ಹೂವಿನ ಹಡಗಲಿ

ಪಂಪ್ ಸೆಟ್ಗಳ ವಿದ್ಯುತ್ ಕೇಬಲ್ ಕಳ್ಳತನ : ರೈತರು ಆತಂಕ

ಪಂಪ್ ಸೆಟ್ಗಳ ವಿದ್ಯುತ್ ಕೇಬಲ್ ಕಳ್ಳತನ : ರೈತರು ಆತಂಕ

ಲೋಕದರ್ಶನ ವರದಿ 

ಹೂವಿನಹಡಗಲಿ  9:  ತಾಲ್ಲೂಕಿನ ಅಡವಿಮಲ್ಲನಕೇರಿ ಗ್ರಾಮ ವ್ಯಾಪ್ತಿಯ ರೈತರ ಜಮೀನುಗಳಲ್ಲಿ ಮಂಗಳವಾರ ರಾತ್ರಿ ಪಂಪ್ ಸೆಟ್ಗಳ ವಿದ್ಯುತ್ ಕೇಬಲ್ ಸರಣಿ ಕಳವಾಗಿದ್ದು,  ಲಕ್ಷಕ್ಕೂ ಅಧಿಕ ಮೊತ್ತ ನಷ್ಟವಾಗಿದೆ.ಗ್ರಾಮದ ಎಸ್‌.ಕರಿಬಸಪ್ಪ, ಮನೆಗುದರಿ ದೇವಪ್ಪ, ಬೆನಕಲ್ ವೀರೇಶ ಅವರ ಜಮೀನಿನಲ್ಲಿ ಮೋಟಾರ್  ಪಂಪ್, 60ಅಡಿ ಕೇಬಲ್  ಕಟ್ ಮಾಡಿ ಲಪಟಾಯಿಸಿದ್ದಾರೆ. ಪಕ್ಕದ ಗ್ರಾಮದ ಕಣವಿ ಹಳ್ಳಿಯಲ್ಲಿ ರೈತರ ಜಮೀನುಗಳಲ್ಲಿ ಕೊಳವೆಬಾವಿ(ಬೋರ್ವೆಲ್)ನಿಂದ ಯಂತ್ರಗಾರಗಳವರೆಗೆ ಹೊರಗೆ ಬಿಟ್ಟಿರುವ ಕೇಬಲ್ ಅನ್ನು ಕಳ್ಳರು ಕತ್ತರಿಸಿ ಕದ್ದೊಯ್ದಿದ್ದಾರೆ.ಇದೀಗ ಸರಣಿ ಕಳ್ಳತನ ದಿಂದ ರೈತ ರು ಆತಂಕವಾಗಿದೆ. 


ಸುದ್ದಿ ಓದಿ