ಮಾತ್ರೆ ಕಿಟ್ ಸ್ಥಳೀಯ ಆಡಳಿತಕ್ಕೆ ಹಸ್ತಾಂತ
ಬನವಾಸಿ 29: ಮಾಜಿ ಸಚಿವರು, ಹಾಲಿ ಶಾಸಕರು ಹಾಗೂ ಜಿಲ್ಲೆಯ ಪ್ರಭಾವಿ ನಾಯಕ ಆರ್ ವಿ ದೇಶಪಾಂಡೆಯವರು ಮತ್ತು ಯುವ ನಾಯಕರು ಹಾಗೂ ಕೆಪಿಸಿಸಿ ಸದ್ಯಸ್ಯ ಪ್ರಶಾಂತ್ ದೇಶಪಾಂಡೆ ಮತ್ತು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ನಾಯ್ಕ್ ಅವರು ಶುಕ್ರವಾರ ಬನವಾಸಿಗೆ ಆಗಮಿಸಿ ಕೊರೊನ ತುರ್ತು ಪರಿಸ್ಥಿತಿಯಲ್ಲಿ ಜನರು ಓಷಧಿಗಳ ಕೊರತೆಯಿಂದ ತೊಂದರೆ ಅನುಭವಿಸಬಾರದೆಂದು ಕೊರೊನ ಸೋಂಕಿತರಿಗೆ ನೀಡಲು ಮಾತ್ರೆಗಳ ಕಿಟ್ಗಳನ್ನು ಸ್ಥಳೀಯ ಆಡಳಿತಕ್ಕೆ ಹಸ್ತಾಂತರಿಸಿದರು.
ಯಾವುದೇ ಸೋಂಕಿತ ವ್ಯಕ್ತಿಗೂ ಕೂಡ ಓಷಧಿಗಳ ಕೊರತೆಯಾಗಬಾರದು ಆ ನಿಟ್ಟಿನಲ್ಲಿ ನಾವು ಸಹಾಯ ಮಾಡಲು ಸಿದ್ದರಿದ್ದೇವೆ ಆಡಳಿತಕ್ಕೆ ಯಾವುದೇ ಮಾತ್ರೆಗಳ ಹಾಗೂ ಉಪಕರಣಗಳ ಕೊರತೆಯಾದಲ್ಲಿ ತಕ್ಷಣ ತಮ್ಮನ್ನು ಸಂಪರ್ಕಿಸಿ ಎಂದು ಆರಿ್ವ.ದೇಶಪಾಂಡೆ ಹೇಳಿದರು. ಅಧಿಕಾರ ಹಾಗೂ ಸರ್ಕಾರ ಇಲ್ಲದೆ ಇದ್ದರೂ ನಮಗೆ ಜನಗಳ ಆರೋಗ್ಯವೇ ಮುಖ್ಯ,ಆ ನಿಟ್ಟಿನಲ್ಲಿ ನಾವು ಕಾರ್ಯಕ್ರಮಗಳನ್ನು ರೂಪಿಸಿದ್ದೇವೆ.
ಇಂತಹ ಕಠಿಣ ಸಮಯದಲ್ಲಿ ನಮ್ಮ ಶಕ್ತಿಮೀರಿ ಜನಗಳ ನೋವಿಗೆ ಸ್ಪಂದಿಸಲಿದ್ದೇವೆ ಎಂದರು ಮತ್ತು ಕೊರೊನ ವಾರಿಯರ್ರ್ಗಳಿಗೆ ಅಭಿನಂದಿಸಿದರು.
ಉಪತಹಶೀಲ್ದಾರ್ ಬೆಳ್ಳಿಮನೆ, ಬನವಾಸಿ ಪ್ರಾಥಮಿಕ ಅರೋಗ್ಯ ಕೇಂದ್ರದ ವೈದ್ಯಧಿಕಾರಿ ಡಾ ಜಯಶ್ರೀ ಹೆಗ್ಡೆ, ಕಂದಾಯ ನೀರೀಕ್ಷಕಿ ಮಂಜುಳಾ ನಾಯ್ಕ್, ಪೊಲೀಸ್ ಉಪನಿರಿಕ್ಷಕ ಹನುಮಂತ ಬಿರಾದಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ ಎಫ್ ನಾಯ್ಕ್, ಜಿಲ್ಲಾ ಪಂಚಾಯತ್ ಸಧ್ಯಸ್ಯ ಬಸವರಾಜ್ ದೊಡ್ಮನಿ, ತಾಲೂಕ ಪಂಚಾಯತ್ ಅಧ್ಯಕ್ಷೆ ಲತಾ ಕಾಳೆರಮನೆ, ಜಿಲ್ಲಾ ಕಾಂಗ್ರೆಸ್ ಹಿಂದುಳಿದವರ್ಗಗಳ ಅಧ್ಯಕ್ಷ ನಾಗರಾಜ್ ನಾರ್ವೇಕರ್, ಯುವಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಸಂತೋಷ್ ಶೆಟ್ಟಿ, ಮಾಧ್ಯಮ ವಕ್ತಾರ ದೀಪಕ್ ದೊಡ್ಡುರು, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸುಧಾಕರ್ ನಾಯ್ಕ್, ಎಸ್ ಜಿ ಹೆಗ್ಡೆ, ಅಲ್ಪೆಡ್ ಡಿಸೋಜ, ಶಿವಾಜಿ, ರಾಘವೇಂದ್ರ, ಮಧುಕೇಶ್ವರ, ಅಬ್ದುಲ್ ಕರೀಂ, ಆಸೀಫ್, ಅಲ್ತಾಫ್, ಮುದ್ದಣ್ಣ, ಬಸವರಾಜ್ ತಾವರೆರ್, ಸಿ ಬಿ ಗೌಡ, ಬಸವರಾಜ್ ನಂದಿಕೇಶವರ್ ಮಠ್, ಕಿರಣ್ ನಾಯ್ಕ್,ಆನಂದ್ ಮಧುರವಳ್ಳಿ ಹಾಗೂ ಬನವಾಸಿ ಭಾಗದ ಮುಖಂಡ ಘಟಕ ಅಧ್ಯಕ್ಷರುಗಳು ಪಕ್ಷದ ಕಾರ್ಯಕರ್ತರು ಹಾಗೂ ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.