ರಾಜ್ಯ ಸರ್ಕಾರ ಜನಹಿತ ಕಾಯುವಲ್ಲಿ ಸಂಪೂರ್ಣ ವಿಫಲ: ಮಾನೆ
ಶಿಗ್ಗಾವಿ 25: ಕಾಂಗ್ರೆಸ್ ಪಕ್ಷ ಬಡವ ಹಾಗೂ ಕೂಲಿ ಕಾರ್ಮಿಕರ ಝತಕ್ಕಾಗಿ ಹಲವು ಕಾರ್ಯಕ್ರಮವನ್ನು ಕೊಡುತ್ತಾ ಬಂದಿದೆ ಆದರೆ ಮೂರು ವರ್ಷಗಳ ಬಿಜೆಪಿ ಸರ್ಕಾರ ಕರೋನಾ ಮಳೆ-ಬೆಳೆ ನೆರೆ ಸಂತ್ರಸ್ತರಿಗೆ ಯಾವುದೇ ರೀತಿಯಲ್ಲಿ ಸ್ಪಂದನೆ ಮಾಡುವ ಕೆಲಸ ಮಾಡಿಲ್ಲ ಎಂದು ಹಾನಗಲ್ ಶಾಸಕ ಶ್ರೀನಿವಾಸ್ ಮಾನೆ ಹೇಳಿದರು.
ಬಂಕಾಪುರ ಪುರಸಭೆಯ ಚುನಾವಣೆಯ ಪ್ರಚಾರ ಕಾರ್ಯದಲ್ಲಿ ಭಾಗಿಯಾಗಿ ಮಾತನಾಡಿದ ಅವರು ಭಾಜಪ ಪಕ್ಷ ಕೇವಲ ಮಾಧ್ಯಮ ಹೇಳಿಕೆ ಹಾಗೂ ವೇದಿಕೆಗಳ ಮೇಲೆ ಭರಪೂರ ಭರವಸೆಗಳನ್ನು ಕೊಡುತ್ತಾ ಬಂದಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರ ಜನಹಿತ ಕಾಯುವಲ್ಲಿ ಸಂಪೂರ್ಣ ವಿಫಲವಾಗಿದೆ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿ ಇಲ್ಲದಿದ್ದರೂ ಜನರ ಸಮಸ್ಯೆಗಳಿಗೆ ಕಷ್ಟಗಳಿಗೆ ಸ್ಪಂದಿಸುವ ಸ್ಪಷ್ಟ ವಿಚಾರಧಾರೆ ಮತ್ತು ಬದ್ಧತೆಯ ಕಾರ್ಯ ಮಾಡುತ್ತಿದ್ದು ಜನರ ಸಂಕಷ್ಟದಲ್ಲಿ ಭಾಗಿಯಾಗುತ್ತಿದೆ ಜೊತೆಗೆ ಕಾಂಗ್ರೆಸ್ ಪಕ್ಷದ ಮುಖಂಡರು ಅಭ್ಯರ್ಥಿಗಳು ಜನಸಾಮಾನ್ಯರಿಗೆ ಸ್ಪಂದಿಸುವ ಕೆಲಸ ನಿರಂತರವಾಗಿ ಮಾಡಬೇಕು ಪಕ್ಷ ಪುರಸಭೆ ಆಡಳಿತ ಹಿಡಿಯಬೇಕಾದರೆ ಸಾರ್ವಜನಿಕರ ಸ್ಥಳೀಯ ಸಮಸ್ಯೆಗಳನ್ನು ಅಧಿಕಾರಿಗಳು ಮತ್ತು ಸರ್ಕಾರದ ಗಮನಕ್ಕೆ ತರುವ ಹಾಗೂ ಜನರಿಗಾಗಿ ಕೆಲಸ ಮಾಡುವ ಪಕ್ಷದ ಮುಖಂಡರು ಕಾರ್ಯಕರ್ತರನ್ನು ಕಡೆಗಣಿಸುವ ಕೆಲಸ ಆಗಬಾರದು ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಕಾಂಗ್ರೆಸ್ ಪಕ್ಷ ಜನರ ಬದುಕಿಗೆ ನೆರವಾಗುವ ಪಕ್ಷವಾಗಿದ್ದು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಿಗೆ ಮತದಾರರು ಆಶೀರ್ವದಿಸುವ ಮೂಲಕ ಆಯ್ಕೆ ಮಾಡುವಂತೆ ಬಂಕಾಪುರ ಪುರಸಭೆಯ ಮತದಾರರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪಕ್ಷದ ಪ್ರಭಾವಿ ಮುಖಂಡ ಯಾಸೀರ್ ಖಾನ್ ಪಠಾಣ ಶಿಗ್ಗಾವಿ ಬ್ಲಾಕ್ ಅಧ್ಯಕ್ಷ ಮಲ್ಲಪ್ಪ ವೆಂಕೋಜಿ,ಮಹಿಳಾ ಜಿಲ್ಲಾಧ್ಯಕ್ಷೆ ಪ್ರೇಮ ಪಾಟೀಲ್ ,ತಾಲೂಕ ಮಹಿಳಾ ಅಧ್ಯಕ್ಷೆ ವಸಂತ ಬಾಗೂರ, ಕೆಪಿಸಿಸಿ ಕಾರ್ಯದರ್ಶಿ ಪ್ರಕಾಶ್ ಹಾದಿಮನಿ ಮುಖಂಡ ಸೋಮಣ್ಣ ಬೇವಿನಮರದ, ಶ್ರೀಕಾಂತ ದುಂಡಿಗೌಡ್ರ, ವಕ್ತಾರ ಸುಧೀರ ಲಮಾಣಿ, ಬಂಕಾಪುರ ಘಟಕದ ನಿ್ಲ್ಖುಕ್ಷ ರಾಜು ಕಮ್ಮಾರ ,ಮಾಜಿ ಪುರಸಭಾ ಸದಸ್ಯ ಸತೀಶ್ ಆಲದಕಟ್ಟಿ , ಕಿರಣ ಪಾಟೀಲ, ಮಂಜುನಾಥ್ ಮಣ್ಣಣ್ಣವರ್ ,ಜಾಫರ್ ಬಾಗವಾನ, ಬಿಸಿ ಪಾಟೀಲ್ , ಯೂಸುಫ್ ಬಾವಿಕಟ್ಟಿ, ರಮೇಶ್ ದುಗ್ಗತ್ತಿ ,ಶೇಖಪ್ಪ ಮಣಕಟ್ಟಿ, ಗುರನಗೌಡ ಪಾಟೀಲ್ , ಮಂಜುನಾಥ ತಿಮ್ಮಾಪೂರ, ಚನ್ನು ಕುಮಾರ ದೇಸಾಯಿ, ಅಮ್ಜದ್ ಪಠಾಣ, ರಬ್ಬಾನಿ ತರಿನ, ತಹಮೀದ್ ಖಾಜಿ, ಪುರಸಭೆಯ ಪಕ್ಷದ ಅಭ್ಯರ್ಥಿಗಳು ಮಾಜಿ ಚುನಾಯಿತ ಪ್ರತಿನಿಧಿಗಳು ಮುಖಂಡರುಗಳು ಕಾರ್ಯಕರ್ತರು ಉಪಸ್ಥಿತರಿದ್ದು ಪ್ರಚಾರಕಾರ್ಯದಲ್ಲಿ ಭಾಗಿಯಾದರು.