ದಾರೆ ಎಂದು ಆರೋಪಿಸಿದರು.

ಪುರಸಭೆ ಅದ್ಯಕ್ಷ ಶ್ರೀಕಾಂತ ಬುಳ್ಳಕ್ಕನವರ ಮಾತನಾಡಿ  ಪುತ್ಥಳಿ ನಿರ್ಮಾಣಕ್ಕೆ ಎಲ್ಲ ರೀತಿಯ ಸಿದ್ದತೆ ಮಾಡಿಕೊಳ್ಳಲಾಗಿದೆ, ಸಂಕೀರ್ಣದ ಸ್ಲ್ಯಾಬ್ ಹಾಕುವದು ಮುಗಿದ ಮೇಲೆ ಕಟ್ಟಡದ ಮೊದಲೇ ಅಂಬೇಡ್ಕರ ಪುತ್ಥಳಿ ಅನಾವರಣಗೊಳಿಸಲಾಗುವದು ಎಂದರು.

ಪುರಸಭೆ ಉಪಾಧ್ಯಕ್ಷ ಮಂಜುನಾಥ ಬ್ಯಾಹಟ್ಟಿ ಮಾತನಾಡಿ ಪುತ್ಥಳಿ ನಿರ್ಮಾಣ ಕಾರ್ಯ ವಿಳಂಬವಾಗಲು ಸಮೂದಾಯದ ನಾವೇಲ್ಲರೂ ಕಾರಣರು ಸ್ಥಳ ನಿಗದಿಯಲ್ಲಿ ನಮ್ಮದು ಒಮ್ಮತವಿರಲಿಲ್ಲ ಎಂದರು. ಮಾಜಿ ವಿಪ ಸದಸ್ಯ ಸೋಮಣ್ಣ ಬೇವಿನಮರದ, ಮುಖಂಡ ಎಸ್ ಎಫ್ ಮಣಕಟ್ಟಿ, ಮಾತನಾಡಿದರು. ಪ್ರೊ. ಶ್ರೀಶೈಲ್ ಹುದ್ದಾರ ಉಪನ್ಯಾಸ ನೀಡಿದರು, ಕಾರ್ಯಕ್ರಮದಲ್ಲಿ ಸಂಘಟಕರಿಂದ ಅತಿಥಿಗಳನ್ನು ಸನ್ಮಾನಿಸಲಾಯಿತು.

ಮುಖಂಡರಾದ ಕರೆಪ್ಪ ಕಟ್ಟಿಮನಿ, ಮಂಜನಾಥ ತಿಮ್ಮಾಪೂರ, ಅಶೋಕ ಕಾಳೆ, ಡಿ ಎಫ್ ಧಾರವಾಡ, ಶಿವಾನಂದ ಹಾಗಲೂರ, ಶಂಭೂ ಆಜೂರ, ಪರಶುರಾಮ ಪೂಜಾರ, ಅಣ್ಣಪ್ಪ ಲಮಾಣಿ, ಮಾಲಿಂಗಪ್ಪ ಮಾಕಾಪೂರ, ಪವನಕುಮಾರ ಧಾರವಾಡ, ಕಂಠೆಪ್ಪ ಚನ್ನದಾಸರ, ಚಂದ್ರಪ್ಪ ಡೊಳ್ಳೆಶ್ವರ, ರಶೀದ ಗೊಟಗೋಡಿ, ಬಸಪ್ಪ ಚನ್ನದಾಸರ, ಫಕ್ಕಿರಪ್ಪ ಬನ್ನಿಮಟ್ಟಿ, ಲಕ್ಷ್ಮಣ ಕಾಳೇ, ಹನಮಂತಪ್ಪ ಕಟ್ಟಿಮನಿ, ಮಂಜಪ್ಪ ಧಾರವಾಡ, ಮಲ್ಲೇಶಪ್ಪ ಧಾರವಾಡ, ರಾಮಚಂದ್ರಪ್ಪ ಧಾರವಾಡ, ರಾಮಣ್ಣ ಧಾರವಾಡ, ಮುಕ್ತ್ಯಾರ ತಿಮ್ಮಾಪೂರ, ಶಿವಪ್ಪ ಭಜಂತ್ರಿ, ಶರೀಫ ಮಾಕಪ್ಪನವರ, ಇದ್ದರು ಉಪನ್ಯಾಸಕ ರಾಜು ಕೆಂಬಾವಿ ಸ್ವಾಗತಿಸಿದರು, ನವೀನ ಸಾಸನೂರ ನಿರುಪಿಸಿ ವಂದಿಸಿದರು.

ಸುದ್ದಿ ಓದಿ