ಶ್ರೀನಗರ ಕಾರ್ಯಾಚರಣೆ- ಭದ್ರತಾಪಡೆ ಗುಂಡಿಗೆ ಉಗ್ರನ ಬಲಿ
ಶ್ರೀನಗರ, ಡಿಸೆಂಬರ್ 30: ಜಮ್ಮು ಮತ್ತು ಕಾಶ್ಮೀರದ ಶ್ರೀನಗರದ ಲಾವಾಯ್ಪೊರಾ ಪ್ರದೇಶದಲ್ಲಿ
ಭದ್ರತಾಪಡೆಗಳು ನಡೆಸಿದ ಶೋಧನಾ ಕಾರ್ಯಾಚರಣೆ ಸಮಯದಲ್ಲಿ
ಭದ್ರತಾಪಡೆಯ ಗುಂಡಿಗೆ ಓರ್ವ ಉಗ್ರ ಹತನಾಗಿದ್ದಾನೆ.
ಈ
ನಡುವೆ ಎನ್ಕೌಂಟರ್ನಿಂದಾಗಿ ಬಾರಾಮುಲ್ಲಾ, ಸೊಪೋರ್,
ಗುಲ್ಮಾರ್ಗ್ ಮತ್ತು ಇತರ ಪ್ರದೇಶಗಳಿಂದ ಶ್ರೀನಗರದ ಕಡೆಗೆ ಸಂಚಾರವನ್ನು ಕೇಂದ್ರ ಕಾಶ್ಮೀರ ಜಿಲ್ಲೆಯ
ಬದ್ಗಂ ಮೂಲಕ ತಿರುಗಿಸಲಾಗಿದೆ.
ಲಾವಾಯ್ಪೊರಾದಲ್ಲಿ
ಉಗ್ರರು ಅಡಗಿರುವ ಖಚಿತ ಮಾಹಿತಿ ತಿಳಿದು ಕಳೆದ ರಾತ್ರಿಯಿಂದಲೇ
ಜಮ್ಮು ಮತ್ತು ಕಾಶ್ಮೀರ ಪೊಲೀಸರು ಹಾಗೂ ಭದ್ರತಾಪಡೆಗಳು ಜಂಟಿಯಾಗಿ ಕಾರ್ಯಾಚರಣೆಗಿಳಿದಿದ್ದವು. ಈ
ವೇಳೆ ಅಡಗಿ ಕುಳಿತಿದ್ದ ಉಗ್ರರು ಏಕಾಏಕಿ ಗುಂಡಿನ
ದಾಳಿ ನಡೆಸಿದ್ದಾರೆ ನಂತರ ಕೂಡಲೇ ಸ್ಥಳವನ್ನು ಸುತ್ತುವರೆದ ಭದ್ರತಾಪಡೆಗಳು ಎನ್ಕೌಂಟರ್ ನಡೆಸಿದ ಪರಿಣಾಮ ಉಗ್ರನೊಬ್ಬ ಹತನಾಗಿದ್ದಾನೆ ಎಂದು ವರದಿಗಳು
ತಿಳಿಸಿವೆ.
ಹತ್ಯೆಯಾದ
ಉಗ್ರ ಯಾವ ಭಯೋತ್ಪಾದಕ ಸಂಘಟನೆಗೆ ಸೇರಿದ್ದಾನೆಂಬುದು ಇನ್ನೂ ತಿಳಿದುಬಂದಿಲ್ಲ. ಸ್ಥಳದಲ್ಲಿ ಕಾರ್ಯಾಚರಣೆ
ಮುಂದುವರೆದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಪ್ರದೇಶದಲ್ಲಿ ಭಾರಿ ಗುಂಡಿನ ಚಕಮಕಿಯಲ್ಲದೆ
ಹಲವು ದೊಡ್ಡ ಸ್ಫೋಟಗಳು ಸಂಭವಿಸಿದ್ದು ಪರಿಣಾಮ ಗ್ರಾಮದ ನಿವಾಸಿಗಳು ತಮ್ಮ ಮನೆಗಳಲ್ಲಿ ಉಳಿದಿದ್ದಾರೆ ಎನ್ನಲಾಗಿದೆ .