ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯ ಶ್ಲಾಘನೀಯ: ಅಜೀತಕುಮಾರ
ಯರಗಟ್ಟಿ 04: ಸರಕಾರ ಮಾಡದ ಕೆಲಸವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಮಾಡುತ್ತಿದೆ ಎಂದು ಪ. ಪಂ. ಸದಸ್ಯ ಅಜೀತಕುಮಾರ ಹೇಳಿದರು. ಪಟ್ಟಣದ ಧರ್ಮಸ್ಥಳ ಯೋಜನಾ ಸಭಾಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಹಮ್ಮಿಕೊಂಡ ಸುಜ್ಞಾನ ನಿಧಿ ಯೋಜನೆ ಅಡಿಯಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಫಲಾನುಭವಿಗಳಿಗೆ ಮಂಜೂರಾತಿ ಪತ್ರ ನೀಡಲಾಯಿತು.
ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮ ಶ್ಲಾಘನೀಯವಾಗಿದೆ. ಜನರಿಗೆ ಬೇಕಾಗಿರುವ ಅಗತ್ಯತೆ ಮನಗಂಡು ಮನೆ ಬಾಗಿಲಿಗೆ ಹೋಗಿ ನೀಡುವ ಸಂಸ್ಥೆಯಾಗಿದೆ. ಸರಕಾರದ ಕೆಲವು ಕಾರ್ಯಕ್ರಮ ಮಾಡಲು ಸಾಧ್ಯವಾಗದೆ ಇರುವ ಕಾರ್ಯಕ್ರಮಗಳನ್ನು ಧರ್ಮಸ್ಥಳದ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ಗ್ರಾಮಾಭಿವೃದ್ಧಿ ಯೋಜನೆಯು ಅತ್ಯಂತ ಯಶಸ್ವಿಯಾಗಿ ಮಾಡುತ್ತಿದೆ. ಬಡವರಿಗೆ, ಅಂಗವಿಕಲರಿಗೆ ಸರಕಾರದ ಸೌಲಭ್ಯ ನೀಡಲು ಕೆಲವೊಂದು ಕಟ್ಟುಮಿಟ್ಟಿನ ನಿಯಮಗಳಿಂದ ಅವರು ವಂಚಿರಾಗುತ್ತಿದ್ದಾರೆ. ಅದರೆ, ಗ್ರಾಮಾಭಿವೃದ್ಧಿ ಸಂಸ್ಥೆ ಅರ್ಹ ಫಲಾನುಭವಿ ಗುರುತಿಸಿ ಹಾಗೂ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಅವರ ಮನೆ ಬಾಗಿಲಿಗೆ ತೆರಳಿ ಸೌಲಭ್ಯ ಒದಗಿಸುತ್ತಿರುವುದು ನಿಜವಾದ ಸೇವೆಯಾಗಿದೆ ಎಂದು ಹೇಳಿದರು.
ಜಿಲ್ಲಾ ನಿರ್ದೇಶಕರಾದ ರಲವಕುಮಾರ, ಯೋಜನಾಧಿಕಾರಿಗಳಾದ ಸತೀಶ ಡಿ, ಕೃಷಿ ಮೇಲ್ವಿಚಾರಕ ನಾಗಪ್ಪ, ಮೇಲ್ವಿಚಾರಕ ನಾಗರಾಜ, ರೈತ ಸಂಘದ ಜಿಲ್ಲಾಧ್ಯಕ್ಷ ಸೋಮು ರೈನಾಪೂರ, ಪಿ.ಕೆ.ಪಿ.ಎಸ್. ಅಧ್ಯಕ್ಷ ಮಹಾಂತೇಶ ಗೋಡಿ, ಮಹಾಂತೇಶ ಅಡಕಿ, ವಿಠ್ಠಲ ಯಂಡ್ರಾವಿ, ಶಶಿಧರ ಪಾಟೀಲ ಸೇರಿದಂತೆ ಅನೇಕ ಉಪಸ್ಥಿತರಿದ್ದರು.