ಶಿಗ್ಗಾವ್

ಅಂಕದ ಪರದೆಯ ಹಿಂದೆ ಸರಿಯುತ್ತಲಿದೆ ರಂಗಸಜ್ಜಿಕೆ..

ಅಂಕದ ಪರದೆಯ ಹಿಂದೆ ಸರಿಯುತ್ತಲಿದೆ ರಂಗಸಜ್ಜಿಕೆ..

ಶಿಗ್ಗಾವಿ 29: “ರಾತ್ ಗಯೀ, ಬಾತ್ ಗಯೀ” ರಾತ್ರಿಯು ಕಳೆಯಿತು, ಕೊಟ್ಟಮಾತು ಹೊಯ್ತು.. ಎನ್ನುವಂತಾಗಿದೆ ಬಣ್ಣದ ಬದುಕು, ಆಸುಪಾಸಿನ ಬೇರೆ ಮೂರ್ನಾಲ್ಕು ಜಿಲ್ಲೆಗಳಲ್ಲಿರದಷ್ಟು ನಾಟ್ಯ ವಸ್ತು ಭಾಂಡರ (ರಂಗಸಜ್ಜಿಕೆ) ಹಾವೇರಿ ಜಿಲ್ಲೆಯ ಶಿಗ್ಗಾಂವ ತಾಲೂಕಿನಲ್ಲಿದೆ.  

ತಾಲೂಕಿನ ಒಟ್ಟು ನಾಲ್ಕು ಸೀನರಿ ರಂಗಸಜ್ಜಿಕೆಗಳು ನಿರಂತರ ಸೇವೆಯಲ್ಲಿವೆ, ಹಿರಿಯ ರಂಗ ಸಂಗೀತಗಾರ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೆ. ಕೊಟ್ರೇಶ ಮಾಸ್ತರರ ಬಡೆತನದ ‘ಕಲಾಶ್ರೀ ಡ್ರಾಮಾ ಸೀನರಿ ಬೆಳಗಲಿ’ ಬೆಳವಲಕೊಪ್ಪದ ಮೌಲಾಖಾನ ಚಿಲ್ಲೂರ ಒಡೆತನದ ಎರೆಡು ಸೆಟ್ ‘ಧೀನ ಫಕ್ಕೀರೆಶ್ವರ ಡ್ರಾಮಾ ಸೀನರಿ, ಶಿಗ್ಗಾವಿಯ ಶಂಕರ ಅರ್ಕಸಾಲಿಯವರ ಬಯಲಾಟ ಸೀನರಿನಿಂದಿನ ದಿನಮಾನದಲ್ಲಿ ರಂಗಸಜ್ಜಿಕೆ ನಿರ್ವಹಣೆ ದುಸ್ತರ ಸ್ಥಿತಿಯಲ್ಲಿದೆ ಸೀನರಿಗಳ  ವೆಚ್ಚ, ಧ್ವನಿವರ್ಧಕ, ಜನರೇಟರ್, ವೇಷಭೂಷಣ, ಪರಿಕರ ಸಾಗಾಣಿಕೆ ವಾಹನ ಬಾಡಿಗೆ,  ಆರೆಂಟು ಕೆಲಸಗಾರರ ಸಂಭಾವನೆ, ಲಕ್ಷಾಂತರ ರೂಪಾಯಿ ವ್ಯಯಮಾಡಿ, ಮಳೆಗಾಳಿಗೆ ಆಗುವ ಲುಕ್ಷಾನು ಸಹಿಸಿಕೊಂಡು, ಸಂಸ್ಥೆಗಳು ನಾಡಿನ ನಾನಾ ಭಾಗದ ನಗರ ಹಾಗೂ ಗ್ರಾಮೀಣ ರಂಗಭೂಮಿ ಸಾಂಸ್ಕೃತಿಕ ವೈಭವವನ್ನು ಶ್ರೀಮಂತಗೊಳಿಸುತ್ತ ಹಲವು ದಶಕಗಳ ಕಾಲದಿಂದ ಶ್ರಮಿಸುತ್ತಿವೆ, ಇ ಎಲ್ಲ ಸಂಸ್ಥೆಗಳು ಸ್ಥಳೀಯವಾಗಿ ಅಸ್ತಿತ್ವದಲ್ಲಿರುವುದರಿಂದ ಆಸಿಪಾಸಿನ ಊರು, ತಾಲೂಕು, ಜಿಲ್ಲೆಗಳಲ್ಲಿರದಷ್ಟು ಪ್ರದರ್ಶನಗಳು ತಾಲೂಕಿನಲ್ಲಿ ರಂಗ ಪ್ರದರ್ಶನಗಳು ಜೀವಂತವಾಗಿವೆ. 

ಕಳೆದ ಹತ್ತು ವರ್ಷಗಳಿಂದಾಚೆ ನಿರಂತರ ಪ್ರದರ್ಶನಗಳು ಸಂಸ್ಥೆಗಳಿಗೆ ದೊರೆಯುತ್ತಿದ್ದವು, ದೀಪಾವಳಿಯ ನಂತರ ಸುಗ್ಗಿಕಾಲ ಮುಗಿದ ನಂತರ ಅಟನಾಟಕಾದಿಗಳು ತಾಲಿಮೂ ಕಲಿಕೆಯ ನಂತರ ಮಕರ ಸಂಕ್ರಮಣ ದಿಂದ ಪ್ರಾರಂಭವಾಗುತ್ತಿದ್ದ ಹಬ್ಬ-ಹರಿದಿನ, ಜಾತ್ರೆಗಳ ಪ್ರಯುಕ್ತ ಅರಂಭಗೊಂಡ ಪ್ರದರ್ಶನಗಳು ಮೇ ತಿಂಗಳ ಅಂತ್ಯದ ವರೆಗೂ ಪ್ರದರ್ಶನ ಜರುಗುತ್ತಿದ್ದವು, ಇತ್ತಿಚಿನ ದಿನಗಳಲ್ಲಿ ರಂಗಕಲೆಯಲ್ಲಿ ಯುವಜನತೆಯ ನಿರಾಸಕ್ತಿ, ಅಪಾರ ಖರ್ಚುವೆಚ್ಚಗಳು ಪ್ರದರ್ಶನಗಳಿಗೆ ಹಿನ್ನೆಡೆ ಯಾಗಲೂ ಒಂದು ಕಾರಣ, ಒಂದು ಸಾಮಾಜಿಕ ನಾಟಕ ಪ್ರದರ್ಶನಕ್ಕೆ ನಟಿಯರ, ಸಂಗೀತ ಬಳಗದ, ಸೀನರಿ ಸಂಭಾವನೆ ಸೇರಿ ಸುಮಾರು 80 ರಿಂದ 90 ಸಾವಿರದ ರೂ. ಒಂದು ಬಯಲಾಟಕ್ಕೆ ಸುಮಾರು 50 ಸಾವಿರ ರೂ. ಖರ್ಚು ಪ್ರದರ್ಶಿತ ತಂಡಗಳಿಗೆ ಹೊರೆಯಾಗವುದರಿಂದ ರಂಗಪ್ರದರ್ಶನಗಳಿಗೆ ಹಿನ್ನಡೆಗೆ ದುರಂತ ನಾಂದಿಯಾಗಿದೆ.  

ಇತ್ತಿಚಿನ ದಿನಗಳಲ್ಲಿ ಎಲ್ಲ ಪ್ರದರ್ಶನಗಳಿಗೂ ಸರ್ಕಾರದ ಸಹಾಯಧನ ದೊರೆಯುವುದಿಲ್ಲ, ಬರಿ ಸರ್ಕಾರವನ್ನೆ ನೆಚ್ಚಿ ಕೊಳ್ಳುವುದಕ್ಕಿಂತ ಸಂಘ-ಸಂಸ್ಥೆಗಳ, ಕಲಾ ಪ್ರೇಮಿಗಳ ಸಹಕಾರವಿದ್ದಲ್ಲಿ ನಮ್ಮ ಸಾಂಸ್ಕೃತಿಕ ಕ್ಷೇತ್ರಕ್ಕೆ ಪುನರುಜ್ಜೀವನ ದೊರೆಯ ಬಹುದಾಗಿದೆ.  

ಕಳೆದೆರೆಡು ವರ್ಷಗಳಿಂದ ನಾಡಿಗೆ ಮಾರಕವಾಗಿರುವ ಕರೋನಾ, ಸರ್ಕಾರದ ನೀತಿ ನಿಯಮಗಳು ರಂಗಭೂವಿ ಕ್ಷೇತ್ರ ನಲುಗುತ್ತಿದೆ, ವರ್ಷದ 5-6 ತಿಂಗಳಕಾಲ ಪ್ರದರ್ಶನವಾಗುತ್ತಿದ್ದ ಪ್ರದರ್ಶನಗಳು ಕೇವಲ ಎರಡ್ಮೂರು ತಿಂಗಳಿಗೆ ಸೀಮಿತವಾಗಿವೆ, ಸೀನರಿ ಸೆಟ್‌ಗಳ ದುಭಾರಿ ನಿರ್ವಹಣೆ ಕಷ್ಟಕರವಾಗಿದ್ದು, ಇದು ನಮ್ಮ ಕಾಲಕ್ಕೆ ಕೊನೆಯಾಗುತ್ತದೆ ಮಕ್ಕಳಾರು ಇ ಭವಿಷ್ಯವಿಲ್ಲದ ವೃತ್ತಿ ಕಡೆ ಮುಖಮಾಡಲಿಲ್ಲ, ಕಲಾಸಕ್ತರಿಗೆ ರಸದೌತಣ ನೀಡಿದ ಮನಶಾಂತಿಯಿದೆ ನಾಟಕ ಕ್ಷೇತ್ರದ ಅನೇಕ ಶಿಷ್ಯರನ್ನು ರಂಗಭೂಮಿಗೆ ಕೊಡುಗೆ ನೀಡಿದ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಕಲಾವಿದ ಕೊಟ್ರೇಶ ಮಾಸ್ತರ ಬೆಳಗಲಿಯವರ ಅನಿಸಿಕೆ. 

ಮುಂದಿನ ಪಿಳಿಗಿಗೆ ನಾವು ಸಮಬಾಳು, ಸಹಿಷ್ಣುತೆ, ಸಾಮರಸ್ಯ, ಬೌಧಿಕ ವಿಕಸನಗಳ ಸಮ್ಮಿಲನ ದೈಹಿಕ ಶ್ರಮಸಾಧನ ಭಾಗವಾದ ರಂಗಕಲೆಗಳ ಅಭಿನಯ, ನಟನೆ, ಹಾಡುಗಾರಿಕೆ, ಆಟನಾಟಕದಿಗಳ ರಂಗಭೂಮಿ ಕಲಾಪ್ರಕಾರಗಳನ್ನು ಕಲಿಸಿ, ಪರಿಚಯಿಸಿ, ಕೊಡದಿದ್ದರೆ, ಸಾಂಸ್ಕೃತಿಕನಾಡು  ರಾಕ್ಷಸರ ರಾಜ್ಯವಾದಿತು, ಈ ಕೈಂಕರ್ಯದಲ್ಲಿ ಮಠ ಮಾನ್ಯಗಳು, ಸಂಘ-ಸಂಸ್ಥೆ, ಕಲಾಸಕ್ತ ಮುಖ್ಯಸ್ಥರು ಉಳಿಸಿ-ಬೆಳಸದೆ ಹೊದರೆ, ಕನ್ನಡ ರಂಗಭೂಮಿ ಪರಂಪರೆಯನ್ನು ಮತ್ತೆ ಮರಿದು ಕಟ್ಟದಿದ್ದರೆ,  ಘನಘೋರ ಅನ್ಯಾಯ ವಾದಂತಾಗುತ್ತದೆ, ಇಲ್ಲಿ ಎಲ್ಲರ ಜವಾಬ್ದಾರಿ ಮತ್ತು ಕರ್ತವ್ಯ ಇದೆಯೋ ಹೊರತು, ಕೇವಲ ಕೇಲವರಿಂದ ಸಾಧ್ಯವಿಲ್ಲ. 

ಇಪ್ಪತ್ತು ವರ್ಷಗಳ ಹಿಂದೆ ಒಂದು ದಿನ ಬಿಡುವಿಲ್ಲದೆ ಕ್ಯಾಶೀಯೊ ನುಡಿಸಲು ಹೊಗುತ್ತೀದ್ದೆ, ಇಪ್ಪತೈದು ವರ್ಷಗಳಿಂದ ಗ್ರಾಮೀಣರಿಗೆ ಕಡಿಮೇದರದಲ್ಲಿ ಸೀನರಿ ಪೂರೈಸಿದರು ಅಂದಿದಷ್ಟು  ಪ್ರದರ್ಶನಗಳು ಇಗಿಲ್ಲ,

ಕೆ. ಕೊಟ್ರೆಶ ಮಾಸ್ತರ ಬೆಳಗಲಿ,

ಮಾಲೀಕರು, ಕಲಾಶ್ರೀ ಡ್ರಾಮಾ ಸೀನರಿ. 

ಅಜ್ಜ ಕಲಿಸಿದ ಕಾಯಕ ವೃತಿಯಲ್ಲಿ ಉಪಜೀವನವೂ ಸಾಗದಂತಾಗಿದೆ, ಚಿಂತೆಯಿಲ್ಲದೆ ಕಳೇದು ಕೊಂಡಲ್ಲೆ ನಾವು ಹುಡುಕಬೇಕಾಗಿದೆ 

- ಶಂಕರ ಕೆ. ಅರ್ಕಸಾಲಿ, ರಂಗಕರ್ಮಿ. 

ಮುಸ್ಲಿಮನಾದರು ಧೀನ ಫಕ್ಕಿರೇಶ್ವರರ ಹೆಸರಿಂದ  ಆರಂಭವಾದ ಒಂದೆ ಇದ್ದ ಸೀನರಿ ಸೆಟ್, ಉತ್ಸಾಹದಲ್ಲಿ ಎರಡು ಸೆಟ್ ಮಾಡಿದೆ, ಕರೊನಾ ಹೊಡೆತದಿಂದ ಖರ್ಚು ವೆಚ್ಚ ನಿಭಾಯಿಸುವುದು ಕಷ್ಟಸಾಧ್ಯವಾಗಿದೆ.    

- ಮೌಲಾಖಾನ ಚಿಲ್ಲೂರ,

ದೀನ ಫಕ್ಕಿರೇಶ್ವರ ಡ್ರಾಮಾ ಸೀನರಿ. ಮಾಲೀಕ. 


ಸುದ್ದಿ ಓದಿ