ಬರಹಗಾರರ ಮನೋಭೂಮಿಕೆ ಹದಗೊಳ್ಳಬೇಕಿದೆ: ಎಲ್.ಎಸ್.ಶಾಸ್ತ್ರಿ
ಗೋಕಾಕ: ನಮ್ಮಲ್ಲಿ ಒಳ್ಳೆಯ ಸಾಹಿತ್ಯ ಮತ್ತು ಕೆಟ್ಟ ಸಾಹಿತ್ಯವೆಂಬ ಎರಡೇ ಪ್ರಕಾರಗಳಿವೆ. ಬರೆದದ್ದೆಲ್ಲ ಕಾವ್ಯವಾಗುವುದಿಲ್ಲ ಮತ್ತು ಸಾಹಿತ್ಯವಾಗುವುದಿಲ್ಲ. ಕಾವ್ಯದ ಗುಣಲಕ್ಷಣ ತಿಳಿದು ರಚಿಸಿದರೆ ಕಾವ್ಯವಾಗಬಲ್ಲದು ಎಂದು ಬೆಳಗಾವಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಎಲ್.ಎಸ್.ಶಾಸ್ತ್ರಿ ಹೇಳಿದರು.
ರವಿವಾರದಂದು ನಗರದ ಸಿದ್ಧಾರ್ಥ ಲಲಿತಕಲಾ ಮಹಾವಿದ್ಯಾಲಯದ ಆವರಣದಲ್ಲಿ ಜರುಗಿದ ಗೋಕಾಕ ತಾಲೂಕಾ ಚುಟುಕು ಸಾಹಿತ್ಯ ಪರಿಷತ್ತಿನ ನೂತನ ಘಟಕ ಉದ್ಘಾಟನೆ, ಜೇನ್ಗೊಡ ಪುಸ್ತಕ ಲೋಕಾರ್ಪಣೆ, ಚುಟುಕು ಸಾಹಿತ್ಯ ಸಿರಿ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಚುಟುಕು ಕಾವ್ಯಗೋಷ್ಠಿಯ ಅಧ್ಯಕ್ಷತೆವಹಿಸಿ ಮಾತನಾಡಿದರು.
ಸಮಾರಂಭವನ್ನು ಜಿ.ಬಿ.ತಾಂವಶಿ ಪೌಂಡೇಶನ್ ಅಧ್ಯಕ್ಷ ಮಹಾಂತೇಶ ತಾಂವಶಿ ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿದರು. ಜೇನ್ಗೊಡ ಪುಸ್ತಕವನ್ನು ಹಿರಿಯ ಸಾಹಿತಿ ಪ್ರೊ.ಚಂದ್ರಶೇಖರ ಅಕ್ಕಿ ಲೋಕಾರ್ಪಣೆಗೊಳಿಸಿ ಮಾತನಾಡಿದರು. ಬಳ್ಳಾರಿಯ ಕೇಂದ್ರ ಕಾರಾಗೃಹ ಸಹಾಯಕ ಅಧೀಕ್ಷಕ ಅಂಬರೀಶ ಪೂಜಾರ ಹಾಗೂ ಕವಯಿತ್ರಿ ವಿದ್ಯಾ ರೆಡ್ಡಿ ಅವರಿಗೆ ಚುಟುಕು ಸಾಹಿತ್ಯ ಸಿರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಮುಖ್ಯ ಅತಿಥಿಗಳಾಗಿ ಡಾ. ಸಿ.ಕೆ.ಜೋರಾಪೂರರವರು ಮಾತನಾಡುತ್ತಾ, ಕಾವ್ಯ ಹೊರಹೊಮ್ಮಬೇಕಾದರೆ ನಿರಂತರ ಅಧ್ಯೇಯನಶೀಲರಾಗಬೇಕು. ಸಾಕಷ್ಟು ಕೃತಿಗಳನ್ನು ಓದಬೇಕು. ಯತೇಚ್ಛವಾಗಿ ವಿಷಯ ಸಂಗ್ರಹಣೆ ಇಲ್ಲದೇ ಕಾವ್ಯ ಹೊರ ಹೊಮ್ಮಲಾರದು. ಪ್ರಚಲಿತ ವಿಷಯಗಳ ಮೇಲೆ ಬೆಳಕು ಚೆಲ್ಲುವ ಕಾವ್ಯ ರಚನೆಯಾಗಬೇಕೆಂದು ಹೇಳಿದರು.ತಾಲೂಕಾಧ್ಯಕ್ಷ ಜಯಾನಂದ ಮಾದರ ಮತ್ತು ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರಿಸಲಾಯಿತು. ಉಪಾಧ್ಯಕ್ಷ ಎಮ್.ಎ.ಪಾಟೀಲ ತಾಲೂಕಾ ಗೌರವಾಧ್ಯಕ್ಷ ಡಾ. ಲಕ್ಷ್ಮಣ ಚೌರಿ ಕಾಯರ್ಾಧ್ಯಕ್ಷ ಈಶ್ವರಚಂದ್ರ ಬೆಟಗೇರಿ ವೇದಿಕೆ ಮೇಲೆ ಉಪಸ್ಥಿತರಿದ್ದರು.
ನಂತರದಲ್ಲಿಯ ಚುಟುಕು ಕಾವ್ಯಗೋಷ್ಟಿಯಲ್ಲಿ ಅರುಣ ಅಕ್ಕಿ, ಸುರೇಶ ಮುದ್ದಾರ, ಸುಭಾಷ ವಾಲಿಕಾರ, ಗೋಪಾಲ ಶೆಟ್ಟಿ, ಏಸ್.ಆರ್.ನಲವಡೆ, ಬಿ.ಬಿ.ಪಟಗುಂದಿ, ಆನಂದ ಮಾಳವದೆ, ಎಮ್.ಬಿ.ಬಳಗಾರ, ರಾಯಪ್ಪಾ ಗುದಗನವರ, ಮಾರುತಿ ದೇಸಾಯಿ, ನಾಗಮ್ಮ ಪೂಜಾರ, ಶಿರೂರ ಶ್ರೀಶೈಲ ಚುಟುಕು ವಾಚನ ಮಾಡಿದರು. ಉದ್ದಣ್ಣಾ ಗೋಡೇರ ಪ್ರಾಥರ್ಿಸಿದರು, ಆನಂದ ಸೋರಗಾವಿ ಸ್ವಾಗತಿಸಿದರು. ಶೈಲಜಾ ಕೊಕ್ಕರಿ ನೀರೂಪಿಸಿ ವಂದಿಸಿದರು