ಸೇತುವೆ ದುರಸ್ತಿ ಕಾರ್ಯ ಬೇಗನೆ ಮುಗಿಸಲು ಆಗ್ರಹ
ತಾಳಿಕೋಟಿ21 ತಾಳಿಕೋಟಿಯಿಂದ-ವಿಜಯಪುರಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆ ಡೋಣಿನದಿ ಸೇತುವೆ ಕಾರ್ಯ ದುರಸ್ತಿಯಲ್ಲಿರುವದರಿಂದ ತಾತ್ಕಾಲಿಕ ಸಂಪರ್ಕ ಕಲ್ಪಿಸಿದ ಕೆಳಸೇತುವೆ ರಸ್ತೆ ಸಂಪೂರ್ಣ ಹಾಳಾಗಿ ಹೋಗಿದ್ದು ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ, ಸೇತುವೆ ದುರಸ್ತಿ ಕಾರ್ಯ ಆದಷ್ಟು ಬೇಗ ಮುಗಿಸಬೇಕೆಂದು ಮುದ್ದೇಬಿಹಾಳ ತಾಲೂಕಾ ಜೆಡಿಎಸ್ ಕಾರ್ಯದರ್ಶಿ ನದೀಂ ಕಡು ಆಗ್ರಹಿಸಿದ್ದಾರೆ.
‘ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು- ಡೋಣಿನದಿಗೆ ಅಡ್ಡಲಾಗಿ ನಿರ್ಮಿಸಿದ ಸೇತುವೆ ಕಳಪೆ ಕಾಮಗಾರಿಯಿಂದಾಗಿ ಅವಧಿಗೆ ಮುಂಚೆಯೇ ಅದರ ಒಂದು ಭಾಗ ಕುಡಿಯುವ ಸ್ಥಿತಿಯಲ್ಲಿರುವುದಿರಜಂದ ಈ ಮೊದಲಿದ್ದ ಕೆಳಸೇತುವೆ ಮಾರ್ಗವಾಗಿ ತಾತ್ಕಾಲಿಕ ರಸ್ತೆ ಸಂಚಾರಕ್ಕೆ ಅನಕೂಲಮಾಡಿ ಕೊಡಲಾಗಿದೆ. ಸದರಿ ರಸ್ತೆ ಸಂಪೂರ್ಣ ಹಾಳಾಗಿ ಹೋಗಿದ್ದು ಭಾರಿ ವಾಹನಗಳ ಸಂಚಾರದಿಂದಾಗಿ ಎಲ್ಲೆಂದರಲ್ಲಿ ತಗ್ಗುಗುಂಡಿಗಳು ನಿರ್ಮಾಣವಾಗಿ ವಾಹನಗಳ ಸಂಚಾರವೆ ದುಸ್ಥರವಾಗಿದೆ, ದ್ವಚಕ್ರವಾಹನ ಸವಾರರ ಪರಸ್ಥಿಯಂತೂಝ ಹೇಳತೀರದು ಸ್ವಲ್ಪು ಆಯ ತಪ್ಪಿದರೆ ಅಪಘಾತವಾಗುವ ಎಲ್ಲಾ ಸಂಭವಗಳು ಇದ್ದು ಅಮೂಲ್ಯವಾದ ಜೀವಗಳ ಕಳೆದುಕೊಳ್ಳುವ ಎಲ್ಲ ಸಾಧ್ಯತೆಗಳು ಇವೆ. ಮುಖ್ಯ ಸೇತುವೆ ಮೇಲಿನ ಸಂಚಾರ ಸ್ಥಗಿತಗೊಂಡ ನಾಲ್ಕೈದು ತಿಂಗಳಗಳಾಗುತ್ತಿವೆ ಇಲ್ಲಿಯ ವರೆಗೆ ದುರಸ್ತಿ ಕಾರ್ಯ ಇನ್ನೂ ಆರಂಭವೆ ಆಗಿಲ್ಲ ಇದಕ್ಕೆ ಕಾರವೇನು? ಯಾರಿಗೂ ಗೊತ್ತಿಲ್ಲ ಸಂಬಂಧಿಸಿದ ಇಲಾಖಾ ಅಧಿಕಾರಿಗಳಿಂದ ಯಾವುದೇ ರೀತಿಯ ಸ್ಪಷ್ಟತೆಯೋ ಇಲ್ಲ.
ಈ ಭಾಗದ ಶಾಸಕರು ಈ ಗಂಭೀರ ಸಮಸ್ಯೆ ಕುರಿತು ಆದಷ್ಟು ಬೇಗ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿ ಮುಖ್ಯ ಸೇತುವೆ ದರಸ್ತಿ ಕಾರ್ಯ ಮುಗಿಸಬೇಕು ಎಂಬುದು ಸಾರ್ವಜನಿಕರ ಬೇಡಿಕೆಯಾಗಿದೆ ಎಂದು ತಿಳಿಸಿದರು.