‘ಸಂಘಗಳ ಅಭಿವೃದ್ಧಿಯಲ್ಲಿ ನಿರ್ದೇಶಕ, ಸದಸ್ಯರ ಪಾತ್ರ ಮಹತ್ತರ’
ಯರಗಟ್ಟಿ 25: ಸಹಕಾರಿ ಸಂಘಗಳ ಅಭಿವೃದ್ಧಿಯಲ್ಲಿ ನಿರ್ದೇಶಕರು ಮತ್ತು ಸದಸ್ಯರ ಪಾತ್ರ ಮಹತ್ತರವಾಗಿದೆ ಎಂದು ತಲ್ಲೂರ ಪಿಕೆಪಿಎಸ್ ಅಧ್ಯಕ್ಷ ವಿನಯಕುಮಾರ ದೇಸಾಯಿ ಹೇಳಿದರು.
ಸಮೀಪದ ತಲ್ಲೂರ ಗ್ರಾಮದ ಹಾದಿ ಬಸವೇಶ್ವರ ದೇವಸ್ಥಾನದ ಸಭಾ ಭವನದಲ್ಲಿ ಇತ್ತೀಚಗೆ ನಡೆದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪಡೆದ ಸಾಲವನ್ನು ಸೂಕ್ತ ಉದ್ದೇಶಕ್ಕೆ ಬಳಕೆ ಮಾಡಿದಾಗ, ಆರ್ಥಿಕ ಅಭಿವೃದ್ಧಿ ಸಾಧ್ಯವಾಗುತ್ತದೆ. ಜತೆಗೆ ಪಡೆದ ಸಾಲವನ್ನು ಪ್ರತಿಯೊಬ್ಬರೂ ಮರುಪಾವತಿಸಬೇಕು ಈ ಮೂಲಕ ಬ್ಯಾಂಕಿನ ಅಭಿವೃದ್ಧಿಗೆ ಕೈ ಜೋಡಿಸಬೇಕು ಎಂದು ಹೇಳಿದರು.
ಕಳೆದ ಸಾಲಿನಲ್ಲಿ 73393 ಸಾವಿರ ಲಾಭ ಗಳಿಸಿದೆ. 32.34 ಲಕ್ಷ ರೂ. ಠೇವಣಿ ಹೊಂದಿದ್ದು, 3.48 ಕೋಟಿ ರೂ. ಸಾಲ ವಿತರಿಸಲಾಗಿದೆ 3.80 ಕೋಟಿ ರೂ. ದುಡಿಯುವ ಬಂಡವಾಳ ಹೊಂದಿದೆ ಎಂದರು.
ನಿವೃತ್ತ ಮುಖ್ಯ ಶಿಕ್ಷಕ ಎ.ವಿ.ಇಂಗಳೆ ಮಾತನಾಡಿ, ಸಂಘದ ಸಾಲವನ್ನಷ್ಟೆ ಆಪೇಕ್ಷೆ ಮಾಡದೆ, ಬ್ಯಾಂಕಿನ ಅಭಿವೃದ್ಧಿಗೆ ನಿರ್ದೇಶಕರು, ಷೇರುದಾರರು ಎಲ್ಲರ ಸಹಕಾರವು ಅವಶ್ಯ ಷೇರು, ನಿಗಧಿತ ಠೇವಣಿ, ಪಿಗ್ಮೀ ಮೂಲಕ ಹೆಚ್ಚಿನ ಸಹಕಾರ ಕೊಡಬೇಕು. ಆಗ್ ಸಹಕಾರ ಸಂಘಗಳು ಅಭಿವೃದ್ಧಿ ಸಾಧ್ಯ ಎಂದರು.
ಸಂಘದ ಮುಖ್ಯಕಾರ್ಯ ನಿರ್ವಾಹಕ ಅಧಿಕಾರಿ ಸಿದ್ದಪ್ಪ ಮುರಗೋಡ ವಾರ್ಷಿಕ ವರದಿ ಮಂಡಿಸಿದರು. ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಸನ್ಮಾನಿಸಲಾಯಿತು.
ತೊರಗಲ್ಲಮಠದ ದೀಪಕ ಸ್ವಾಮೀಜಿ ಸಾನಿದ್ಯ ವಹಿಸಿದ್ದರು, ಪಿಕೆಪಿಎಸ್ ಉಪಾಧ್ಯಕ್ಷ ವೀರ್ಪ ಬೆನಕಟ್ಟಿ, ನಿರ್ದೇಶಕ ಬಾಬುಗೌಡ ಅಣ್ಣಿಗೇರಿ, ಪಂಚಪ್ಪ ಶಿವಪೂಜಿ, ಅಪ್ಪಾಸಾಬ ಬಾನದಾರ, ಅಪ್ಪಯ್ಯಪ್ಪ ಶೀಲವಂತರ, ವೀರನಗೌಡ ಪಾಟೀಲ, ನಾಗರಾಜ ಬಾರ್ಕಿ, ಉಮೇಶ ಹಮ್ಮಿನಿ, ಗುರವ್ವ ಶಿವಪೂಜಿ, ಗೌರವ್ವ ಮನ್ನೀಕೇರಿ, ದುರಗವ್ವ ಮಾದರ, ಶಂಕರಗೌಡ ಪಾಟೀಲ, ಕಿರಣ ಸರದಾರ, ಬಸನಗೌಡ ಗೌಡರ, ಅಜ್ಜಪ್ಪ ಶಿವಪೂಜಿ ಸೇರಿದಂತೆ ಇತರರು ಇದ್ದರು.