ತಾಳಿಕೋಟಿ

ಅಸ್ಕಿ ಗಜಾನನೋತ್ಸವ ಸಮಿತಿ ಕಾರ್ಯ ಶ್ಲಾಘನೀಯ: ಡಾ. ಪ್ರಭುಗೌಡ

ಅಸ್ಕಿ ಗಜಾನನೋತ್ಸವ ಸಮಿತಿ ಕಾರ್ಯ ಶ್ಲಾಘನೀಯ: ಡಾ. ಪ್ರಭುಗೌಡ

ತಾಳಿಕೋಟಿ ೦೯:  ತಾಲೂಕಿನ ಅಸ್ಕಿ ಗ್ರಾಮದಲ್ಲಿ ಬನ್ನೆಪ್ಪನ ಕಟ್ಟೆ ಗಜಾನನ ಮಂಡಳಿಯ ಸಮಾಜಸೇವಾ ಕಾರ್ಯ ಶ್ಲಾಘನೀಯವಾಗಿದೆ ಇದು ಇಂದಿನ ಯುವಪೀಳಿಗೆಗೆ ಮಾದರಿಯಾಗಿದೆ ಎಂದು ನಾಡಿನ ಖ್ಯಾತ ನೇತ್ರ ತಜ್ಞ ರಾಜ್ಯ ಪ್ರಶಸ್ತಿ ಪುರಸ್ಕೃತ ಡಾ. ಪ್ರಭುಗೌಡ ಲಿಂಗದಳ್ಳಿ(ಚಬನೂರ) ತಿಳಿಸಿದರು. 

ದೇ. ಹಿಪ್ಪರಗಿ ಮತಕ್ಷೇತ್ರದ ಅಸ್ಕಿ ಗ್ರಾಮದಲ್ಲಿ ಗಜಾನನೋತ್ಸವ ಅಂಗವಾಗಿ ಸ್ಥಳಿಯ ಬನ್ನೆಪ್ಪನ ಕಟ್ಟೆ ಯುವಕ ಮಂಡಳಿ ಹಾಗೂ ಅನುಗ್ರಹ ವಿಜನ್ ಫೌಂಡೇಶನ್ ಟ್ರಸ್ಟ್ ವಿಜಯಪೂರ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ ರಕ್ತದಾನ ಶಿಬಿರ, ಉಚಿತ ನೇತ್ರ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸೆ ಶಿಬಿರವನ್ನು ಉದ್ಘಾಟಿಸಿದರು.

ಉತ್ಸವಗಳ ಹೆಸರಿನಲ್ಲಿ ಲಕ್ಷಾಂತರ ಹಣವನ್ನು ಸಂಗ್ರಹಿಸಿ ವೃತಃ ಪೋಲು ಮಾಡಲಾಗುತ್ತಿದೆ. ಅದೇ ಹಣವನ್ನು ಸಮಾಜಸೇವಾ ಕಾರ್ಯಗಳಿಗೆ ವಿನಿಯೋಗಿಸಿದರೆ ಅದರಿಂದ ಬಡವರಿಗೆ ಅನುಕೂಲವಾಗುತ್ತದೆ. ಅಸ್ಕಿ ಗ್ರಾಮದ ಯುವಕರು ಈ ಕೆಲಸ ಮಾಡಿ ತೊರಿಸಿದ್ಧಾರೆ ಅವರಿಗೆ ನಾನು ಅಭಿನಂದಿಸುತ್ತೆನೆ ಎಂದರು.

ಶಿಬಿರದಲ್ಲಿ ಒಟ್ಟು 35ಜನ ಯುವಕರು ರಕ್ತದಾನ ಮಾಡಿದರೆ ಸುಮಾರು 200ಜನರು ಕಣ್ಣಿನ ತಪಾಸಣೆಗೆ ಒಳಪಟ್ಟು 50ಜನರನ್ನು ಶಸ್ತ್ರ ಚಿಕಿತ್ಸೆಗೆ ಆಯ್ಕೆ ಮಾಡಲಾಯಿತು ಇವರೆಲ್ಲರಿಗೂ ಫೌಂಡೇಶನ್ ವತಿಯಿಂದ ಉಚಿತವಾಗಿ ಶಸ್ತ್ರಚಿಕಿತ್ಸೆ ಮಾಡಿಸಲಾಗುವುದು ಎಂದು ತಿಳಿಸಿದರು. 

ಈ ಸಂದರ್ಭದಲ್ಲಿ ಗ್ರಾಮ ಗಣ್ಯರಾದ ಬಾಲು ತಳವಾರ, ದೇವೆಂದ್ರ ಕವಡಿಮಟ್ಟಿ, ಮಾರುತಿ ಕಟ್ಟಿಮನಿ, ಬಸ್ಸು ಹಕಂಡಳ್ಳಿ,ವಿಶ್ವನಾತ ತಳವಾರ, ನಿಂಗು ಕಟ್ಟಿಮನಿ, ಶರಿಫ ತಾಳಿಕೋಟಿ, ಸಚೀನ ತಳವಾರ, ಬನ್ನೇಪ್ಪ ವಾಲಿಕಾರ, ಮಲ್ಲನಗೌಡ ಪಾಟೀಲ, ಅಜಯಸಾವಂತ, ಜುನೇದ ನದಾಫ, ಸುರೇಶ ಪೇಟ್ಕರ, ಸಚೀನ ಚಡಚಣ ಇದ್ದರು 

ಸುದ್ದಿ ಓದಿ