ಯಶಸ್ವಿಯಾಗಿ ಪ್ರದರ್ಶನಗೊಂಡ “ಪ್ರತಿಶೋಧ” ನಾಟಕ
ಧಾರವಾಡ 08: ರಂಗಾಯಣವು ಇಂದು ನಾಡೋಜ ಡಾ. ಪಾಟೀಲ ಪುಟ್ಟಪ್ಪ ಸಭಾಭವನ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಏರಿ್ಡಸಿದ್ದ “ಪ್ರತಿಶೋಧ” ನಾಟಕಕ್ಕೆ ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಶಂಕರ ಹಲಗತ್ತಿ ಅವರು ಚಾಲನೆ ನೀಡಿ, ರಂಗಾಯಣವು ಪತ್ತೆದಾರಿಕೆಯನ್ನು ಹೊಂದಿದ ನಾಟಕವನ್ನು ಪ್ರದರ್ಶನ ಮಾಡುವ ಮೂಲಕ ಪ್ರೇಕ್ಷಕರಲ್ಲಿ ಕುತೂಹಲ ಹಾಗೂ ಆಸಕ್ತಿಯನ್ನು ಹೆಚ್ಚಿಸುವ ಕಾರ್ಯವನ್ನು ಮಾಡಿದೆ. ಸುಮಾರು 25 ವರ್ಷಗಳ ಹಿಂದೆ ಈ ನಾಟಕವು ಪ್ರದರ್ಶನಗೊಂಡಿತ್ತು. ಇದೀಗ ಧಾರವಾಡ ರಂಗಾಯಣದ ಮೂಲಕ ಹೆಚ್ಚು ಪ್ರದರ್ಶನಗಳನ್ನು ಕಾಣುವ ಮೂಲಕ ನಾಟಕ ಯಶಸ್ವಿಯನ್ನು ಹೊಂದಲಿ ಎಂದು ಹಾರೈಸಿದರು.
ಸವದತ್ತಿಯ ಗುರ್ಲಹೊಸೂರಿನ ರಾಜಾರಾಮಮಠದ ಪೀಠಾಧಿಪತಿಗಳಾದ ಪರಮ ಪೂಜ್ಯ ಗಂಗಾಧರ ದೀಕ್ಷಿತರು ಸಾನಿಧ್ಯ ವಹಿಸಿದ್ದರು. ಬೆಳಗಾವಿ ನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ರವಿ ಭಜಂತ್ರಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ರಂಗಾಯಣ ನಿರ್ದೇಶಕ ಝಕೀರ ನದಾಫ ಅವರು ಅಧ್ಯಕ್ಷತೆ ವಹಿಸಿದ್ದರು. ರಂಗಾಯಣದ ಆಡಳಿತಾಧಿಕಾರಿಗಳಾದ ಶಶಿಕಲಾ ಹುಡೇದ ಅವರು ಸ್ವಾಗತಿಸಿ, ವಂದಿಸಿದರು. ನಂತರ ಕೃಷ್ಣಪ್ರಸಾದ ಮೈಸೂರು(ಮಾಯಸಂದ್ರ) ಅವರು ರಚಿಸಿ, ಝಕೀರ ನದಾಫ ಅವರು ಉತ್ತರ ಕರ್ನಾಟಕ ಭಾಷೆಗೆ ರೂಪಾಂತರಿಸಿ ಹಾಗೂ ನಿರ್ದೇಶಿಸಿದ “ಪ್ರತಿಶೋಧ” ನಾಟಕವನ್ನು ರಂಗಾಯಣದ ರೆಪರ್ಟರಿ ಕಲಾವಿದರು ಪ್ರಸ್ತುತಪಡಿಸಿದರು.