ಬೈಲಹೊಂಗಲ

ಸೋಯಾಬಿನ ಹುರುಳಿ ಚೀಲಗಳ ಕಳ್ಳತನ: ಆರೋಪಿಗಳ ಬಂಧನ

ಸೋಯಾಬಿನ ಹುರುಳಿ ಚೀಲಗಳ ಕಳ್ಳತನ: ಆರೋಪಿಗಳ ಬಂಧನ

ಲೋಕದರ್ಶನ ವರದಿ 


ಬೈಲಹೊಂಗಲ 04: ತಾಲೂಕಿನ ಮದಲಭಾಂವಿ ಗ್ರಾಮದ ಜಮೀನಿನಲ್ಲಿರುವ ಶೆಡ್ಡಿನಲ್ಲಿ ಇಟ್ಟಿದ್ದ ಸೋಯಾಬಿನ ಹುರುಳಿ ತುಂಬಿದ 22 ಚೀಲಗಳನ್ನು ದೋಚಿದ್ದ ಕಳ್ಳರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. 

ನೇಸರಗಿ ಗ್ರಾಮದ ತುಕಾರಾಮ ಫಕೀರ​‍್ಪ ಹಂಚಿನಮನಿ, ರಾಮಚಂದ್ರ ಅಪ್ಪಣ್ಣ ವಡ್ಡಯಲ್ಲಪ್ಪಗೋಳ, ಫಕೀರ​‍್ಪ ಗಂಗಪ್ಪ ಹಂಚಿನಮನಿ, ಶಂಕರ ಹನುಮಂತಪ್ಪ ಹಂಚಿನಮನಿ ಆರೋಪಿತರು ಎಂದು ಗುರುತಿಸಲಾಗಿದೆ.  

ಶೆಡ್ಡಿನಲ್ಲಿ ರೂ.1 ಲಕ್ಷ 25 ಸಾವಿರ ಮೌಲ್ಯದ ಸೋಯಾಬಿನ ಹುರುಳಿ ತುಂಬಿದ 22 ಚೀಲಗಳನ್ನು ನವ್ಹೆಂಬರ 25 ರಂದು ರಾತ್ರಿ ಕಳ್ಳರು ಶೆಡ್ಡಿನ ಕೀಲಿ ಮುರಿದು ದೋಚಿದ್ದರು. ಈ  ಕುರಿತು ಜಮೀನಿನ ಮಾಲೀಕ ನ.26 ರಂದು ದೊಡ್ಡಗೌಡ ಬಾಬಾಗೌಡ ಪಾಟೀಲ ನೇಸರಗಿ ಪೊಲೀಸ ಠಾಣೆಗೆ ದೂರು ದಾಖಲಿಸಿದ್ದರು.  

  ಈ ಕುರಿತು ಪೊಲೀಸರ ಚಾಣಾಕ್ಷತೆಯಿಂದ ಪ್ರಕರಣವನ್ನು ಭೇದಿಸಿ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.  

ಬಂಧಿತರಿಂದ ರೂ.2.25 ಲಕ್ಷ ಹುರುಳಿ,  ರೂ.5 ಲಕ್ಷ ಮೌಲ್ಯದ ಟ್ಯಾಕ್ಟರ್ ಹಾಗೂ ಟೇಲರ್, 10 ಗ್ರಾಮ ಬಂಗಾರ ವಶಪಡಿಸಿಕೊಂಡು ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ವಶಪಡಿಸಿದ್ದಾರೆ. 

   ಪ್ರಕರಣ ಭೇದಿಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಹೆಚ್ಚುವರಿ ಪೊಲೀಸ್ ಅಧಿಕ್ಷಕ ಅಮರನಾಥ ರೆಡ್ಡಿ, ಡಿವೈಎಸಪಿ ಶಿವಾನಂದ ಕಟಗಿ, ಸಿಪಿಐ ಉಳವಪ್ಪ ಸಾತೇನಹಳ್ಳಿ ಇವರ ಮಾರ್ಗದರ್ಶನದಲ್ಲಿ ತಂಡ ರಚಿಸಿ ನೇಸರಗಿ ಪಿಎಸೈ ವಾಯ್‌.ಎಲ್‌.ಶೀಗಿಹಳ್ಳಿ, ಎಸೈ ಎಸ್‌.ಎಂ.ಯರಗಟ್ಟಿ, ಎಸ್‌.ವ್ಹಿ.ಪತ್ತಾರ, ಪೇದೆಗಳಾದ ವ್ಹಿ.ಎಸ್‌.ಯರಗಟ್ಟಿಮಠ, ಆರ್‌.ಕೆ.ಉದಪುಡಿ, ಎಸ್‌.ಆರ್‌.ದೇಸಾಯಿ, ಎ.ಎಸ.ಬಡಿಗೇರ, ಎಸ್‌.ಐ.ಅಮರಾಪುರ, ಐ.ಬಿ.ನಡುವಿನಹಳ್ಳಿ, ಬಿ.ಐ.ಅರಳೀಕಟ್ಟಿ, ಎಸ್‌.ಬಿ.ಮುರಗೋಡ, ಬಿ.ಬಿ.ಪಾಟೀಲ ಜಾಲ ರಚಿಸಲಾಗಿತ್ತು.  

  ತನಿಖಾ ತಂಡವನ್ನು ಮೇಲಾಧಿಕಾರಿಗಳು ಅಭಿನಂದಿಸಿದ್ದಾರೆ. 


ಸುದ್ದಿ ಓದಿ