ಹುಲ್ಯಾಳ ತುಂಗಳ ಫ್ರೌಢಶಾಲೆ ವಿದ್ಯಾರ್ಥಿಗಳು ಉತ್ತಮ ಸಾಧನೆ





ಜಮಖಂಡಿ 11: ತಾಲೂಕಿನ ಹುಲ್ಯಾಳ ತುಂಗಳ ಕನ್ನಡ ಹಾಗೂ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.100 ರಷ್ಟು ಫಲಿತಾಂಶ ಮಾಡಿ ಉತ್ತಮ ಸಾಧನೆ ಮಾಡಿದ್ದಾರೆ.
ಆಂಗ್ಲ ಮಾಧ್ಯಮದಲ್ಲಿ ದೀಪಾ ಗುರುಬಸಪ್ಪ ಸಜ್ಜನ 619 ಅಂಕ ಪಡೆದು ರಾಜ್ಯಕ್ಕೆ 7ನೇ ಸ್ಥಾನ, ಶಾಲೆಗೆ ಪ್ರಥಮ, ಸುರಭಿ ಹೂಲಿ 618 ಅಂಕ ಪಡೆದು ಶಾಲೆಗೆ ದ್ವಿತೀಯ ಸ್ಥಾನ, ಶ್ರೀರಕ್ಷಾ ಅವರಾದಿ 614 ಅಂಕ ಪಡೆದು ತೃತೀಯ ಸ್ಥಾನ ಪಡೆದುಕೊಂಡಿದ್ದಾಳೆ. ಹಾಗೂ 22 ವಿದ್ಯಾರ್ಥಿಗಳು ಶೇ. 95 ಕ್ಕಿಂತ ಅಧಿಕ, 19 ವಿದ್ಯಾರ್ಥಿಗಳು ಶೇ. 90 ಕ್ಕಿಂತ ಅಧಿಕ, 24 ವಿದ್ಯಾರ್ಥಿಗಳು ಶೇ. 85 ರಷ್ಟು ಅಂಕಗಳನ್ನು ಪಡೆದುಕೊಂಡಿದ್ದಾರೆ.
ಕನ್ನಡ ಮಾಧ್ಯಮದಲ್ಲಿ ಸದಪ್ಪ ಪರಗೊಂಡ ಶೇಗುಣಸಿ 616 ಅಂಕ ಪಡೆದು ಶಾಲೆಗೆ ಪ್ರಥಮ, ಸೌಮ್ಯ ಹಣಮಂತ ದಾನಪ್ಪಗೋಳ 598 ಅಂಕ ಪಡೆದು ಶಾಲೆಗೆ ದ್ವಿತೀಯ ಸ್ಥಾನ, ವಿರೇಶ ಶಶಿಕಾಂತ ವಿಶ್ವಬ್ರಾಹ್ಮಣ 592 ಅಂಕ ಪಡೆದು ತೃತೀಯ ಸ್ಥಾನ ಪಡೆದಿದ್ದಾರೆ ಎಂದು ಸಂಸ್ಥೆಯ ಮ್ಯಾನೆಜಿಂಗ್ ಟ್ರಸ್ಟಿ ಅಶೋಕ ತುಂಗಳ, ಡಾ,ಲಕ್ಷ್ಮೀ ತುಂಗಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.