ಜಗತ್ತು ಕವಲ ದಾರಿಯಲ್ಲಿ ನಡೆದಿದೆ : ಚಂದ್ರಶೇಖರ ಸ್ವಾಮೀಜಿ
ಶಿಗ್ಗಾವಿ 09 : ಜಗತ್ತು ಕವಲ ದಾರಿಯಲ್ಲಿ ನಡೆದಿದೆ ಇದನ್ನು ಬೆಳಕಿಗೆ ತರಬೇಕಾದರೇ ನಾಡಿನ ಮಠಾದೀಶರು ವಕ್ಪ ಬೋರ್ಡ್ ವಿರುದ್ಧ ಮಹಾಯುದ್ಧ ಸಾರುವ ಸಂಭವ ಒದಗಿಬಂದಿದೆ ಎಂದು ಹುಬ್ಬಳ್ಳಿ ಬೃಹನ್ಮಠ ಚಂದ್ರಶೇಖರ ಸ್ವಾಮೀಜಿ ಹೇಳಿದರು.
ಸಂಕಟ ಬಂದಾಗ ವೆಂಕಟರಮಣ
ಪಟ್ಟಣದ ವಿರಕ್ತಮಠದಲ್ಲಿ ರಾಜ್ಯ ಮಠಾದೀಶರ ಓಕ್ಕೂಟದ ನೇತೃತ್ವದಲ್ಲಿ ನಡೆದ ಸುದ್ದಿಘೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ನಮ್ಮದೆ ಮನೆ ನಾವೇ ಕಟ್ಟಿಸಿದ್ದು ಇನ್ನೊಬ್ಬರ ಬಂದು ನಮ್ಮದು ನಮ್ಮದು ಎನ್ನುತ್ತಿದ್ದಾರೆ. ಏನು ಮಾಡಬೇಕು ತಿಳಿಯದಾಗಿದೇ ಎಂದರು.
ವೇದವ್ಯಾಸ ಪೀಠ ಯಾದಗೀರಿ ರಾಜಗುರುಸ್ವಾಮಿ ಮಾತನಾಡಿ ಹಿಂದೂ ಧರ್ಮ ಹಾಗೂ ಸನಾತನ ಧರ್ಮ ಉಳಿಯಬೇಕಾದರೆ ಭರತ ಬೊಮ್ಮಾಯಿಗೆ ಬೆಂಬಲ ವ್ಯಕ್ತಪಡಿಸೋಣ ಏಕೆಂದರೆ ಬಸವರಾಜ ಬೊಮ್ಮಾಯಿಯವರು ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಕಂಕಣ ಬದ್ದರಾದ ದೀಮಂತ ವ್ಯಕ್ತಿ ವಿವಿಧ ಮಠಮಾನ್ಯಗಳಿಗೆ ಅನೇಕ ಅನುದಾನವನ್ನು ನೀಡಿದವರು. ತಂದೆ ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಭರತ ಬೊಮ್ಮಾಯಿ ನಡೆಯುತ್ತಾರೆ ಎಂದರು.
ಭಾಗೀರತನಾಂದ ಮಹಾಸ್ವಾಮಿಗಳು ಮಾತನಾಡಿ ವಕ್ಫ ಬೋರ್ಡ್ ಅಕ್ರಮಣಕಾರಿ ರೀತಿಯಲ್ಲಿ ಮಠ ಮಾನ್ಯ ಶಿಕ್ಷಣ ಸಂಸ್ಥೆಗಳನ್ನು ವಕ್ಪ ಸೇರಿಸಿದ ಹಿನ್ನೆಲೆಯಲ್ಲಿ ನಾಡಿನ ಮಠಾದೀಶರು ಖಂಡಿಸುತ್ತೇವೆ ಎಂದರು.
ಮಠಾದೀಶರ ಒಕ್ಕೂಟದ ರಾಜ್ಯ ಉಪಾಧ್ಯಕ್ಷ ವಿರುಪಾಕ್ಷಪ್ಪ ಕಳ್ಳಿಮನಿ ಮಾತನಾಡಿ ಪ್ರಧಾನ ಮಂತ್ರಿ ಮೋದೀಜೀಯವರು ವಕ್ಪ ಬೋರ್ಡ್ ಕಾನೂನು ರದ್ದು ಪಡಿಸಬೇಕು, ಪಹಣಿಯಲ್ಲಿ ಬಂದ ವಕ್ಪ ಬೋರ್ಡ್ ಹೆಸರು ಶೀಘ್ರದಲ್ಲಿ ಬದಲಿಸಬೇಕು.ಬದಲಾಗದಿದ್ದರೆವಕ್ಪ ಬೋರ್ಡ್ ಅನ್ಯಾಯದ ವಿರುದ್ಧ ದೇಶಾದ್ಯಾಂತ ಮಠಾದೀಶರ ಒಕ್ಕೂಟದ ನೇತೃತ್ವದಲ್ಲಿ ಉಗ್ರ ಹೋರಾಟದ ಮಾಡಲಾಗುವುದು ಎಂದರು.
ರಾಜ್ಯ ಮಠಾದೀಶರ ಒಕ್ಕೂಟವು ಕ್ಷೇತ್ರದ ಜನತೆ ಭರತ ಬೊಮ್ಮಾಯಿ ಅವರನ್ನು ಹೆಚ್ಚು ಮತಗಳನ್ನು ನೀಡಿ ಪ್ರಚಂಡ ಬಹುಮತದಿಂದ ಹಾರಿಸಿ ತರಬೇಕು. ಹಿಂದೆ ಬಸವರಾಜ ಬೊಮ್ಮಾಯಿ ಮುಂದೆ ಭರತ ಬೊಮ್ಮಾಯಿಯವರ ಮೂಲಕ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಬೆಂಬಲ ವ್ಯಕ್ತ ಪಡಿಸುತ್ತೇವೆ ಎಂದರು.
ಮಠಾದೀಶರಾದ ಶಾಂತಗಂಗಾಧರ ಮಹಾಸ್ವಾಮಿಗಳು ಸಿಂದಗಿ, ಶಿವಾನಂದ ಮಹಾಸ್ವಾಮಿಗಳು ಗದಗ, ಮೌನೇಶ್ವರ ಮಹಾಸ್ವಾಮಿಗಳು ವಿಶ್ವಕರ್ಮ ಹುಲಗೂರ, ಬಸವರಾಜ ಮಹಾಸ್ವಾಮಿಗಳು ಹುಬ್ಬಳ್ಳಿ, ವಿಜಯ ಮಹಾಸ್ವಾಮೀಜಿ ಚಳಕಿ ಸವದತ್ತಿ, ಲಿಂಗಾನಂದ ಮಹಾಸ್ವಾಮಿಗಳು ಹಿರೇಬೆಂಡಿಗೇರಿ ಎಲ್ಲರೂ ವಕ್ಪ ಕಾನೂನು ಬಗ್ಗೆ ಚಕಾರ ಎತ್ತಿದರು.
ಈ ಸಂದರ್ಭದಲ್ಲಿ ಪರುಶರಾಮ ಸೊನ್ನದ, ಸಿದ್ದರಾಜ, ವಿರುಪಾಕ್ಷಪ್ಪ ಮುಗಳಿ, ನಾಗಪ್ಪ ವಾಲ್ಮೀಕಿ, ರಾಮಣ್ಣಾ ಚಿಂಚಲಿ, ಶೇಖಣ್ಣಾ ನಂಜಪ್ಪನವರ, ಬಸವಂತಪ್ಪ ಸೋಮಲಕ್ಕನವರ, ಕಲ್ಲಪ್ಪ ಅರಳೀಕಟ್ಟಿ, ವಿರುಪಾಕ್ಷಪ್ಪ ಕುಂದೂರ, ಬಸವರಾಜ ಅಗಸರ ಸೇರಿದಂತೆ ಇತರರು ಉಪಸ್ಥಿತರಿದ್ದರು.