ರಾಜ್ಯ ಸರ್ಕಾರ ತನ್ನ ಒಣಗೇಡಿತನವನ್ನು ಪ್ರದರ್ಶಿಸುತ್ತಿದೆ: ಆರೋಪ
ರಾಣೇಬೆನ್ನೂರ 17: ಸಾರಿಗೆ ನೌಕರರಿಗೆ 6 ವೇನತದಆಯೋಗದ ಶಿಫಾರಸ್ಸಿನಂತೆ ವೇತನ ಜಾರಿಗೊಳಿಸದೆ ಅವರನ್ನು ಸಾರಿಗೆ ನೌಕರರೆಂದು ಪರಿಗಣಿಸದೆ ನ್ಯಾಯಯುತವಾದ ಸಾರಿಗೆ ನೌಕರರ ಬೇಡಿಕೆಗಳನ್ನು ಈಡೇರಿಸದೆರಾಜ್ಯದಜನತೆಗೆಆಗುತ್ತಿರುವ ಪ್ರಯಾಣದ ಸಮಸ್ಯೆ ಬಗೆಹರಿಸಲಾಗದೆಜವಾಬ್ದಾರಿಯಿಂದ ನಡೆದುಕೊಳ್ಳದೆ ರಾಜ್ಯ ಸರ್ಕಾರತನ್ನಒಣಗೇಡಿತನವನ್ನು ಪ್ರದರ್ಶಿಸುತ್ತಿದೆ ಎಂದುರವೀಂದ್ರಗೌಡಎಫ್ ಪಾಟೀಲ ಆರೋಪಿಸದರು.ಅವರು ನಗರದ ಎಂ ಜೆರಸ್ತೆಯಲ್ಲಿ ಸಾರಿಗೆ ನೌಕರರು ಸರ್ಕಾರದ ವಿರುದ್ಧ ಹಮ್ಮಿಕೊಂಡಿದ್ದ ಬಿಕ್ಷೆಎತ್ತುವ ಮೂಲಕ ನಾವು ಅರೇ ಹೊಟ್ಟೆಯಲ್ಲಿದ್ದೇವೆ ಮಾರ್ಚ ತಿಂಗಳ ಸಂಬಳ ಬಿಡುಗಡೆ ಮಾಡಿರಿ 6 ನೇ ವೇತನಆಯೋಗದ ಶಿಫಾರಸ್ಸಿನಂತೆ ವೇತನ ಬಿಡುಗಡೆಗೊಳಿಸಿರಿ ಎಂದು ಸರ್ಕಾರಕ್ಕೆಒತ್ತಾಯಿಸುವ ಬಿಕ್ಷೆ ಬೇಡುವಕಾರ್ಯಕ್ರಮದಲ್ಲಿಅವರು ಭಾಗವಹಿಸಿ ಮಾತನಾಡಿದರು. ಅತೀಕಡಿಮೆ ಸಂಬಳದಲ್ಲಿ ಅತೀ ಹೆಚ್ಚು ಕೆಲಸ ಮಾಡುವ ವರ್ಗಎಂದರೆ ಸಾರಿಗೆ ನೌಕರರುಇವರ ಮಕ್ಕಳ ಭವಿಷ್ಯಕತ್ತಲಗುತ್ತಿದೆ. ತಿಂಗಳ ವೇತನವು ಕೇವಲ ಮನೆ ಬಾಡಿಗೆಗೆ ಹಾಗೂ ಊಟಕ್ಕೆ ಸಾಲುತ್ತಿಲ್ಲ. ಈಗಿನ ದುಬಾರಿ ಶಿಕ್ಷಣ ಗನನಕ್ಕೆ ಏರಿರುವಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಜೀವನ ನಡೆಸುವುದೆ ದುಸ್ತರವಾಗಿದೆ ಇಂತದರಲ್ಲಿ ನ್ಯಾಯಯುತವಾದ ಬೇಡಿಕೆಗಳನ್ನು ಸರ್ಕಾರಈಡೇರಿಸುವುದನ್ನು ಬಿಟ್ಟು ಬಲತ್ಕಾರದಿಂದ ಬಲಪ್ರಯೋಗ ಮಾಡಿ ಹೆದರಿಸಿ ಬೆದರಿಸಿ ನೌಕರರನ್ನುಕರ್ತವ್ಯಕ್ಕೆ ಹಾಜರಾಗುವಂತೆ ಮಾಡುವ ಕ್ರಮ ಖಂಡನೀಯಎಂದರು. ನೌಕರರಲ್ಲಿ ವಿನಂತಿಯಾವುದೇ ಪರಿಸ್ಥಿತಿಯಲ್ಲಿ ನೌಕರರು ಸರ್ಕಾರದ ಮತ್ತುಇಲಾಖೆಯ ಹಿರಿಯ ಅಧಿಕಾರಿಗಳ ಒತ್ತಡಕ್ಕೆ ಮಣಿಯದೆ ಮುಷ್ಕರದಲ್ಲಿ ಪಾಲ್ಗೊಳ್ಳಬೇಕು ಹಿರಿಯ ಅಧಿಕಾರಿಗಳು ಕೊಡುವ ನೋಟಿಸ್ ವರ್ಗಾವಣೆ, ಸಸ್ಪೆಂಡ್ ಅರ್ಡರ್ಗಳಿಗೆ ಹೆದರದೇ ಬೆದರದೇಧೈರ್ಯದಿಂದ ಮುಷ್ಕರದಲ್ಲಿ ಪಾಲ್ಗೊಳ್ಳಬೇಕು ಯಾವುದೇ ಪರಿಸ್ಥಿತಿಯಲ್ಲಿ ಒತ್ತಡಕ್ಕೆ ಮಣಿದುಕರ್ತವ್ಯಕ್ಕೆ ಹಾಜರಾದರೆತಮ್ಮ ಮಕ್ಕಳಿಗೆ ವಿಷ ಕೊಟ್ಟಂತಾಗುತ್ತದೆ ಮತ್ತು ನಿಮ್ಮಜೊತೆರಾಜ್ಯದಎಲ್ಲಾರೈತ ಪರ ಸಂಘಟನೆಗಳು ವಿವಿಧಕನ್ನಡ ಪರ ಸಂಘಟನೆಗಳು ವಿವಿಧರಾಜಕೀಯ ಪಕ್ಷದವರು ಜೊತೆಯಲ್ಲಿದ್ದೇವೆಎಂದು ಈ ಮೂಲಕ ಭರವಸೆಕೊಡುತ್ತೇವೆ.
ರವೀಂದ್ರಗೌಡಎಫ್ ಪಾಟೀಲ