ಕತ್ತಲಿನಿಂದ ಬೆಳಕಿನಡೆಗೆ ದಾರಿ ತೋರಿಸುವವನೇ ನಿಜವಾದ ಗುರು: ಮುರಘೇಂದ್ರಶ್ರೀ
ಯರಗಟ್ಟಿ 26: ತನ್ನ ಜ್ಞಾನ ಭಂಡಾರವನ್ನು ಶಿಷ್ಯನಿಗೆ ಧಾರೆಯೆರೆದು ಕತ್ತಲಿನಿಂದ ಬೆಳಕಿನಡೆಗೆ ದಾರಿ ತೋರಿಸುವವನೆ ನಿಜವಾದ ಗುರು ಎಂದು ಮುನವಳ್ಳಿ ಸೋಮಶೇಖರಮಠದ ಶ್ರೀ ಮುರಘೇಂದ್ರ ಸ್ವಾಮೀಜಿ ಹೇಳಿದರು.
ಸಮೀಪದ ತಲ್ಲೂರ ಗ್ರಾಮದ ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಆವರಣದಲ್ಲಿ ರವಿವಾರ ಹಮ್ಮಿಕೊಂಡಿದ್ದ ಪ್ರಾಥಮಿಕ ಹಾಗೂ ಪ್ರೌಢಶಾಲೆ 1996-1997 ನೇ ಸಾಲಿನ 7ನೇ ತರಗತಿ. ಹಾಗೂ 1999-2000 ನೇ ಸಾಲಿನ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಂದ ಗುರುವಂದನಾ ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಿ ಮಾತನಾಡಿದ ಅವರು, ಯಾವ ಮನುಷ್ಯ ತನ್ನ ಬದುಕಿನಲ್ಲಿ ಗುರು ಹಾಗೂ ಗುರಿಯನ್ನು ಇಟ್ಟುಕೊಂಡು ಮುಂದೆ ಸಾಗುತ್ತಾರೆಯೋ ಅವರೆಲ್ಲರೂ ಬಹು ಬೇಗನೆ ಯಶಸ್ವಿಯಾಗುತ್ತಾರೆ. ಮಡಿಕೆ ಮಾಡಲು ಮಣ್ಣು ಬೇಕು ಆಭರಣ ಮಾಡಲು ಹೊನ್ನು ಬೇಕು ಬದುಕಿನಲ್ಲಿ ಯಶಸ್ವಿಯಾಗಲು ಒಬ್ಬ ಸಮರ್ಥಗುರು ಅವಶ್ಯವಾಗಿ ಬೇಕೆ ಬೇಕು ಎಂದು ಹೇಳಿದರು.
ತೊರಗಲ್ಲಮಠದ ದೀಪಕ ಸ್ವಾಮೀಜಿ, ಶಿಕ್ಷಕ ಉಮಾರೊಢ ತಲ್ಲೂರ, ಎಮ್.ವಿ.ಉಪ್ಪಿನ ಮಾತನಾಡಿ, ಗುರು ಶಿಷ್ಯ ಪರಂಪರೆಗೆ ನಮ್ಮ ದೇಶ ಹೆಸರುವಾಸಿ ಯಾಗಿದೆ. ಗುರುವಿನಿಂದ ನಮ್ಮ ಬದುಕು ಬೆಳಕಾಗುತ್ತದೆ. ಆದ್ದರಿಂದ ಗುರುವನ್ನು ನಾವು ದೇವರಿಗೆ ಹೋಲಿಸುತ್ತೇವೆ. ಗುರುವಿನ ಮಾರ್ಗದರ್ಶನದಂತೆ ನಾವೆಲ್ಲ ನಡೆದರೆ ನಮ್ಮ ಬದುಕು ಬಂಗಾರವಾಗುತ್ತದೆ ಎಂದರು.
ನಿವೃತ್ತ ಶಿಕ್ಷಕ ಎಸ್.ಆರ್.ಬೆನಕಟ್ಟಿ, ಕೆ.ಕೆ.ಉಪ್ಪಾರ, ಸಿ.ವಿ.ಮಾಸ್ತಮರಡಿ, ಎಸ್.ಎಫ್.ಬಡಿಗೇರ, ಎನ್.ಬಿ.ಮಲಕನ್ನವರ, ಬಿ.ಎಮ್.ಭೋವಿ, ಜಿ.ಎನ್.ಶಿವಪೂಜಿ, ಬಿ.ಎಸ್.ವಂಟಮೂರಿ, ಎಫ್.ಎಸ್.ಕುಂಬಾರ, ಎಸ್.ಜಿ.ಹಿರೇಮಠ, ಡಿ.ಎಸ್.ಚಿಕಾಕಿ, ಎ.ವಿ.ಇಂಗಳೆ, ಎಸ್.ಬಿ.ಪಾಟೀಲ, ಜಿ.ಪಿ.ಸೊಗಲದ, ಬಿ.ವಿ.ಲಕ್ಕನ್ನವರ, ಬಿ.ಡಿ.ಪಾಟೀಲ ಅವರನ್ನು ಸನ್ಮಾನಿಸಲಾಯಿತು.
ಶ್ರೀಬಸವೇಶ್ವರ ಯುವಕ ಮಂಡಳ ಪ್ರೌಢಶಾಲೆ ಅಧ್ಯಕ್ಷ ವಿಕ್ರಮಕುಮಾರ ದೇಸಾಯಿ ಅಧ್ಯಕ್ಷತೆ ವಹಿಸಿದ್ದರು. ಸಂಜೀವಕುಮಾರ ದೇಸಾಯಿ ಕಾರ್ಯಕ್ರಮ ಉದ್ಘಾಟಿಸಿದರು, ಸಿಆರ್ಪಿ ಜಿ.ಎನ್.ಮಲಕನ್ನವರ, ಮುಖಂಡ ಶಂಕರಗೌಡ ಪಾಟೀಲ, ಗ್ರಾಪಂ ಮಾಜಿ ಉಪಾಧ್ಯಕ್ಷ ಬಾಬುಗೌಡ ಅಣ್ಣಿಗೇರಿ, ಬಸಪ್ಪ ಅಂಗಡಿ, ಈರಣ್ಣ ಹುದ್ದಾರ, ಮಂಜುನಾಥ ಸರದಾರ, ಉಮೇಶ ಕಾಜಗಾರ, ದಾವಲಸಾಭ್ ಸಾಬರ, ರಮೇಶ ಹೊಸಮನಿ, ಮಲಿಕ್ ಸಾಬರ, ರಾಯನಗೌಡ ಪಾಟೀಲ, ರಾಮಚಂದ್ರ ಪಟಾತ, ಮಹಾದೇವ ಬಿಲಕಂಚಿ, ದೀಪಾ ಪಾಟೀಲ, ರೇಖಾ ಬಾರ್ಕಿ, ಸವಿತಾ ಹೋಳಿ, ಮಹಾದೇವಿ ದುಂಡನಕೊಪ್ಪ, ಕಸ್ತೂರಿ ಭೋವಿ, ಮಹೇಶ ಭಾವಿಕಟ್ಟಿ, ಮಹೇಶ ಹೋಳಿ, ವಿನಯ ಕಾಜಗಾರ, ಮಲ್ಲಿಕಾರ್ಜುನ ಮಠಪತಿ, ಶಂಕರ ಉಪ್ಪಾರ, ಗುರುಪಾದ ಉಪ್ಪಿನ, ಬಸವರಾಜ ಚಿಕಾಕಿ, ವಿಠ್ಠಲ ಪಚ್ಚಿನವರ, ಮಂಜುನಾಥ ಇಂಗಳೆ, ಯಶಪಾಲ ಕಾಶಪ್ಪನವರ, ಶಿವಾನಂದ ಅಠಿಗಲ್ಲ, ರವಿ ಆನಿಗೋಳ, ದಾಸಪ್ಪ ಮನ್ನಿಕೇರಿ, ರವಿ ಭೋವಿ, ಕವಿತಾ ಮಲಕನ್ನವರ, ಫಕ್ಕೀರಮಾ ನದಾಫ್ ಸೇರಿದಂತೆ ಇತರರು ಇದ್ದರು.