ವಿಕಲಚೇತನರ ರಾಜ್ಯ ಪ್ರಶಸ್ತಿಗೆ ಕೊಪ್ಪಳ ಜಿಲ್ಲೆಯನ್ನು ಕಡೆಗಣಿಸಿದ ರಾಜ್ಯ ಸರ್ಕಾರ
ಕುಕನೂರ : ಪ್ರತಿ ವರ್ಷವೂ ಸರ್ಕಾರದಿಂದ ವಿಕಲಚೇತನ ದಿನಾಚರಣೆಯ ಅಂಗವಾಗಿ ವಿಕಲಚೇತನ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ವೈಯಕ್ತಿಕ ಮತ್ತು ಸ್ವಯಂ ಸೇವಾ ಸಂಸ್ಥೆ ಹಾಗೂ ವಿಶೇಷ ಶಿಕ್ಷಕರ ಸಾಧಕರನ್ನು ಗುರುತಿಸಿ ರಾಜ್ಯ ಪ್ರಶಸ್ತಿಯನ್ನು ನೀಡುತ್ತಾ ಬರುತ್ತಿತ್ತು ಆದರೆ 2023-24ನೇ ಸಾಲಿನ ವಿಕಲಚೇತನ ರಾಜ್ಯ ಪ್ರಶಸ್ತಿಯಲ್ಲಿ ಕೊಪ್ಪಳ ಜಿಲ್ಲೆಯನ್ನು ಪರಿಗಣಿಸದೆ ಅನ್ಯಾಯ ಮಾಡಿದೆ ಜಿಲ್ಲೆಯಲ್ಲಿ ಅನೇಕ ಸಾಧಕರು ಮತ್ತು ಸ್ವಯಂಸೇವಾ ಸಂಸ್ಥೆಗಳಿದ್ದು ಯಾವುದನ್ನು ಪರಿಗಣಿಸದೆ ಕೊಪ್ಪಳ ಜಿಲ್ಲೆಯ ವಿಕಲಚೇತನರ ಅಪಾದನೆಗೆ ಗುರಿಯಾಗಿದೆ ಇದು ಕೊಪ್ಪಳ ಜಿಲ್ಲೆಗೆ ತುಂಬಾ ಅನ್ಯಾಯವಾಗಿದೆ ಇದರಿಂದ ಕೊಪ್ಪಳ ಜಿಲ್ಲೆಯ ವಿಕಲಚೇತನರು ಆಕ್ರೋಶಗೊಂಡಿದ್ದಾರೆ ಆದ್ದರಿಂದ ಇದರ ಬಗ್ಗೆ ಸರ್ಕಾರ ಗಮನಹರಿಸಿ ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳಬೇಕೆಂದು ಕೊಪ್ಪಳ ಜಿಲ್ಲೆಯ ಸಂಘಟನೆಯ ಮುಖಂಡರು ಆಕ್ರೋಶವನ್ನು ಹೊರಹಾಕಿದ್ದಾರೆ ವಿಕಲಚೇತನರ ಪ್ರಮುಖರಾದ ಈರಣ್ಣ ಕರೇಕುರಿ, ಮಂಜುನಾಥ ಹೊಸಕೇರಿ ವೀರೇಶ ಹಾಲಗುಂಡಿ, ಸಿದ್ದಲಿಂಗಯ್ಯ ಗೋಲ್ರೇಕೊಪ್ಪ, ವೀರಭದ್ರಪ್ಪ ನಿಡಗುಂದಿ,ದವಲಬಿ, ಮಹಾಂತೇಶ, ವಿಕಲಚೇತನರು ಆಕ್ರೋಶವನ್ನು ವ್ಯಕ್ತಪಡಿಸಿದರ