ದೇಶಭಕ್ತಿ ಗೀತೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು
'ಕ್ರಾಂತಿ ಜ್ಯೋತಿಯೇ ಬೈಲಹೊನಗಲ್ಲು'
ಬೈಲಹೊಂಗಲ 03: ಪಟ್ಟಣದ ಕೆ.ಡಿ.ಕ್ರಿಯೇಷನ್ ವತಿಯಿಂದ ಮೂಡಿ ಬಂದಿರುವ 'ಕ್ರಾಂತಿ ಜ್ಯೋತಿಯೇ ಬೈಲಹೊನಗಲ್ಲು' ಎಂಬ ದೇಶಭಕ್ತಿ ಗೀತೆಯ ಯುಟೂಬ್ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದ್ದು, ಹಾಡಿನ ಪೋಸ್ಟರಗಳನ್ನು ತಂಡದ ಸದಸ್ಯರು ಶನಿವಾರ ಬಿಡುಗಡೆಗೊಳಿಸಿದರು.
ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಸೇರಿದ ತಂಡದ ಸದಸ್ಯರು 'ಬೈಲಹೊನಗಲ್ಲು' ಹೆಸರಿನಿಂದ ಮೂಡಿ ಬಂದಿರುವ ಯೂಟೂಬ್ ಹಾಡಿನ ಹಿಂದೆ ಬೈಲಹೊಂಗಲ ನಾಡಿನ ಕ್ರಾಂತಿಕಾರಿ ಸೇನಾನಿಗಳು ದೇಶಕ್ಕೆ ನೀಡಿದ ಅತ್ಯಅಮೂಲ್ಯ ಕೊಡುಗೆ, ತ್ಯಾಗ, ಬಲಿದಾನ, ದೇಶಕ್ಕೆ ಸಲ್ಲಿಸಿದ ಅಮೋಘ ಕೊಡುಗೆ ಕುರಿತು ಹಾಡಿನಲ್ಲಿ ಪ್ರಸ್ತುತಪಡಿಸಲಾಗಿದೆ. ಸೂರ್ಯ ಮುಳುಗದ ಸಾಮ್ರಾಜ್ಯ ಎದುರು ಕೆಚ್ಚೆದೆಯಿಂದ ಹೋರಾಡಿ ಪರಾಕ್ರಮ ಮೆರೆದ ವೀರರಾಣಿ ಕಿತ್ತೂರು ಚನ್ನಮ್ಮ, ಸಂಗೊಳ್ಳಿ ರಾಯಣ್ಣ, ಅಮಟೂರು ಬಾಳಪ್ಪ ಸೇರಿದಂತೆ ನಾಡಿನ ಸ್ವಾತಂತ್ರ್ಯ ಸೇನಾನಿಗಳಿಗೆ ಈ ಹಾಡನ್ನು ಅರ್ಿಸಲಾಗಿದೆ' ಎಂದರು. ಸಂಕಲನಕಾರ ದರ್ಶನಕುಮಾರ ಕುಲಕರ್ಣಿ ಮಾತನಾಡಿ, 'ಬೈಲಹೊನಗಲ್ಲು' ಎಂಬ ಹೆಸರಿನ ಕ್ರಾಂತಿಕಾರಿ ಹಾಡು ನಾಡಿನಾದ್ಯಂತ ಚನ್ನಾಗಿ ಮೂಡಿ ಬಂದಿದೆ. ಇದಕ್ಕೆ ಸಹಕರಿಸಿದ ನಾಡಿನ ದಾನಿಗಳಿಗೆ, ಪ್ರಾಯೋಜಕತ್ವವಹಿಸಿದ ಹಿರಿಯರಿಗೆ ತಂಡದ ಸದಸ್ಯರು ಋಣಿಯಾಗಿದ್ದೇವೆ. 'ಬೈಲಹೊನಗಲ್ಲು' ಹಾಡಿಗೆ ಕೆಡಿ ಸಂಕೇತ ಮುಳಗುಂದ ಸಾಹಿತ್ಯ ಒದಗಿಸಿದ್ದಾರೆ. ಗಾಯಕರಾದ ಡಿ.ಎಸ್.ಪ್ರವೀಣ್, ಚೇತನ ಚೌಹಾನ್, ಸುಜಾತಾ ಸಣ್ಣಕ್ಕಿ ಸುಶ್ರಾವ್ಯವಾಗಿ ಹಾಡು ಹಾಡಿದ್ದಾರೆ. ವರುಣ ಕಟ್ಟಿ, ಪ್ರವೀಣ ವ್ಯಾಪಾರಿ ಪ್ರಚಾರಕರಾಗಿ ಕಾರ್ಯನಿರ್ವಹಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹಾಡು ವೀಕ್ಷಿಸಿದ ಕಲಾಪ್ರೇಕ್ಷಕರು ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದಾರೆ. ಇದು ಹೀಗೆ ಮುಂದುವರೆದು ನಮ್ಮ ಹಾರೈಸಬೇಕು' ಎಂದರು.
ವಕೀಲ ವಿಜಯ ಪತ್ತಾರ, ನಿವೃತ್ತ ಯೋಧ ಆನಂದ ತೋಟಗಿ ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿ, 'ಯುವ ಪ್ರತಿಭೆಗಳು ಹೊಸ ಪ್ರಯತ್ನ ಮಾಡಿದ್ದು, ನಾಡಿನ ಜನತೆ ಆಶೀರ್ವದಿಸಬೇಕು. ಎಲ್ಲರು ಸಹಾಯ, ಸಹಕಾರ ನೀಡಿ ಬೆಂಬಲಿಸಬೇಕು' ಎಂದರು.